ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್: ದ.ಕ ಜಿಲ್ಲೆಯಿಂದ ಮೊದಲ ತಂಡ ಮೇ 9ರಂದು ಪಯಣ

Published 6 ಮೇ 2024, 14:32 IST
Last Updated 6 ಮೇ 2024, 14:32 IST
ಅಕ್ಷರ ಗಾತ್ರ

ಮಂಗಳೂರು: ಈ ಬಾರಿ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವವರ ಮೊದಲ ತಂಡ ಇದೇ 9ರಂದು ಬೆಂಗಳೂರಿನಿಂದ ಪಯಣಿಸಲಿದೆ ಎಂದು ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಿಂದ ಒಟ್ಟು 1044 ಮಂದಿ ಹಜ್‌ಗೆ ತೆರಳಲಿದ್ದಾರೆ. ಅವರೆಲ್ಲರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡಲಾಗಿದೆ ಎಂದರು.

ಕೋವಿಡ್‌–19ಕ್ಕೂ ಮೊದಲು ಮಂಗಳೂರು ವಿಮಾನ ನಿಲ್ದಾಣದಿಂದ ಹಜ್‌ಗೆ ತೆರಳುತ್ತಿದ್ದರು. ಕೋವಿಡ್ ನಂತರ ಬೆಂಗಳೂರು ಮತ್ತು ಕೇರಳದ ವಿಮಾನ ನಿಲ್ದಾಣಗಳ ಮೂಲಕ ಹೋಗಬೇಕಾದ ಪರಿಸ್ಥಿತಿ ಇದೆ. ಮುಂದಿನ ವರ್ಷದಿಂದ ಇಲ್ಲಿಂದಲೇ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಹಜ್ ಸಮಿತಿಯ ಸದಸ್ಯ ಸೈಯದ್‌ ಅಶ್ರಫ್‌ ಅಸ್ಸಖಾಫ್‌ ತಂಙಳ್‌, ಬ್ಯಾರಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಸ್‌.ಎಂ.ರಫೀಕ್‌, ಮುಸ್ಲಿಮ್ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್‌, ಬಿ.ಎಸ್‌.ಬಶೀರ್‌, ಹನೀಫ್ ಗೋಳ್ತಮಜಲು ಮತ್ತು ಮುಹಮ್ಮದ್ ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT