ಮೂಲ್ಕಿ: ಇಲ್ಲಿನ ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ ಬಜಪೆ ಹಳೇ ಪೊಲೀಸ್ ಠಾಣಿಯ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡವೊಂದು ಉಂಟಾಗಿ ವಾಹನಗಳ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಈಚೆಗೆ ಸುರಿದ ಭಾರೀ ಮಳೆಗೆ ಹೊಂಡದಲ್ಲಿ ನೀರು ತುಂಬಿ, ಹೊಂಡ ಗೋಚರಿಸದಂತಾಗಿದೆ. ಹೆದ್ದಾರಿಯ ಎರಡೂ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ಹೆದ್ದಾರಿಯಲ್ಲಿಯೇ ಹರಿದ ಪರಿಣಾಮ ಹೆದ್ದಾರಿಯ ಡಾಂಬರು ಕಿತ್ತು ಹೋಗಿ ಬೃಹತ್ ಗಾತ್ರದ ಹೊಂಡಗಳು ಉಂಟಾಗಿದೆ ಎಂದು ಹೇಳುತ್ತಾರೆ ಇಲ್ಲಿನ ವಾಹನ ಸವಾರರು.

ಹೆದ್ದಾರಿಯ ಈ ಜಂಕ್ಷನ್ ಹಳೆಯ ವಿಮಾನನಿಲ್ದಾಣ, ಮುರಜಂಕ್ಷನ್, ಬಜಪೆ, ಅದ್ಯಪಾಡಿ ಮತ್ತಿತರ ಕಡೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ದಿನಂಪ್ರತಿ ನೂರಕ್ಕೂ ಹೆಚ್ಚು ವಾಹನಗಳ ಸಂಚಾರ ಇರುವಂತಹ ಹೆದ್ದಾರಿ ಜಂಕ್ಷನ್ ಈಗ ಬೃಹತ್ ಗಾತ್ರದ ಹೊಂಡ ಉಂಟಾಗಿ ವಾಹನಗಳ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಹೆದ್ದಾರಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.