ಮಂಗಳೂರು: ಕ್ರಿಸ್ಮಸ್ ಸಿದ್ಧತೆಗಳು ಆರಂಭವಾಗಿವೆ. ಕರಾವಳಿಯಲ್ಲಿ ಈ ಬಾರಿ ಹಸಿರು ಕ್ರಿಸ್ಮಸ್ ಆಚರಿಸಲು ನಗರದ ಪೇಪರ್ ಸೀಡ್ ಸಂಸ್ಥೆ ಪ್ರಯತ್ನ ನಡೆಸಿದೆ. ಕ್ರಿಸ್ಮಸ್ ಟ್ರೀ ಶೃಂಗಾರಕ್ಕೆ ಬೇಕಾದ ಸ್ನೋಮ್ಯಾನ್, ಸಾಂತಾಕ್ಲೂಸ್, ಗಂಟೆಗಳು, ನಕ್ಷತ್ರಗಳನ್ನು ಪೇಪರ್ಗಳಿಂದಲೇ ತಯಾರಿಸಿದೆ.

‘ಕಳೆದ ವರ್ಷವೇ ಇಂತಹ ಪ್ರಯತ್ನವನ್ನು ಸಣ್ಣ ಪ್ರಮಾಣದಲ್ಲಿ ಮಾಡಿದ್ದೆವು. ಆದರೆ, ಸಿಎಎ ಪ್ರತಿಭಟನೆ ಮತ್ತಿತರ ಘಟನೆಗಳಿಂದಾಗಿ ಪೂರ್ಣಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಈ ಬಾರಿ ನಮ್ಮ ಪ್ರಯತ್ನವನ್ನು ಹೆಚ್ಚಿಸಿದ್ದು, ಬೆಲ್, ಸಾಂತಾಕ್ಲೂಸ್, ನಕ್ಷತ್ರಗಳನ್ನು ಮರುಬಳಕೆ ಮಾಡಬಹುದಾದ ಪೇಪರ್ನಿಂದ ತಯಾರಿಸಿದ್ದೇವೆ. ರೀನಾ ಡಿಸೋಜ ನೇತೃತ್ವದಲ್ಲಿ 8 ಮಂದಿ ಮಹಿಳೆಯರ ತಂಡ ಈ ಕಾರ್ಯದಲ್ಲಿ ನಿರತವಾಗಿದೆ’ ಎಂದು ಸಂಸ್ಥೆಯ ನಿತಿನ್ ವಾಸ್ ತಿಳಿಸಿದ್ದಾರೆ.

ಎಲ್ಲ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಆದ್ಯತೆ ನೀಡಿದ್ದೇವೆ. ಸ್ವಾತಂತ್ರ್ಯೋತ್ಸವ, ಗಣೇಶ ಚತುರ್ಥಿ, ರಕ್ಷಾ ಬಂಧನದ ಸಂದರ್ಭದಲ್ಲಿಯೂ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಕ್ರಿಸ್ಮಸ್ ಸಂದರ್ಭದಲ್ಲೂ ಇದನ್ನು ಮುಂದುವರಿಸುತ್ತಿದ್ದೆವೆ ಎನ್ನುತ್ತಾರೆ ಅವರು.

ಬೀಜ ವಿತರಣೆ:

ಇನ್ನೊಂದೆಡೆ ಸೈಬರ್ ತಜ್ಞ ಅನಂತಪ್ರಭು ಜಿ. ಹಾಗೂ ಅವರ ಸ್ನೇಹಿತ ಅಜಾಫರ್ ರಝಾಕ್ ಅವರು ವಿಶಿಷ್ಟವಾಗಿ ಕ್ರಿಸ್ಮಸ್ ಆಚರಣೆಗೆ ತಯಾರಿ ನಡೆಸಿದ್ದಾರೆ.

ಈ ಬಾರಿಯ ಕ್ರಿಸ್ಮಸ್ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಸಂದೇಶ ನೀಡುವ ಯೋಜನೆ ರೂಪಿಸಲಾಗಿದೆ. ಅಲಂಕರಿಸಿದ ಕ್ರಿಸ್ಮಸ್ ಟ್ರಿಯನ್ನು ಟೆಂಪೋದಲ್ಲಿ ನಗರದ ಹಲವೆಡೆ ಕೊಂಡೊಯ್ಯಲಾಗುವುದು. ಕ್ರಿಸ್ಮಸ್ ಟ್ರೀನಲ್ಲಿ ಪಶ್ಚಿಮ ಘಟ್ಟದ ವಿವಿಧ ಸಸ್ಯಗಳ ಬೀಜಗಳನ್ನು ಒಳಗೊಂಡ 500 ಪ್ಯಾಕೆಟ್ಗಳನ್ನು ಅಳವಡಿಸಲಾಗುವುದು. ಈ ಟೆಂಪೋ ಸಂಚರಿಸುವ ಸ್ಥಳಗಳಲ್ಲಿ ಆಯಾ ಪ್ರದೇಶದ ಜನರಿಗೆ ಬೀಜದ ಪ್ಯಾಕೆಟ್ಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.