ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ, ಫಲ್ಗುಣಿ, ನಂದಿನಿ, ಶಾಂಭವಿ ಬೇಸಿಗೆ ಅಡಿ ಇಡುವ ಮುನ್ನವೇ ಹರಿವು ನಿಲ್ಲಿಸಿವೆ. ನಗರದಲ್ಲಿ ಮಾತ್ರವಲ್ಲಿ ಜಿಲ್ಲೆಯ ಅನೇಕ ಪಟ್ಟಣಗಳ ವಾರ್ಡ್ಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಫೆಬ್ರುವರಿಯಲ್ಲೇ ಶುರುವಾಗಿದೆ. ಮುಂಬರುವ ಮೂರು ತಿಂಗಳ ಕಡು ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಈ ಚಿತ್ರಣಗಳು ಸಾರುತ್ತಿವೆ.

ಕಳೆದ ವರ್ಷ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ರೇಷನಿಂಗ್ ಶುರುಮಾಡಬೇಕಾದ ಸ್ಥಿತಿ ಎದುರಾಗಿತ್ತು. ತುಂಬೆ ಜಲಾಶಯದ ನೀರನ್ನು ಜತನವಾಗಿ ಬಳಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಜೂನ್ ಎರಡನೇ ವಾರದವರೆಗೋ ಕಷ್ಟ ಪಟ್ಟು ನೀರು ಪೂರೈಸಲು ಪಾಲಿಕೆಗೆ ಸಾಧ್ಯವಾಗಿತ್ತು. ಬಳಿಕ ಮಳೆಯಾಗಿದ್ದರಿಂದ ಪಾಲಿಕೆಯ ದೊಡ್ಡ ಆತಂಕ ನಿವಾರಣೆ ಆಗಿತ್ತು.

ಡಿಸೆಂಬರ್ವರೆಗೂ ಬಿಟ್ಟು ಬಿಟ್ಟು ಮಳೆಯಾಗಿರುವುದರಿಂದ ಈ ಸಲ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಷ್ಟೇನೂ ಸಮಸ್ಯೆ ಆಗಲಿಕ್ಕಿಲ್ಲ ಎಂದು ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ಜನವರಿ ಬಳಿಕ ಜಿಲ್ಲೆಯಲ್ಲಿ ಹನಿ ಮಳೆಯೂ ಆಗಿಲ್ಲ. ಇನ್ನೊಂದೆಡೆ ಹಳ್ಳಿ ಹಳ್ಳಿಗಳಲ್ಲೂ ಹಳ್ಳ–ಕೊಳ್ಳಗಳು ಬತ್ತಿವೆ. ಬಾವಿಗಳಲ್ಲಿ ಜಲ ಮಟ್ಟ ಬಲುಬೇಗ ತಳ ಸೇರುತ್ತಿದೆ. ಕೊಳವೆಬಾವಿಗಳೂ ನೀರಿಲ್ಲದೇ ಬರಿದಾಗಿವೆ. ಜಲಾಶಯಗಳಲ್ಲಿರುವ ನೀರನ್ನು ಹಾಗೂ ಬಾವಿಗಳ ನೀರನ್ನು ಬಲು ಜತನವಾಗಿ ಬಳಸಬೇಕಾದ ಪರಿಸ್ಥಿತಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗುವ ಜಿಲ್ಲೆಗಳಲ್ಲಿ ಒಂದಾಗಿರುವ ಸ್ಥಿತಿ ದಕ್ಷಿಣ ಕನ್ನಡದಲ್ಲೂ ಎದುರಾಗಿದೆ.

