ಮಂಗಳೂರು: ಕರಾವಳಿಯ ಅಭಿವೃದ್ಧಿ ಚಟುವಟಿಕೆಗೆ ಬಲತುಂಬುವ ಆಶಯ ಇಟ್ಟುಕೊಂಡು ಸರ್ಕಾರ ಕರಾವಳಿ ಅಭಿವೃದ್ದಿ ಮ೦ಡಳಿ ಕಾಯ್ದೆ–2023 ಅನ್ನು ರೂಪಿಸಿ ಅದರಡಿ, ‘ಕರಾವಳಿ ಅಭಿವೃದ್ಧಿ ಮಂಡಳಿ’ ಅನ್ನು ಸ್ಥಾಪಿಸಿದೆ. ಮಂಡಳಿಗೆ ಎಂ.ಎ.ಗಫೂರ್ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ಈಚೆಗೆ ನೇಮಿಸಿದೆ.

ಈ ಹಿಂದೆ ಇದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಹಾಗೂ ಸಿಬ್ಬಂದಿಯನ್ನೇ ಬಳಸಿಕೊಂಡು ಮಂಡಳಿ ಕಾರ್ಯನಿರ್ವಹಣೆಯನ್ನೂ ಶುರು ಮಾಡಿದೆ. ಮಂಡಳಿಯ ಮೊದಲ ಸಭೆ ಇದೇ ಸೋಮವಾರ (ನ.17ರಂದು) ಉಡುಪಿಯಲ್ಲಿ ಆಯೋಜನೆಯಾಗಿದೆ. ಮಂಡಳಿಯ ಮುಂದಿನ ಹಾದಿಯ ರೂಪರೇಷೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಈ ಹಿಂದೆ ಇದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಡಳಿಯ ಕಾರ್ಯ ನಿರ್ವಹಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕರಾವಳಿ ಪ್ರದೇಶದ (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು) ಅಭಿವೃದ್ಧಿಗಾಗಿ ವಾರ್ಷಿಕ ಯೋಜನೆ ಸಿದ್ಧಪಡಿಸುವಿಕೆ, ಅದರ ಅನುಷ್ಠಾನದ ಉಸ್ತುವಾರಿ ಮತ್ತು ಮೇಲ್ವಿಚಾರಣೆಯ ಅಧಿಕಾರವನ್ನು 2024ರ ಜೂನ್ 10ರಂದು ರಾಜ್ಯಪತ್ರದಲ್ಲಿ ಪ್ರಕಟವಾಗಿರುವ ‘ಕರಾವಳಿ ಅಭಿವೃದ್ದಿ ಮ೦ಡಳಿ ಕಾಯ್ದೆ–2023’ ಈ ಮಂಡಳಿಗೆ ಕಾನೂನುಬದ್ಧವಾಗಿ ಒದಗಿಸುತ್ತದೆ.

ಮ೦ಡಳಿಯ ಸಭೆ: ಮ೦ಡಳಿಯು ಕನಿಷ್ಠ ಮೂರು ತಿ೦ಗಳಿಗೊಮ್ಮೆಯಾದರೂ ಸಭೆ ಸೇರಬೇಕು. ಅವಶ್ಯಕತೆ ಇದ್ದರೆ ಅಧ್ಯಕ್ಷರು ವಿಶೇಷ ಸಭೆಯನ್ನು ಕರೆಯಬಹುದು. ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟು ಸದಸ್ಯರು ಸಭೆಗೆ ಹಾಜರಿರಬೇಕು.

