ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಯಲ್ಲಿ ಮೇವು ಕಡಿಮೆ ಕೊಟ್ಟು ಪಶು ಆಹಾರವನ್ನು ಹೆಚ್ಚು ನೀಡುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮೇವು ಮತ್ತು ಆಹಾರವನ್ನು ಜೊತೆಯಾಗಿ ನೀಡಬೇಕೇ ಹೊರತು ಮೇವಿಗೆ ಬದಲು ಪಶು ಆಹಾರ ಎಂದು ತಿಳಿದುಕೊಳ್ಳಬಾರರು. ಅದರಿಂದ ಆರೋಗ್ಯ ಹದಗೆಟ್ಟು ಹಾಲುತ್ಪಾದನೆ ಕಡಿಮೆಯಾಗುತ್ತದೆ. ಈಗ ಸೈಲೇಜ್ ಕೊಡುವುದರಿಂದ ತುಂಬ ಅನುಕೂಲ ಆಗುತ್ತಿದೆ. ಅದಕ್ಕೆ ಬೆಲೆಯೂ ಕಡಿಮೆ. ಒಂದು ಕೆಜಿ ಹುಲ್ಲಿನ ಬದಲು ಎರಡು ಕೆಜಿ ಸೈಲೇಜ್ ಖರೀದಿಸಬಹುದು. ಇದರಿಂದ ಪಶು ಆಹಾರದ ಮೊರೆ ಹೋಗುವುದೂ ಕಡಿಮೆಯಾಗುತ್ತದೆ. ಸೈಲೇಜ್ ನೀಡುವುದರಿಂದ ಮತ್ತು ಕೊಟ್ಟಿಗೆ ನಿರ್ವಹಣೆಗೆ ಹೊಸ ತಂತ್ರಗಳನ್ನು ಅಳವಡಿಸುವುದರಿಂದ ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣ ಹೆಚ್ಚಾಗಿದೆ.
-ಪ್ರಕಾಶ್‌ಚಂದ್ರ ಶೆಟ್ಟಿ, ಹಾಲು ಒಕ್ಕೂಟದ ನಿರ್ದೇಶಕ
ಈರೋಡ್‌ನಿಂದ ತರುವ ಹಸುಗಳಿಗೆ ಇಲ್ಲಿನ ವಾತಾವರಣ ಚೆನ್ನಾಗಿ ಒಗ್ಗುತ್ತದೆ. ಸೈಲೇಜ್ ಸಾಕಷ್ಟು ಸಿಗುವುದರಿಂದ ಆಹಾರದ ಸಮಸ್ಯೆಯೂ ಇಲ್ಲ. ಸೈಲೇಜ್ ಆ ಹಸುಗಳಿಗೆ ಚೆನ್ನಾಗಿ ನಾಟುತ್ತದೆ. ಹೊಸಬ ಹೈನುಗಾರಿಕೆಗೆ ಬರುವುದಾದರೆ ಡೇರಿ ತೆರೆಯುವಷ್ಟು ಅನುಕೂಲ ಮಾಡಿಕೊಡಲಾಗುತ್ತದೆ. ಡಿಸಿಸಿ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ಅಥವಾ ಬಡ್ಡಿ ರಹಿತ ಸಾಲ ನೀಡುತ್ತಾರೆ. ನಮ್ಮಲ್ಲಿ ಇಷ್ಟಪಟ್ಟು ಕಷ್ಟಪಡುವವರ ಕೊರತೆ ಇರುವುದೇ ದೊಡ್ಡ ಸಮಸ್ಯೆ. ಅದನ್ನು ಬಿಟ್ಟರೆ ಎಲ್ಲವೂ ಸುಲಲಿತ ಆಗುತ್ತದೆ.
-ರವಿರಾಜ್ ಹೆಗ್ಡೆ , ಒಕ್ಕೂಟದ ಅಧ್ಯಕ್ಷ
ಗ್ವಾವಾ ಲಸ್ಸಿ ಮತ್ತು ಸೀಡ್ ಡಿಲೈಟ್ ಗಳು ಹೊಸದಾಗಿ ಬಂದಿವೆ. 80 ಸಾವಿರ ಲೀಟರ್ ಹಾಲು ಈಚಿನ 10 ವರ್ಷಗಳಲ್ಲಿ ಹೆಚ್ಚಾಗಿದೆ. ಒಟ್ಟು 21 ಉತ್ಪನ್ನಗಳು ಇವೆ. ರೈತರು ಹೆಚ್ಚಾಗಿ ಬರುತ್ತಿದ್ದಾರೆ. ಹಸುಗಳ ಸಂಖ್ಯೆ ಹೆಚ್ಚಾಗಿದೆ. 25 ಯೋಜನೆಗಳು ಇವೆ. ಅವುಗಳನ್ನು ಬಳಸಿಕೊಂಡು ಯುವಕರು ಕೂಡ ಡೇರಿ ತೆರೆಯಲು ಮುಂದೆ ಬಂದಿದ್ದಾರೆ.