ಮಂಗಳೂರು: ಕಂಬದಲ್ಲೂ ಹಗ್ಗದಲ್ಲೂ ಕಸರತ್ತು ಮಾಡಿದ ಮಲ್ಲಕಂಬ ಪಟುಗಳ ರೋಮಾಂಚಕ ಪ್ರದರ್ಶನ, ವಿದ್ಯಾರ್ಥಿನಿಯರ ನೃತ್ಯೋಲ್ಲಾಸ, ವೈವಿಧ್ಯಮಯ ಗಾಯನದ ಲಾಸ್ಯ, ಯೋಗ–ಸಮರ ಕಲೆ, ಬ್ಯಾಂಡ್ ವಾದ್ಯಗಳ ವೈಭವ.

ನಗರದ ಕೊಡಿಯಾಲ್ ಬೈಲ್ನ ಶಾರದಾ ಕಾಲೇಜು ಆವರಣದಲ್ಲಿ ಭಾನುವಾರ ಸಂಜೆ ನಡೆದ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾರದಾ ಸಮೂಹ ಸಂಸ್ಥೆಗಳ ಹೊನಲು ಬೆಳಕಿನ ಕ್ರೀಡಾಕೂಟ ‘ಕ್ರೀಡೋತ್ಸವ’ದ ಉದ್ಘಾಟನೆಗೆ ಮೆರುಗು ತುಂಬಿದವು. ಮಕ್ಕಳು ಮತ್ತು ಯುವಕ ಯುವತಿಯರು ನೀಡಿದ ಅಮೋಘ ಪ್ರದರ್ಶನಕ್ಕೆ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮೊದಲು ನಡೆದ ಮೆರವಣಿಗೆಯೇ ಗಮನ ಸೆಳೆಯಿತು. ವಾದ್ಯಗೋಷ್ಠಿಗಳೊಂದಿಗೆ ‘ಬೆಳ್ಳಿರಥ’ದಲ್ಲಿ ನವಭಾರತ್ ವೃತ್ತದಿಂದ ಯದುವೀರ ಅವರನ್ನು ಕರೆದುಕೊಂಡು ಬರಲಾಯಿತು. ನಂತರ ಕಾಲೇಜು ಆವರಣದ ಭೂವರಾಹ ಅಂಗಣ ವೈಭವೋಪೇತ ಜಗತ್ತಾಗಿ ಪಾರ್ಪಟ್ಟಿತು. ಎತ್ತರದ ವೇದಿಕೆಯಲ್ಲಿ ಕುಳಿತ ಗಣ್ಯರು ವಿಶಾಲ ಅಂಗಣದಲ್ಲಿ ನಡೆದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ ಮುದಗೊಂಡರು.

ವಿವಿಧ ಬಣ್ಣದ ಪೋಷಾಕು ತೊಟ್ಟು ಬಂದ ವಿದ್ಯಾರ್ಥಿಗಳು ಅಂಗಣದ ಮಧ್ಯದಲ್ಲಿ ಬೃಹತ್ ಗಂಡಭೇರುಂಡ ಮಾದರಿಯನ್ನು ಪ್ರದರ್ಶಿಸುತ್ತಿದ್ದಂತೆ ಮೈಸೂರು ಅರಸ ಕೃಷ್ಣರಾಜ ಒಡೆಯರ್ ಅವರನ್ನು ಕೊಂಡಾಡುವ ಹಾಡು ತೇಲಿಬಂತು. ಇದರ ಬೆನ್ನಲ್ಲೇ ‘ಅಂದವೋ ಅಂದವು ಕನ್ನಡ ನಾಡು..’, ‘ಕನ್ನಡ ನಾಡಿನ ಜೀವನದಿ ಕಾವೇರಿ..’ ಮುಂತಾದ ಸಿನಿಮಾ ಹಾಡುಗಳೂ ಕೇಳಿದವು. ಗಂಡಭೇರುಂಡ ಪ್ರದರ್ಶಿಸಿದ ವಿದ್ಯಾರ್ಥಿಗಳು ಮೈಸೂರು ಎಂದು ಬರೆದು ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ನಂತರ ಮಡಕೆ ಮೇಲೆ ನಿಂತು ಕರಗದ ಮಾದರಿಯಲ್ಲಿ ನೃತ್ಯ ಮಾಡಿದ ವಿದ್ಯಾರ್ಥಿನಿಯರು ಚಾಮುಂಡಿ ಮಾತೆಯನ್ನು ಬಣ್ಣಿಸಿದರು. ನಂತರ ಮಲ್ಲಕಂಬದಲ್ಲಿ ವಿವಿಧ ಆಸನಗಳು, ವಿನ್ಯಾಸಗಳು ಮೈನವಿರೇಳಿಸಿದವು. ಕಾರ್ಯಕ್ರಮಗಳ ನಡುವೆ ಸಿದ್ಧತೆಯ ಅವಧಿಯಲ್ಲಿ ಗಾಯನ ತಂಡದ ಹಾಡುಗಳು ರಂಜಿಸಿದವು.