ಅನುಷ್ಠಾನ ಸಮಿತಿ: ಮ೦ಡಳಿಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ಇರಲಿದೆ. ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪ೦ಚಾಯತಿಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಕರಾವಳಿ ಪ್ರದೇಶದ ನೀರಾವರಿ ಯೋಜನೆಗಳಿಗಾಗಿ ರಚಿಸಲಾದ ಕರಾವಳಿ ಪ್ರದೇಶಾಭಿವೃದ್ಧಿ ಮ೦ಡಳಿಯ ಆಡಳಿತಗಾರ, ಕೃಷಿ ನಿರ್ದೇಶಕರು, ತೋಟಗಾರಿಕೆ ನಿರ್ದೇಶಕರು; ಪಶುಪಾಲನೆ ನಿರ್ದೇಶಕರು, ಮೀನುಗಾರಿಕೆ ನಿರ್ದೇಶಕರು; ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಸೇವೆಗಳ ನಿರ್ದೇಶಕರು; ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಅಥವಾ ನಿರ್ದೇಶಕರು; ಕರಾವಳಿ ಪ್ರದೇಶದ ಅಧಿಕಾರವ್ಯಾಪ್ತಿಯನ್ನು ಹೊ೦ದಿರುವ ಮುಖ್ಯ ಎಂಜಿನಿಯರ್ಗಳು, ಬಂದರುಗಳ ನಿರ್ದೇಶಕರು ಅಥವಾ ಆಯುಕ್ತರು; ಕರಾವಳಿಯ ಅರಣ್ಯಗಳ ಮುಖ್ಯ ಸಂರಕ್ಷಣಾಧಿಕಾರಿ; ಸರ್ಕಾರವು ನಾಮನಿರ್ದೇಶನ ಮಾಡುವ ವಿಶ್ವವಿದ್ಯಾಲಯಗಳ ಕುಲಪತಿಗಳು, ಸರ್ಕಾರದಿ೦ದ ನೇಮಕಗೊಳ್ಳುವ ಇತರ ಅಧಿಕಾರಿಗಳು ಇದರ ಸದಸ್ಯರಾಗಿರುತ್ತಾರೆ. ಈ ಸಮಿತಿಯೂ ಮೂರು ತಿಂಗಳಿಗೊಮ್ಮೆಯಾದರೂ ಸಭೆ ಸೇರಬೇಕು.

ಮ೦ಡಳಿಯು ಕರಾವಳಿ ಪ್ರದೇಶದ ಅಭಿವೃದ್ಧಿಗೆ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆದು ಜಾರಿಗೊಳಿಸಲಿದೆ. ಕರಾವಳಿಯಲ್ಲಿನ ವಿವಿಧ ಅಭಿವೃದ್ಧಿ ಇಲಾಖೆಗಳು (ಪೊಲೀಸ್ ಇಲಾಖೆ ಹೊರತಾಗಿ), ಜಿಲ್ಲಾ ಪ೦ಚಾಯಿತಿಗಳು ಮತ್ತು ಮಂಡಳಿಯಿ೦ದ ಮಾನ್ಯತೆ ಪಡೆದ ಸರ್ಕಾರೇತರ ಸಂಸ್ಥೆಗಳು, ಯೋಜನೆಗೆ ಅನುಸಾರವಾಗಿ ರೂಪಿಸಿದ ಕಾರ್ಯಕ್ರಮಗಳನ್ನು ಮ೦ಡಳಿಯು ಅನುಮೋದಿಸಲಿದೆ.

ಮ೦ಡಳಿಯು ಯೋಜನೆಗೆ ಸ೦ಬ೦ಧಪಟ್ಟಂತೆ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಅಭಿವೃದ್ಧಿ ಇಲಾಖೆಗಳ, ಜಿಲ್ಲಾ ಪ೦ಚಾಯಿತಿಗಳ ಮತ್ತು ಮಂಡಳಿಯಿ೦ದ ಮಾನ್ಯತೆ ಪಡೆದ ಸರ್ಕಾರೇತರ ಸ೦ಸ್ಥೆಗಳ ವಾರ್ಷಿಕ ಯೋಜನೆಗಳು ಮತ್ತು ಅವುಗಳ ಕಾರ್ಯನಿರ್ವಹಣೆಯ ಪ್ರಗತಿಯ ಉಸ್ತುವಾರಿ ಮತ್ತು ಪುನರ್
ಪರಿಶೀಲನೆ ನಡೆಸುವ, ಸಮನ್ವಯ ಕಾಪಾಡುವ ಅಧಿಕಾರ ಮಂಡಳಿಗೆ ಇದೆ. ಈ ಕುರಿತು ಸರ್ಕಾರಕ್ಕೆ ಸಲಹೆಯನ್ನು ನೀಡಬಹುದು.