ಜಿಲ್ಲೆಯ ಪ್ರಮುಖ ನೀರಿನ ಆಕರಗಳಾದ ತುಂಬೆ ಅಣೆಕಟ್ಟೆ, ಎಎಂಆರ್ ಅಣೆಕಟ್ಟೆ, ಹರೇಕಳ– ಅಡ್ಯಾರ್ ಅಣೆಕಟ್ಟೆ, ಬಿಳಿಯೂರು ಅಣೆಕಟ್ಟೆ, ನೆಕ್ಕಿಲಾಡಿ ಅಣೆಕಟ್ಟೆಗಳು ಸದ್ಯಕ್ಕೆ ಭರ್ತಿ ಆಗಿವೆ. ಆದರೂ ಈ ಬಾರಿಯೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಒಳಹರಿವು ಕ್ಷೀಣಿಸಿರುವುದು ಈ ಆತಂಕಕ್ಕೆ ಕಾರಣ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ 39 ಗ್ರಾಮಗಳಲ್ಲಿ ಹಾಗೂ ನಗರ, ಪಟ್ಟಣ ಪ್ರದೇಶಗಳ 112 ವಾರ್ಡುಗಳಲ್ಲಿ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಗುರುತಿಸಿದೆ. ಮಂಗಳೂರು ನಗರದ ಎತ್ತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಪಾಲಿಕೆಯು ಈಗಾಗಲೇ 15 ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡುತ್ತಿದೆ. ನಗರದಲ್ಲೂ ಸುರತ್ಕಲ್, ಮೇರಿಹಿಲ್, ಕೊಟ್ಟಾರ, ಕೂಳೂರು ಮೊದಲಾದ ಅನೇಕ ಕಡೆ ಫೆಬ್ರುವರಿಯಲ್ಲೇ ನೀರಿನ ಅಭಾವ ಎದುರಾಗಿದೆ. ನೀರಿನ ಬವಣೆ ಹೆಚ್ಚು ಇರುವ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಪಾಲಿಕೆ ಟೆಂಡರ್ ಆಹ್ವಾನಿಸಿದೆ.

‘ತುಂಬೆ ಜಲಾಶಯಕ್ಕೆ 2023ರಲ್ಲಿ ಮಾ.3ರಂದು ಒಳ ಹರಿವು ಸ್ಥಗಿತಗೊಂಡಿತ್ತು. ಈ ಅಣೆಕಟ್ಟೆಯಲ್ಲಿ ಗರಿಷ್ಠ 7 ಮೀ.ವರೆಗೆ ನೀರು ನಿಲ್ಲಿಸಲು ಅವಕಾಶ ಇದೆಯಾದರೂ ಭೂಸ್ವಾಧೀನ ಸಮಸ್ಯೆಯಿಂದಲಾಗಿ ಕೇವಲ 6 ಮೀ ವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷ ಏಪ್ರಿಲ್ ವೇಳೆಗೆ ನೀರಿನ ಮಟ್ಟ 4 ಮೀ.ಗಿಂತಲೂ ಕಡಿಮೆಯಾಗಿತ್ತು. ಆ ಬಳಿಕ ಕೇವಲ 20 ದಿನಗಳವರೆಗೆ ಪೂರೈಸುವಷ್ಟು ನೀರು ಮಾತ್ರ ಲಭ್ಯವಿರುತ್ತದೆ. ಆಗ ಎಎಂಆರ್ ಜಲಾಶಯದಿಂದ ನೀರು ಹರಿಸಬೇಕಾಗುತ್ತದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ವರ್ಷ ಎಎಂಆರ್ ಜಲಾಶಯದ ನೀರನ್ನು ಪೂರ್ತಿ ತುಂಬೆ ಜಲಾಶಯಕ್ಕೆ ಹರಿಸಿದ್ದರಿಂದ ಬಂಟ್ವಾಳ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುರಿಯುವ ನೀರು ಪೂರೈಸಲು ಸಮಸ್ಯೆ ಎದುರಾಗಿತ್ತು. ಈ ವರ್ಷವೂ ಅಂತಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕಾದರೆ ನೀರನ್ನು ಆದಷ್ಟು ಮಿತವಾಗಿ ಬಳಸಬೇಕಾಗುತ್ತದೆ ಎನ್ನುತ್ತಾರೆ ಅವರು.

ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ತುಂಬೆ ಜಲಾಶಯದಿಂದಲೇ ನೀರು ಪೂರೈಕೆ ಆಗುತ್ತಿದೆ. ಟ್ಯಾಂಕರ್ ನೀರನ್ನು ಅವಲಂಬಿಸಬೇಕಾದ ಸ್ಥಿತಿ ಇಲ್ಲಿ ಈಗಾಗಲೇ ಸೃಷ್ಟಿಯಾಗಿದೆ. ಕೋಟೆಕಾರ್ ಪಟ್ಟಣ ಪಂಚಾಯಿತಿಯ 11 ವಾರ್ಡ್ಗಳು ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿವೆ. ಇಂತಹ ವಾರ್ಡ್ಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸುವ ಸ್ಥಿತಿ ಎದುರಾಗಿದೆ.