ತಾವರೆ ಎಸಳುಗಳನ್ನು ಹೋಲುವ ವಸ್ತುಗಳನ್ನು ಹಿಡಿದುಕೊಂಡ ವಿದ್ಯಾರ್ಥಿನಿಯರು ‘ತಸ್ಯ’ ನೃತ್ಯ ಪ್ರದರ್ಶಿಸುತ್ತಿದ್ದಂತೆ ಶಾರದಾ ಆಯುರ್ವೇದ ಕಾಲೇಜಿನ ತಸ್ಯ ಯೋಜನೆಯನ್ನು ಅನವಾವರಣಗೊಳಿಸಲಾಯಿತು. ಇದಕ್ಕೆ ಮಾನಸ ಸಂಚರರೇ ಎಂಬ ಸಾಮ ರಾಗದ ಕೀರ್ತನೆಯ ಸಂಗೀತ ಸಾಥ್ ನೀಡಿತು. ಉದ್ಘಾಟನೆ ಕಾರ್ಯಕ್ರಮದ ನಂತರ ಯೋಗ, ಸ್ಕೌಟ್ಸ್ ಮತ್ತು ಗೈಡ್ಸ್ಗಳಿಂದ ಬ್ಯಾಂಡ್, ಸಮರ ಕಲೆ, ನೃತ್ಯ, ಹಗ್ಗದ ಮಲ್ಲಕಂಬ ಮೈನವಿರೇಳಿಸಿತು.

ಕರ್ನಾಟಕದ ಬೆನ್ನೆಲುಬು ಕರಾವಳಿ

ಕ್ರೀಡೋತ್ಸವ ಉದ್ಘಾಟಿಸಿದ ಯದುವೀರ ಅವರು ಕರಾವಳಿಯಲ್ಲಿ ಮೈಸೂರು ಪರಂಪರೆಯನ್ನು ನೃತ್ಯ–ಸಂಗೀತದ ಮೂಲಕ ಪ್ರದರ್ಶಿಸಿರುವುದು ಸಂತಸದ ವಿಷಯ ಎಂದರು ಹೇಳಿದರು. ಕರ್ನಾಟಕಕ್ಕೆ ಮೈಸೂರು ಹೃದಯಭಾಗವಾಗಿದ್ದರೆ ಕರಾವಳಿ ಬೆನ್ನೆಲುಬು ಇದ್ದಂತೆ. ಇಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಗಟ್ಟಿಯಾಗಿ ನೆಲೆಯೂರಿದೆ ಎಂದು ಅವರು ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಭಾರತ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಶ್ರೀನಿವಾಸ ಭಟ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ನಾಗಾರ್ಜುನ, ವಕೀಲ ಅರುಣ್ ಶ್ಯಾಂ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್ ಮತ್ತಿರರು ಪಾಲ್ಗೊಂಡಿದ್ದರು.

‘ಒಲಿಂಪಿಕ್ಸ್ಗೂ ಆತಿಥ್ಯ ವಹಿಸುವಂತಾಗಲಿ’ ಭಾರತಕ್ಕೆ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ ವಹಿಸಲು ಅವಕಾಶ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಯದುವೀರ ಅವರು ಒಲಿಂಪಿಕ್ಸ್ ಆತಿಥ್ಯವೂ ಒಲಿದು ಬರಲಿ ಎಂದು ಆಶಿಸಿದರು. ಭಾರತದಲ್ಲಿ ದೇಶಿ ಕ್ರೀಡೆಗೆ ಈಗ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಕ್ರೀಡಾ ಆಡಳಿತ ಮಸೂದೆ ಅಂಗೀಕಾರದ ನಂತರ ಕ್ರೀಡೆಯ ಬೆಳವಣಿಗೆಗೆ ಸಂಘಟಿತ ಪ್ರಯತ್ನ ನಡೆಸಲು ಸಾಧ್ಯವಾಗಿದೆ ಎಂದ ಅವರು ದೇಶದಲ್ಲಿ ಶಿಕ್ಷಣದ ಮೂಲಸೌಲಭ್ಯ ಹೆಚ್ಚಾಗಬೇಕು. ಧರ್ಮದಲ್ಲಿ ಉಲ್ಲೇಖವಾಗಿರುವ ತತ್ವಗಳು ಶಿಕ್ಷಣದಲ್ಲಿ ಅಡಕವಾಗಬೇಕು ಎಂದರು. ಮೈಸೂರು ಅರಸರು ಸಮಾಜಮುಖಿ ಕೆಲಸಗಳನ್ನು ಮಾಡಿ ರಾಜಧರ್ಮ ಪಾಲಿಸಿದ್ದಾರೆ ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.