ಮಂಗಳೂರು: ಎಲ್ಲ ತೂಕ ವಿಭಾಗದಲ್ಲೂ ಪಾರಮ್ಯ ಮೆರೆದ ಆತಿಥೇಯ ದಕ್ಷಿಣ ಕನ್ನಡದ ಲಿಫ್ಟರ್ಗಳು ದಸರಾ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದ ಮೊದಲ ದಿನ ವೇಟ್ಲಿಫ್ಟಿಂಗ್ನಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದ ಒಟ್ಟು 24 ಪದಕಗಳ ಪೈಕಿ 23 ಪದಕಗಳನ್ನು ತಮ್ಮದಾಗಿಸಿಕೊಂಡರು.

ನಗರದ ಮಂಗಳ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ 8 ತೂಕ ವಿಭಾಗಗಳ ಸ್ಪರ್ಧೆಯ ಎಲ್ಲ ಚಿನ್ನ ಮತ್ತು ಬೆಳ್ಳಿಯ ಪದಕ ದಕ್ಷಿಣ ಕನ್ನಡದ ಕ್ರೀಡಾಪಟುಗಳ ಪಾಲಾಯಿತು. ಒಂದು ವಿಭಾಗದಲ್ಲಿ ಉಡುಪಿ ಕಂಚಿನ ಪದಕ ಗಳಿಸಿತು. ಪುರುಷರ 79 ಕೆಜಿ ವಿಭಾಗದಲ್ಲಿ ಚಿಂತನ್ ಎಸ್ ಚಿನ್ನ ಗೆದ್ದುಕೊಂಡರೆ ಮಾಬುಸಾಬ್ ಬೆಳ್ಳಿ ಮತ್ತು ಅಜಯ್ ಬಿ.ಹೆಗ್ಡೆ ಕಂಚಿನ ಪದಕ ಗಳಿಸಿದರು. ಪುರುಷರ 71 ಕೆಜಿ ವಿಭಾಗದಲ್ಲಿ ದಿಶನ್ ಎಂ, ತನ್ವಿಶ್ ವಿ ಮತ್ತು ಚಿರಂಜೀವಿ ಆರ್ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

ಪುರುಷರ 65 ಕೆಜಿ ವಿಭಾಗದಲ್ಲಿ ಸೃಜನ್, ಮಂಜು ಮಾದಾರ ಮತ್ತು ಯಜತ್, 60 ಕೆಜಿ ವಿಭಾಗದಲ್ಲಿ ನಿಖಿಲ್ ಕೆ.ಜೆ, ರಂಜನ್ ಆರ್.ಕೆ ಮತ್ತು ಮನೋಜ್ ಬಿ.ಆರ್ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ಮಹಿಳೆಯರ 63 ಕೆಜಿ ವಿಭಾಗದಲ್ಲಿ ಸಿಂಚನಾ, ಶೋಭಾ ಮತ್ತು ಸಾನಿಕ ಬಿ.ಎಸ್ ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. 58 ಕೆಜಿ ವಿಭಾಗದಲ್ಲಿ ಅಪೂರ್ವಾ ಎಸ್, ಐಶ್ವರ್ಯಾ ಮತ್ತು ತನ್ವಿ ಬೋಳೂರು, 53 ಕೆಜಿ ವಿಭಾಗದಲ್ಲಿ ಮೈತ್ರಿ ರೇಳ್ಕರೆ, ಅಮೃತಾ ಎಸ್.ಆರ್ ಮತ್ತು ಸಂಜನಾ (ಉಡುಪಿ), 48 ಕೆಜಿ ವಿಭಾಗದಲ್ಲಿ ಶ್ರಾವ್ಯ ಎಂ, ಗೌತಮಿ ಮತ್ತು ಹರ್ಷಿತಾ ಪಿ.ಪಿ ಕ್ರಮವಾಗಿ ಮೊದಲ ಮೂರು ಸ್ಥಾನ ಗೆದ್ದರು.

ಧನುಷ್, ಮಮತಾ ವೇಗದ ಓಟಗಾರರು

ಉಡುಪಿಯ ಧನುಷ್ ಮತ್ತು ಮೈಸೂರಿನ ಮಮತಾ ಅವರು ದಸರಾ ಮೈಸೂರು ವಿಭಾಗ ಮಟ್ಟದ ಅಥ್ಲೆಟಿಕ್ಸ್ನಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀಟರ್ಸ್ ಓಟದಲ್ಲಿ ಧನುಷ್ 10.50 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಮಹಿಳೆಯರ 100 ಮೀಟರ್ಸ್ ಓಟದಲ್ಲಿ ಮಮತಾ 12.60 ಸೆಕೆಂಡುಗಳ ಸಾಧನೆ ಮಾಡಿದರು.

4x400 ಮೀಟರ್ಸ್ ರಿಲೆಯ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿಗಳು ದಕ್ಷಿಣ ಕನ್ನಡದ ಪಾಲಾದವು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಥ್ಲೀಟ್ಗಳು ಕೂಟದಲ್ಲಿ ಅಮೋಘ ಸಾಧನೆ ಮಾಡಿದರು. ಮೈಸೂರು ಮತ್ತು ಕೊಡಗು ಜಿಲ್ಲೆಯ ಅಥ್ಲೀಟ್ಗಳು ಕೂಡ ಪದಕಗಳನ್ನು ಗೆದ್ದು ಮಿಂಚಿದರು.