ಕರಾವಳಿಯಲ್ಲಿ ಕಾರ್ಯ ನಿರ್ವಹಿಸುವ ಅಭಿವೃದ್ಧಿ ಇಲಾಖೆಗಳು, ಜಿಲ್ಲಾ ಪ೦ಚಾಯಿತಿ ಮತ್ತು ಮ೦ಡಳಿಯಿ೦ದ ಮಾನ್ಯತೆ ಪಡೆದ ಸರ್ಕಾರೇತರ ಸ೦ಸ್ಥೆಗಳ ಮೂಲಕ ವಾರ್ಷಿಕ ಯೋಜನೆ ಮತ್ತು ಪ೦ಚವಾರ್ಷಿಕ ಯೋಜನೆಗಳ ಅನುಷ್ಠಾನ ಮ೦ಡಳಿ ಜವಾಬ್ದಾರಿ. ವಾರ್ಷಿಕ ಯೋಜನೆಯಡಿಯಲ್ಲಿ ತನಗೆ ಹಂಚಿಕೆ ಮಾಡಲಾದ ಮೊಬಲಗು ಸಾಲದಿದ್ದರೆ ಒ೦ದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ನಿಧಿಗಳ ಪುನರ್ವಿನಿಯೋಗ ಮಾಡಬಹುದು.

ಮಂಡಳಿಯ ಸಂರಚನೆ ಸರ್ಕಾರವು ಸದಸ್ಯರ ಪೈಕಿ ಒಬ್ಬರನ್ನು ಮ೦ಡಳಿಯ ಅಧ್ಯಕ್ಷರನ್ನಾಗಿ ನೇಮಿಸಬಹುದು. ಸರ್ಕಾರದಿಂದ ನೇಮಕಗೊ೦ಡ ಅಧ್ಯಕ್ಷರು ಮತ್ತು ಇತರ ಸದಸ್ಯರು 3 ವರ್ಷಗಳವರೆಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ.

ಸದಸ್ಯರು ಯಾರು:

* ಕರಾವಳಿ ಜಿಲ್ಲೆಗಳನ್ನು ಭಾಗಶಃವಾಗಿ ಅಥವಾ ಪೂರ್ಣ ಪ್ರಮಾಣದಲ್ಲಿ ಪ್ರತಿನಿಧಿಸುವ ಸ೦ಸದರು ಹಾಗೂ ವಿಧಾನಸಭಾ ಸದಸ್ಯರು

* ರಾಜ್ಯದ ಕರಾವಳಿಯಲ್ಲಿ ಮತದಾರರಾಗಿರುವ ಹಾಗೂ ನೋಡಲ್ ಜಿಲ್ಲೆಗಳು ಅಥವಾ ತಾಲ್ಲೂಕುಗಳಿಂದ ಚುನಾಯಿತರಾದ ರಾಜ್ಯಸಭೆ ಸದಸ್ಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರು

* ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು

* ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಗರಿಷ್ಠ ಹತ್ತು ಮ೦ದಿ ಸದಸ್ಯರು. ( ಇಬ್ಬರು ಪರಿಶಿಷ್ಟ ಜಾತಿ ಒಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು)

* ಮ೦ಡಳಿಯ ಕಾರ್ಯದರ್ಶಿ

* ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು

ಮ೦ಡಳಿಯ ಉದ್ದೇಶ

* ಪಶುಸ೦ಗೋಪನೆ ಮೀನುಗಾರಿಕೆ ಒಳನಾಡು ಜಲ ಸಾರಿಗೆ ಮತ್ತುಪ್ರವಾಸೋದ್ಯಮಕ್ಕೆ ಉತ್ತೇಜನ * ಕರಾವಳಿ ಪ್ರದೇಶದ ಜಲ ಸ೦ಪನ್ಮೂಲಗಳ ಅಭಿವೃದ್ಧಿ ಮತ್ತು ಸ೦ರಕ್ಷಣೆಗೆ ಉತ್ತೇಜನ.

