ಭಾನುವಾರ, ಆಗಸ್ಟ್ 14, 2022
28 °C
ಹೆಚ್ಚುತ್ತಿರುವ ಸಕ್ರಿಯ ಪ್ರಕರಣ– ಕೋವಿಡ್‌ ಕಾರ್ಯಪಡೆಗಳಿಂದ ಕಾರ್ಯಾಚರಣೆ

ಸೀಲ್‌ಡೌನ್‌; ಪಂಚಾಯಿತಿಗಳಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 56 ಕೋವಿಡ್‌ ಸಕ್ರಿಯ ಪ್ರಕರಣಗಳು ಇರುವ ಕಾರಣ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಇದೇ 21ರ ತನಕ ಸೀಲ್ ಡೌನ್ ಮಾಡಲಾಗಿದೆ.

ಆಸ್ಪತ್ರೆಗಳು, ನರ್ಸಿಂಗ್ ಹೋಂ ಗಳು, ಮೆಡಿಕಲ್, ಕ್ಲಿನಿಕ್, ಹಾಲಿನ ಡೈರಿ, ಪೆಟ್ರೋಲ್ ಪಂಪ್‌, ಅಗತ್ಯ ತುರ್ತು ವೈದ್ಯಕೀಯ ಸೇವೆಗಳ ವಾಹನ ಸಂಚಾ ರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನಿತರ ಯಾವುದಕ್ಕೂ ಅವಕಾಶವಿಲ್ಲ.

‘ಕುಲ್ಕುಂದ, ಯೇನೆಕಲ್ಲು, ದೇವರ ಹಳ್ಳಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳು ಬಾರದಂತೆ ತಡೆಯುವ ವ್ಯವಸ್ಥೆ ಮಾಡಲಾಗಿದೆ. ಟಾಸ್ಕ್ ಪೋರ್ಸ್‌ ಸದಸ್ಯರು ಪ್ರತಿ ಮನೆ ಮನೆಗೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಿದ್ದಾರೆ’ ಎಂದು ಕಂದಾಯ ನಿರೀಕ್ಷಕ ನವೀನ್ ರಂಗಮತ್ತಲೆ ತಿಳಿಸಿದ್ದಾರೆ.

‘ಸಹಾಯವಾಣಿ ಸಂಖ್ಯೆ 94808 62399 ಕರೆಮಾಡಿ ಮನೆಗೆ ಬೇಕಾದ ಅಗತ್ಯ ದಿನಸಿ ಹಾಗೂ ಅಗತ್ಯ ವಸ್ತು ಗಳನ್ನೂ ತರಿಸಿಕೊಳ್ಳಬಹುದು. ಅದೇ ರೀತಿ ಸಮಸ್ಯೆಗಳಿದ್ದರೆ ತಮ್ಮ ವಾರ್ಡ್‌ ಸದಸ್ಯರ ಸಹಕಾರ ಪಡೆಯಬಹುದು. ಕೋವಿಡ್‌ ತಡೆಯಲು ಸಹಕರಿಸಬೇಕು’ ಎಂದು ಪಂಚಾಯತ್ ಪಿಡಿಒ ಮುತಪ್ಪ ಧವಳಗಿ ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಗುಂಡಡ್ಕ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಭೆ ಸೋಮವಾರ ನಡೆಯಿತು. ಸುಬ್ರಹ್ಮಣ್ಯ ಸಬ್‌ ಇನ್‌ಸ್ಪೆಕ್ಟರ್‌ ಓಮನಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ಭಟ್, ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಕಾರ್ಯದರ್ಶಿ ಮೋನಪ್ಪ ಡಿ, ಗ್ರಾಮಕರಣಿಕ ರಂಜನ್ ಕಲ್ಕುದಿ ಇದ್ದರು. ಪಂಚಾಯಿತಿ ಸದಸ್ಯರು, ಸೇವಾಭಾರತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರು, ವರ್ತಕರ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಪಡೆ ಸದಸ್ಯರು ಇದ್ದರು. ಸಿಬ್ಬಂದಿ ರಘು ಎನ್.ಬಿ. ವಂದಿಸಿದರು.

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತಿ ಕೊಲ್ಲಮೊಗ್ರು, ಕಲ್ಮಕಾರು ಗ್ರಾಮಗಳನ್ನು ಒಳಗೊಂಡಿದ್ದು ಇಲ್ಲಿಯೂ ಸ್ಥಳೀಯಾಡಳಿತ ಕೊರೊನಾ ಕಾರ್ಯಪಡೆ ನೇತೃತ್ವದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಕಾರ್ಯಪಡೆ ತಂಡವೂ ಸಭೆ ನಡೆಸಿ ಸೂಕ್ತ ವ್ಯವಸ್ಥೆಗೆ ಮುಂದಾಗಿದೆ. ಕಾರ್ಯ ಪಡೆ ಸದಸ್ಯರು ಮನೆಗಳಿಗೆ ಅಗತ್ಯ ವಸ್ತು ಸರಬರಾಜು ಮಾಡಲಿದ್ದಾರೆ. 

ಸಮಾಲೋಚನಾ ಸಭೆ

ಉಜಿರೆ: ಸೀಲ್‌ಡೌನ್ ಹಿನ್ನೆಲೆಯಲ್ಲಿ ಉಜಿರೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು.

ಗ್ರಾಮದ ಪ್ರವೇಶ ಗಡಿಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಿ, ಜನರಿಗೆ ಬೇಕಾದ ಅಗತ್ಯ ಸೇವೆಗಳನ್ನು ಕಾರ್ಯಪಡೆಗಳ ಮೂಲಕ ಒದಗಿಸಲು ನಿರ್ಧರಿಸಲಾಯಿತು.

ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲು ನಿರ್ಧರಿಸಲಾಯಿತು. ಉಪಾಧ್ಯಕ್ಷ ರವಿ ಬರಮೇಲು, ಪಿಡಿಒ ಪ್ರಕಾಶ ಶೆಟ್ಟಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು ಮತ್ತು ಸದಸ್ಯರು ಇದ್ದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಉಜಿರೆ, ಚಾರ್ಮಾಡಿ, ಮುಂಡಾಜೆ ಪೇಟೆಯಲ್ಲಿ ಜನದಟ್ಟಣೆ ಉಂಟಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು