ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಯಕ್ಷ ದಂಪತಿಗೆ ‘ಶಿಷ್ಯಾಭಿವಂದನಂ’

Last Updated 14 ಸೆಪ್ಟೆಂಬರ್ 2021, 16:37 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಗಾನಕ್ಕೆ ಜೀವನ ಮುಡಿಪಾಗಿಟ್ಟಿರುವ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ದಂಪತಿಗೆ 75 ವರ್ಷ ತುಂಬಿದ ಪ್ರಯುಕ್ತ ಶಿಷ್ಯ ವೃಂದದವರು, ಅಭಿಮಾನಿಗಳ ಜೊತೆಗೂಡಿ ಅವರನ್ನು ಗೌರವಿಸಲು ನಿರ್ಧರಿಸಿದ್ದಾರೆ.

‘ಶ್ರೀ ಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ’ ಕಾರ್ಯಕ್ರಮವನ್ನು ನವೆಂಬರ್ 7ರಂದು ಮೂಡುಬಿದಿರೆಯ ಆಲಂಗಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.

ಇಡೀ ದಿನ ಪೂರ್ವರಂಗ ಪ್ರದರ್ಶನ, ಪಾರಂಪರಿಕ ಯಕ್ಷಗಾನೀಯ ಹಾಡುಗಳು, ಸಭಾ ಕಾರ್ಯಕ್ರಮ, ಗುರು ದಂಪತಿಗೆ ಅಭಿನಂದನೆ, ಅಭಿನಂದನಾ ಗ್ರಂಥ ಬಿಡುಗಡೆ, ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ಬಿಡುಗಡೆ, ಪರಂಪರೆಯ ಯಕ್ಷಗಾನ ಪ್ರದರ್ಶನ ಹಾಗೂ ಬೈಪಾಡಿತ್ತಾಯ ದಂಪತಿ ಹೆಸರಿನಲ್ಲಿ ಡಿ.ಜಿ. ಯಕ್ಷ ಫೌಂಡೇಶನ್ ಮೂಲಕ ಹಿರಿಯ ಕಲಾವಿದರೊಬ್ಬರಿಗೆ ವಾರ್ಷಿಕ ‘ಯಕ್ಷನಾದ ಪುರಸ್ಕಾರ’ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಗೌರವಾಧ್ಯಕ್ಷತೆಯಲ್ಲಿ ಅಭಿನಂದನಾ ಸಮಿತಿ ರಚಿಸಲಾಗಿದೆ. ಅಧ್ಯಕ್ಷರಾಗಿ ಚಂದ್ರಶೇಖರ ಭಟ್ ಕೊಂಕಣಾಜೆ, ಕಾರ್ಯದರ್ಶಿಯಾಗಿ ಆನಂದ ಗುಡಿಗಾರ ಕೆರ್ವಾಶೆ, ಕೋಶಾಧಿಕಾರಿಯಾಗಿ ಅವಿನಾಶ್ ಬೈಪಾಡಿತ್ತಾಯ, ಸಹ ಕಾರ್ಯದರ್ಶಿಗಳಾಗಿ ಗಿರೀಶ್ ಭಟ್ ಕಿನಿಲಕೋಡಿ, ಗುರುಪ್ರಸಾದ್ ಬೊಳಿಂಜಡ್ಕ, ಗಿರೀಶ್ ರೈ ಕಕ್ಕೆಪದವು ಅವರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಸಮಿತಿಗೆ ಯೋಗಾಕ್ಷಿ ತಲಕಳ, ಸಾಯಿಸುಮಾ ನಾವಡ ಹಾಗೂ ಮೈತ್ರಿ ಭಟ್ ಕತ್ತಲ್‌ಸಾರ್ ಅವರನ್ನು ಆಯ್ಕೆ ಮಾಡಲಾಯಿತು. ಬೈಪಾಡಿತ್ತಾಯರ ಎಲ್ಲ ಶಿಷ್ಯರೂ ಸಮಿತಿಯ ಸದಸ್ಯರಾಗಿದ್ದಾರೆ.

ಹರಿನಾರಾಯಣ ಬೈಪಾಡಿತ್ತಾಯರು ಆರು ದಶಕಗಳಿಂದ ಮತ್ತು ಲೀಲಾವತಿ ಬೈಪಾಡಿತ್ತಾಯರು ಐದು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿದ್ದಾರೆ. ನೂರಾರು ಹಿಮ್ಮೇಳ ವಾದಕರನ್ನು ಯಕ್ಷಗಾನ ರಂಗಕ್ಕೆಕೊಡುಗೆಯಾಗಿ ನೀಡಿದ್ದಾರೆ.

ಈಗಲೂ ಶಿಷ್ಯರಿಗೆ ಯಕ್ಷ ಶಿಕ್ಷಣ ನೀಡುತ್ತಿದ್ದಾರೆ. ಇಬ್ಬರಿಗೂ 75ರ ಹರೆಯ. ಪತಿ-ಪತ್ನಿ ಇಬ್ಬರಿಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT