ಮಂಗಳೂರು: ಧರ್ಮಸ್ಥಳ ಬೆಳವಣಿಗೆ ಸಂಬಂಧಿಸಿ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಆರೋಪ ಪ್ರಕರಣದಲ್ಲಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ ಅವರ ಪತ್ನಿ ಎಸ್ಐಟಿ ಕಚೇರಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಜಯಂತ್ ಅವರ ಪತ್ನಿ ಬೆಂಗಳೂರಿ
ನಿಂದ ಬೆಳಿಗ್ಗೆ ಬೆಳ್ತಂಗಡಿಗೆ ಬಂದು ಮಧ್ಯಾಹ್ನ 12 ಗಂಟೆಗೆ ಎಸ್ಐಟಿ ಅಧಿ
ಕಾರಿಗಳ ಬಳಿಗೆ ತೆರಳಿದ್ದರು. ಸಂಜೆ 4.30ರ ವರೆಗೂ ಮಾಹಿತಿ ಪಡೆದು
ಕೊಳ್ಳಲಾಯಿತು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಜಯಂತ್, ‘ನೋಟಿಸ್ ಬಂದಿತ್ತು. ನಾನು ಕೆಲವು ದಿನಗಳ ಹಿಂದೆ ಹೇಳಿಕೆ ದಾಖಲಿಸಿದ್ದೆ. ಪತ್ನಿಗೆ ಅನಾರೋಗ್ಯ ಇದ್ದ ಕಾರಣ ಸ್ವಲ್ಪ ತಡವಾಯಿತು. ಎಂಜಿನಿಯರಿಂಗ್ ಓದುತ್ತಿರುವ ಮಗನೊಂದಿಗೆ ತೆರಳಿ ಅವರು ಹೇಳಿಕೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

‘ಬೇರೆ ಊರಿನಿಂದ ಹೋರಾಟ
ಗಾರರು ಯಾರು ಬಂದರೂ ಅವರಿಗೆ ಊಟ, ಆಶ್ರಯ ನೀಡುವ ಸಂಪ್ರ
ದಾಯ ಬೆಳೆಸಿಕೊಂಡಿದ್ದೇವೆ. ಸಾಕ್ಷಿ
ದೂರುದಾರನಿಗೂ ಹಾಗೇ ಊಟ ಹಾಕಿ
ದ್ದೆವು. ಎಸ್ಐಟಿಯವರು ಕರೆದಾಗ ಹೋಗುವುದು ನಮ್ಮ ಕರ್ತವ್ಯ. ಆದ್ದರಿಂದ ಮೂವರೂ ಹೇಳಿಕೆ ಕೊಟ್ಟಿದ್ದೇವೆ’ ಎಂದು ಅವರು ತಿಳಿಸಿದರು.

ಮಧ್ಯಂತರ ವರದಿ ಇಲ್ಲ: ‘ಹಿರಿಯ ಅಧಿಕಾರಿಗಳಿಂದ ನಿರ್ದೇಶನಗಳಿಗಾಗಿ ಕಾಯುತ್ತಿದ್ದೇವೆ. ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸುವ ಸಿದ್ಧತೆ ನಡೆದಿದೆ ಎಂಬುದು ವದಂತಿಯಷ್ಟೆ. ಪ್ರಕರಣದ ಎಲ್ಲ ಆಯಾಮಗಳನ್ನೂ ಪರಿಶೀಲಿಸಿ ಸಮರ್ಪಕವಾದ ತನಿಖೆ ನಡೆಸಿದ ನಂತರ ಅಂತಿಮ ವರದಿ ಸಲ್ಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.