ಮಂಗಳವಾರ, ಏಪ್ರಿಲ್ 20, 2021
24 °C
ನರಿಂಗಾನದ ಜಲ್ಲಿಕ್ರಾಸ್ ಬಳಿ ನಡಧ ಘಟನೆ

ಉಳ್ಳಾಲ: ಮನೆ, ಎರಡು ಕಾರುಗಳಿಗೆ ಕಲ್ಲೆಸೆದು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಹಾಗೂ ಮನೆ ಕಿಟಕಿ ಗಾಜಿಗೆ ಕಲ್ಲುಗಳನ್ನು ಎಸೆದು ದುಷ್ಕರ್ಮಿಗಳು ಹಾನಿಗೊಳಿಸಿರುವ ಘಟನೆ ನರಿಂಗಾನ ಪಂಚಾಯಿತಿ ವ್ಯಾಪ್ತಿಯ ಜಲ್ಲಿಕ್ರಾಸ್ ಬಳಿ ಗುರುವಾರ ನಸುಕಿನ ಜಾವ ನಡೆದಿದೆ.

ಜಲ್ಲಿಕ್ರಾಸ್ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಸುಕು 3.30 ರ ಸುಮಾರಿಗೆ ಅಂಗಳದಲ್ಲಿ  ಸದ್ದು ಕೇಳಿ ಮನೆಮಂದಿ ಹೊರಬಂದಾಗ ಅಂಗಳದಲ್ಲಿ ನಿಲ್ಲಿಸಲಾದ ಆಮ್ನಿ ಕಾರು ಮತ್ತು ಕ್ವಾಲಿಸ್ ವಾಹನದ ಗಾಜುಗಳನ್ನು ಸಂಪೂರ್ಣ ಹಾನಿಗೊಳಿಸಲಾಗಿದೆ.

ಮನೆಯ ಕಿಟಿಕಿ ಗಾಜನ್ನೂ ಹಾನಿಗೊಳಿಸಲಾಗಿದೆ. ರೇಷನ್ ಅಂಗಡಿ ಹೊಂದಿರುವ ಅಬ್ಬಾಸ್ ಅವರಿಗೆ ಯಾರ ಜತೆಯೂ ವೈಷಮ್ಯವಿರಲಿಲ್ಲ. ಘಟನೆಗೆ ಕಾರಣವೂ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು