ಮಂಗಳೂರು: ‘ದೇಶದ ಎಲ್ಲ ಸಮಸ್ಯೆಗಳಿಗೆ ಔಷಧ ನೀಡುವಂತಹ ಗ್ರಂಥ ಸಂವಿಧಾನ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ನಡೆಸಿದರೆ ದೇಶ ಬಲಿಷ್ಠವಾಗುವುದರ ಜೊತೆಗೆ ಇನ್ನಷ್ಟು ಪ್ರಗತಿಯನ್ನು ಸಾಧಿಸಲು ಸಾಧ್ಯ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಎಲ್ಲ ಪ್ರಜೆಗಳಿಗೂ ಘನತೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದಿಂದ ಕೂಡಿದ ಬದುಕು ಒದಗಿಸಿದ್ದು ಸಂವಿಧಾನ. ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ನಿರ್ಗತಿಕರು ನಿರ್ಭಯವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದು ಸಂವಿಧಾನ. ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನ ಬದ್ಧ ಹಕ್ಕುಗಳಿವೆ. ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವವರೇ ನಿಜವಾದ ದೇಶಪ್ರೇಮಿಗಳು. ಅವರೇ ದೇಶಕ್ಕೆ ಶಕ್ತಿ ತುಂಬುವವರು’ ಎಂದರು.

‘ಬದುಕಿನಲ್ಲಿ ಅಂಬೇಡ್ಕರ್ ಅವರಷ್ಟು ಅವಮಾನವನ್ನು ಬೇರಾರೂ ಎದುರಿಸಿರಲಿಕ್ಕಿಲ್ಲ. ಅವೆಲ್ಲವನ್ನು ಸಹಿಸಿಕೊಂಡ ಅವರು ಸಂವಿಧಾನದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ವಿದ್ಯಾರ್ಥಿಗಳೂ ಎಷ್ಟೇ ಅವಮಾನವಾದರೂ ತಾಳ್ಮೆ ತಪ್ಪಬಾರದು. ಅಂಬೇಡ್ಕರ್ ಅವರಂತೆಯೇ ಮಹತ್ಸಾಧನೆ ಮಾಡಬೇಕು. ಅದಕ್ಕೆ ಬೇಕಾದ ಶಕ್ತಿಯನ್ನು ಸಂವಿಧಾನ ನಿಮಗೆ ಒದಗಿಸಿದೆ’ ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ, ‘ಅಂಬೇಡ್ಕರ್ ಅವರು ದೇಶದ ಭಾಗೋಳಿಕ ಏಕತೆಯ ಜೊತೆಗೆ ಸಾಂಸ್ಕೃತಿಕ ಅಸ್ಮಿತೆಯ ಮೇಲೂ ಅಪಾರ ನಂಬಿಕೆ ಇಟ್ಟಿದ್ದರು. ಆ ಕಾರಣಕ್ಕಾಗಿಯೇ ಅವರು ರಚಿಸಿದ ಸಂವಿಧಾನ ಚಿರನೂತನ. ಅದು ಈ ದೇಶದ ಜನತೆಗೆ ನೀಡಿದ ದಾಖಲೆ ಮಾತ್ರ ಅಲ್ಲ, ಪ್ರತಿಯೊಬ್ಬರ ಜೀವನ ಪದ್ಧತಿಗೆ ತೋರಿಸಿಕೊಟ್ಟ ದಾರಿಯದು’ ಎಂದರು.

‘ಇಡೀ ಜಗತ್ತೇ ಅಸೂಯೆ ಪಡುವ ರೀತಿಯಲ್ಲಿ ಭಾರತವು ಪ್ರಜಾಪ್ರಭುತ್ವ ಮಾದರಿಯನ್ನು ಸೃಷ್ಟಿಸಿದೆ. ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಮೆರಿಕ, ಚೀನಾದಂತಹ ದೇಶಗಳಿಗೂ ಭಯವಿದೆ. ಉತ್ತಮ ಭವಿಷ್ಯವನ್ನು ಹೊಂದಿರುವ ದೇಶದ ಪ್ರಜೆಗಳಾದ ನೀವು ಅಂಬೇಡ್ಕರ್ ಅವರನ್ನು ಓದಿ ತಿಳಿದುಕೊಳ್ಳಬೇಕು. ಯಾವುದೇ ಪೂರ್ವಗ್ರಹ ಪೀಡಿತ ಕಾರ್ಯಸೂಚಿಗಳ ಪ್ರಭಾವಕ್ಕೆ ಒಳಗಾಗದೇ, ಅಂಬೇಡ್ಕರ್ ಅವರ ಮೌಲ್ಯ ಹಾಗೂ ಆಶಯಗಳಿಗೆ ತಕ್ಕಂತೆ ಬದುಕು ಕಟ್ಟಿಕೊಳ್ಳಬೇಕು’ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಉಪನ್ಯಾಸಕ ವಾಸುದೇವ ಬೆಳ್ಳೆ ಭಾಗವಹಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ಎಸ್. ಹೇಮಲತಾ ಸ್ವಾಗತಿಸಿದರು.

ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಸನ್ಮಾನ

ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಲ್ಲಿ 2023–24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬೆಳ್ತಂಗಡಿಯ ಪ್ರತೀಕಾ ಕೆ.ಎಸ್. ಕದ್ರಿಯ ಸುರೇಶ್ 2024–25ನೇ ಸಾಲಿನಲ್ಲಿ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಾದ ಮೂಡುಬಿದಿರೆಯ ಈರವ್ವ ಎಸ್ ಹೂಗಾರ್ ಸುಳ್ಯದ ಕೌಶಿಕ್ ಬಿ.ಜೆ. ಬೆಳ್ತಂಗಡಿಯ ಸನ್ವಿತ್ ಕೆ.ಎ. ಕೊಡಿಯಾಲ್ಬೈಲಿನ ಘೋಮಿ ಬಾಯಿ ಬೆಳ್ತಂಗಡಿಯ ವಂದನಾ ಮುಡುಬಿದಿರೆಯ ಭವಿತಾ ಹಾಗೂ ಕದ್ರಿಯ ಮಂಜು ಬಿ. ಗೌರವ್ ಮೊರಾರ್ಜಿ ದೇಸಾಯಿ ಉನ್ನತೀಕರಿಸಿ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ 2023–24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಕಮ್ಮಜೆಯ ಕುಮಾರ ಗೌಡ ಮತ್ತು ಸಂಜನಾ 2024–25ನೇ ಸಾಲಿನ ದ್ವಿತೀಯ ಪಿ.ಯು. ವಿದ್ಯಾರ್ಥಿಗಳಾದ ಅರ್ಪಿತಾ ಎಚ್.ಎಲ್ ಶ್ವೇತಾ ಎಂ.ವಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ವಿದ್ಯಾರ್ಥಿ ಕೃಷ್ಣ ಎಂ.ಜಿ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.