* ಮಳೆಯಾಶ್ರಿತ ಕೃಷಿ ಪದ್ಧತಿಯಲ್ಲಿ ಮಣ್ಣು ನೀರು ಸ೦ರಕ್ಷಣೆ ಕ್ರಮ ಅಳವಡಿಕೆಗೆ ಉತ್ತೇಜನ

* ಅರಣ್ಯ ಅಭಿವೃದ್ದಿಗೆ ಉತ್ತೇಜನ

* ತೋಟಗಾರಿಕೆ ಅಭಿವೃದ್ಧಿಗೆ ಉತ್ತೇಜನ

* ಕೃಷಿ ಮತ್ತು ಕೃಷಿ ಸ೦ಬ೦ಧಿತ ವಲಯಗಳ ಚಟುವಟಿಕೆಗೆ ಉತ್ತೇಜನ * ಸರ್ಕಾರವು ನಿರ್ದೇಶಿಸುವ ಇತರೆ ಕಾರ್ಯಕ್ರಮಗಳ ಜಾರಿ

ಮ೦ಡಳಿಗೆ ಪ್ರತ್ಯೇಕ ನಿಧಿ

ಮಂಡಳಿಯು ‘ಕರಾವಳಿ ಅಭಿವೃದ್ಧಿ ಮ೦ಡಳಿ ನಿಧಿ’ಯನ್ನು ಹೊಂದಲಿದೆ. ಕೇ೦ದ್ರ ಸರ್ಕಾರ ರಾಜ್ಯ ಸರ್ಕಾರ ಯಾವುದೇ ಸ್ಥಳೀಯ ಮಂಡಳಿ ನಿಕಾಯದ ಅನುದಾನಗಳು ಅಥವಾ ಯಾವುದೇ ವ್ಯಕ್ತಿ ನೀಡುವ ಧನಸಹಾಯಗಳು ದೇಣಿಗೆಗಳು ಮತ್ತು ದಾನಗಳು ಮಂಡಳಿಯು ಪಡೆಯುವ ಸಾಲ ಇತರ ಯಾವುದೇ ಮೂಲದಿ೦ದ ಸ್ವೀಕರಿಸುವ ಅನುದಾನಗಳ ಎಲ್ಲ ಮೊತ್ತವೇ ಈ ನಿಧಿ. ರಾಜ್ಯ ಸರ್ಕಾರವು ವಾರ್ಷಿಕ ಯೋಜನೆಯಲ್ಲಿ ಮಂಡಳಿಗೆ ಹಣಕಾಸುಹ೦ಚಿಕೆಯನ್ನು ಮಾಡಲಿದೆ. ಮ೦ಡಳಿಯ ಆಡಳಿತಾತ್ಮಕ ವೆಚ್ಚಗಳಿಗೆ ಅನುದಾನ ನೀಡಲಿದೆ. ಕಾಲಕಾಲಕ್ಕೆ ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಪಡೆದು ಮಂಡಳಿಯು ಸಾಲವಾಗಿ ಪಡೆಯಬಹುದು. ಮ೦ಡಳಿಯ ವಾರ್ಷಿಕ ವರದಿಯನ್ನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಂದೆ ಮಂಡಿಸಬೇಕು. ಮ೦ಡಳಿ ಪ್ರತಿವರ್ಷ ಸ್ವಂತ ಆಯ ವ್ಯಯ ಯೋಜನೆ ಸಿದ್ದಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಬೇಕು.

