ನೆಲ್ಯಾಡಿ(ಉಪ್ಪಿನಂಗಡಿ):ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ನೆಲ್ಯಾಡಿ ಎಂಬಲ್ಲಿ ಮಂಗಳವಾರ ಅಕ್ರಮ ಜಾನುವಾರು ಸಾಗಣೆಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಲಾರಿ ಸಹಿತ 29 ಜಾನುವಾರುಗಳನ್ನು ವಶಪಡಿಸಿದ್ದಾರೆ.

ಲಾರಿಯೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಣೆ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ನೆಲ್ಯಾಡಿ ಹೊರ ಠಾಣೆಯ ಎ.ಎಸ್.ಐ. ಸೀತಾರಾಮ ಮತ್ತು ತಂಡ ನೆಲ್ಯಾಡಿ ಬೆಥನಿ ಕಾಲೇಜು ಬಳಿ ಹೆದ್ದಾರಿಯಲ್ಲಿ ಕಾದು ನಿಂತುಹಾಸನ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿಯನ್ನು ತಡೆಗಟ್ಟಿದ್ದರು. ಲಾರಿಯಲ್ಲಿದ್ದ 28 ಎಮ್ಮೆ ಕರು ಮತ್ತು 1 ಹೋರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಲಾರಿಯ ಚಾಲಕ ಅರಸೀಕೆರೆಯ ಇಮ್ರಾನ್ ಪಾಶಾ ಎಂಬಾತನನ್ನು ಬಂಧಿಸಿದ್ದು, ಇತರ 3 ಮಂದಿ ಲಾರಿಯಿಂದ ಜಿಗಿದು ಪರಾರಿ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪ್ರಶಾಂತ್ ಮತ್ತು ಪ್ರತಾಪ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.