ಫಲಿತಾಂಶಗಳು: ಪುರುಷರು: 100 ಮೀ ಓಟ: ಧನುಷ್ (ಉಡುಪಿ)–1. ಕಾಲ: 10.50ಸೆ, ಮಂಜು ಎಂ (ದಕ್ಷಿಣ ಕನ್ನಡ)–2, ಯಶಸ್ (ದಕ್ಷಿಣ ಕನ್ನಡ)–3; 800 ಮೀ: ಯಶವಂತ್ ಕೆ (ದಕ)–1. ಕಾಲ: 2 ನಿಮಿಷ 00.8ಸೆ, ರಾಮು (ದಕ)–2, ಶಶಾಂಕ್ ಗೌಡ (ಮೈಸೂರು)–3; 5000 ಮೀ: ಚನ್ನಕೇಶವ ಜಿ.ಎಲ್ (ದಕ)–1. ಕಾಲ: 16ನಿ 36.70ಸೆ, ನಿತಿನ್ ಯು.ಎಲ್ (ದಕ)–2, ಶಾಶ್ವತ್ ಪೂಜಾರಿ(ಉಡುಪಿ)–3; ಲಾಂಗ್ಜಂಪ್: ಅನುಷ್ ಟಿ.ಆರ್ (ಉಡುಪಿ)–1. ಅಂತರ: 7.29ಮೀ, ಗುರು ಎಂ.ಎಸ್ (ದಕ)–2, ನೋಯಲ್ ಆರ್.ಪಿ (ದಕ)–3; ಜಾವೆಲಿನ್ ಥ್ರೋ: ಸಿದ್ದಪ್ಪ ದಂಡಿನ (ಉಡುಪಿ)–1, ದೂರ: 58.32ಮೀ, ರಾಘವೇಂದ್ರ ನಾಯಕ್ (ಉಡುಪಿ)–2, ಗೌತಮ್ ಮೊಗವೀರ (ದಕ)–3; 4x400 ಮೀಟರ್ಸ್ ರಿಲೆ: ದಕ (ಆಕಾಶ್, ರಾಮು, ಯಶವಂತ್, ದಯಾನಂದ್)–1. ಕಾಲ: 3ನಿ21.84ಸೆ, ಉಡುಪಿ (ವಿಕಾಸ್, ಗುರುರಾಜ್, ಶ್ರೇಯಸ್, ಬಾಲಾಜಿ)–2, ಮೈಸೂರು (ದೀಪಕ್, ಭಾರತ್, ಶಶಾಂಕ್, ಅಶ್ವತ್ಥ್)–3.

ಮಹಿಳೆಯರು: 100ಮೀ ಓಟ: ಮಮತಾ ಎಂ (ಮೈಸೂರು)–1. ಕಾಲ: 12.60ಸೆ, ಪ್ರಗತಿ ಬಿ.ಎಸ್ (ಉಡುಪಿ)–2, ರಿದಿ ಚೌಟ (ದಕ್ಷಿಣ ಕನ್ನಡ)–3; 800 ಮೀ: ರೇಖಾ ಬಿ (ದಕ್ಷಿಣ ಕನ್ನಡ)–1. ಕಾಲ: 2ನಿ27.10ಸೆ, ಪ್ರಿಯಾಂಕಾ ಎಂ (ದಕ)–2, ಲಕ್ಷ್ಮಿ (ಮೈಸೂರು)–3; 3000 ಮೀ: ಪ್ರಣಮ್ಯ (ದಕ)–1. ಕಾಲ:10ನಿ 42.10ಸೆ, ನಂದಿನಿ (ಉಡುಪಿ)–2, ಭವಿಷ್ಯ ಡಿ.ಕೆ (ಕೊಡಗು)–3; ಲಾಂಗ್ಜಂಪ್: ಶ್ರೀದೇವಿಕಾ ಶೆಟ್ಟಿ (ಉಡುಪಿ)–1.ಅಂತರ: 5.80ಮೀ, ಐಶ್ವರ್ಯಾ (ಉಡುಪಿ)–2, ಲಿನ್ಯ ಮೇರಿ (ಮೈಸೂರು)–3; ಜಾವೆಲಿನ್ ಥ್ರೋ: ಶ್ರಾವ್ಯ (ಉಡುಪಿ)–1. ದೂರ: 42.87ಮೀ, ಶಹಜಹಾನಿ (ಮೈಸೂರು)–2, ನಂದಾ (ದಕ)–3; 4x400 ಮೀಟರ್ಸ್ ರಿಲೆ: ದಕ (ಚೈತ್ರಿಕಾ, ಪ್ರಿಯಾಂಕಾ, ರಿತುಶ್ರೀ, ರೇಖಾ)–1.ಕಾಲ: 4ನಿ03.26ಸೆ, ಉಡುಪಿ (ಮಾನ್ಯಾ, ಜಯಲಕ್ಷ್ಮಿ, ನಿಕಿತಾ, ರಿತಿಷಾ)–2, ಕೊಡಗು (ಭವಿಷ್ಯಾ, ನೇಕ್ಷಾ, ರಾಣಿ, ತಜ್ಞವಿ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.