‘ಕರಾವಳಿಯ ಏಳಿಗೆಗೆ ಪೂರಕ’

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮೇಲ್ದರ್ಜೆಗೇರಿಸಿ ಕರಾವಳಿ ಅಭಿವೃದ್ಧಿ ಮಂಡಳಿಯನ್ನು ರಚಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸಿದೆ. ಕರಾವಳಿಯ ಮೂರು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಶಕ್ತಿ ತುಂಬಲಿದೆ. ಇಲ್ಲಿನ ಉದ್ಯೋಗಾವಕಾಶ ಸೃಷ್ಟಿ ಪ್ರವಾಸೋದ್ಯಮ ಅಭಿವೃದ್ಧಿ ಜಲಸಂಪನ್ಮೂಲ ಮೀನುಗಾರಿಕೆ ಮತ್ತಿತರ ಕ್ಷೇತ್ರಗಳ ಪ್ರಗತಿಗೆ ಮಂಡಳಿ ಸ್ಪಷ್ಟ ಚೌಕಟ್ಟನ್ನು ರೂಪಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ಸಾಂಸ್ಕೃತಿಕವಾಗೂ ಸಮೃದ್ಧವಾಗಿರುವ ಕರಾವಳಿ ಪ್ರಗತಿಯ ವಿಷಯದಲ್ಲಿ ಮೇಲ್ಪಂಕ್ತಿ ಹಾಕಿಕೊಡಲು ಈ ಮಂಡಳಿಯು ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ. ಪ್ರವಾಸೋದ್ಯಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯವ ಆಕಾಂಕ್ಷೆ ನಮ್ಮದು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ನಾಲ್ವರು ಪ್ರಭಾವಿ ಸಂಸದರು ಮಂಡಳಿಯ ಸದಸ್ಯರಾಗಿರುವುದರಿಂದ ಕರಾವಳಿಯ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂಬ ನಂಬಿಕೆ ನನ್ನದು ಎಂ.ಎ.ಗಫೂರ್ ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಮಂಡಳಿ

ರಚನೆಯಾಗಿಲ್ಲ ನಿಯಮ ಸಿಕ್ಕಿಲ್ಲ ಅನುದಾನ!

ಕರಾವಳಿಯ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಜಾರಿಯಾಗಿ 17 ತಿಂಗಳುಗಳು ಕಳೆದರೂ ಸರ್ಕಾರ ಇನ್ನೂ ಇದರ ನಿಯಮಾವಳಿಗಳಿಗೆ ಅಂತಿಮ ರೂಪ ನೀಡಿಲ್ಲ. ಮಂಡಳಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಇದರಿಂದ ಹಿನ್ನಡೆಯಾಗಿದೆ. ‘ಮಂಡಳಿಯ ನಿಯಮಾವಳಿಗೆ ಅಂತಿಮ ರೂಪ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಮಂಡಳಿಗೆ ವಾರ್ಷಿಕ ₹2500 ಕೋಟಿ ಅನುದಾನ ನೀಡುವುದಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಮಂಡಳಿಗೆ ಅಧ್ಯಕ್ಷರನ್ನು ಸರ್ಕಾರ ನೇಮಿಸಿದೆಯಾದರೂ ಈ ವರ್ಷ ಪ್ರತ್ಯೇಕ ಅನುದಾನವನ್ನು ಹಂಚಿಕೆ ಮಾಡಿಲ್ಲ. ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡಿದ್ದ ₹ 9 ಕೋಟಿ ಅನುದಾನವನ್ನು ನೆಚ್ಚಿಕೊಂಡು ಮಂಡಳಿ ಕಾರ್ಯಾಚರಿಸುತ್ತಿದೆ. ‘ಮುಂದಿನ ಬಜೆಟ್ನಲ್ಲಿ ಸರ್ಕಾರ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ’ ಎಂದು ಎಂ.ಎ.ಗಫೂರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.