ಮುಡಿಪು ವ್ಯಾಪ್ತಿಯ ಬಾಳೆಪುಣಿ ಗ್ರಾಮ ಪಂಚಾಯಿತಿ, ಅಸೈಗೋಳಿ, ಹರೇಕಳ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಪೂರೈಸುವ ಕೆಲವು ಜಲಮೂಲಗಳಲ್ಲೂ ನೀರಿನ ಕೊರತೆ ಆಗಿದ್ದು, ಈ ಸಮಸ್ಯೆ ನೀಗಿಸುವ ಮಾರ್ಗೋಪಾಯಗಳ ಕುರಿತು ದಿಶಾ ಸಮಿತಿ ಸಭೆಯಲ್ಲೂ ಚರ್ಚೆ ಆಗಿದೆ.

Quote - ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ತೀವ್ರ ಕೊರತೆ ಕಾಣಿಸಿಕೊಂಡಿಲ್ಲ. ಮಾರ್ಚ್ ಬಳಿಕ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಪರಿಸ್ಥಿತಿ ನಿಭಾಯಿಸಲು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ ಮುಲ್ಲೈಮುಗಿಲನ್ ಎಂ.ಪಿ ಜಿಲ್ಲಾಧಿಕಾರಿ

Cut-off box - ಗ್ರಾಫಿಕ್ಸ್... ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಮಟ್ಟ (ಮೀಟರ್ ಗಳಲ್ಲಿ) ಜಲಾಶಯ;ಗರಿಷ್ಠ ಮಟ್ಟ; ಪ್ರಸ್ತುತ ಮಟ್ಟ ತುಂಬೆ ಅಣೆಕಟ್ಟೆ;7;6 ಎಎಂಆರ್ ಅಣೆಕಟ್ಟೆ;18.9;18.9 ಹರೇಕಳ–ಅಡ್ಯಾರ್;3;1 ಬಿಳಿಯೂರು ಅಣೆಕಟ್ಟೆ;4;4 ಮಳವೂರು;3;3 ನೆಕ್ಕಿಲಾಡಿ;3;3

Cut-off box - ಜಲಾಶಯಗಳಲ್ಲಿ ನೀರಿನ ಮಟ್ಟ– ಜಿಲ್ಲಾಡಳಿತ ನಿಗಾ ಕಳೆದ ವರ್ಷ ಕುಡಿಯುವ ನೀರಿನ ತೀವ್ರ ಕೊರತೆಯಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಈ ಸಲ ನೀರಿನ ಬಳಕೆಗೆ ಕಾರ್ಯಯೋಜನೆ ರೂಪಿಸಿದೆ. ಜಲಾಶಯಗಳಲ್ಲಿ ನೀರಿನ ಮಟ್ಟದ ಮೇಲೆ ನಿಗಾ ಇಡಲು ಹಾಗೂ ನೀರನ್ನು ಜತನವಾಗಿ ಬಳಸಲು ಅಣೆಕಟ್ಟೆ ನಿರ್ವಹಣಾ ಮೇಲುಸ್ತುವಾರಿ ಸಮಿತಿಗಳನ್ನೂ ರಚಿಸಿದೆ. ಈ ಸಮಿತಿ ನಿತ್ಯವೂ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕಿದೆ. ನೀರಿನ ಕೊರತೆ ಎದುರಾಗದಂತೆ ಎಚ್ಚರ ವಹಿಸುವ ಸಲುವಾಗಿಯೇ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಧಿಕಾರಿಗಳ ಸಭೆಯನ್ನು ಫೆ. 19ರಂದು ನಡೆಸಿದ್ದಾರೆ. ಕುಡಿಯುವ ನೀರಿನ ಕೊರತೆ ಆಗುವುದನ್ನು ತಪ್ಪಿಸಲು ಹಾಗೂ ಲಭ್ಯ ಇರುವ ನೀರನ್ನು ಮಿತವಾಗಿ ಬಳಸುವುದಕ್ಕೆ ಕ್ರಮಕೈಗೊಳ್ಳಲು ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಬೇಕು. ನೀರಿನ ಸಮಸ್ಯೆ ಎದುರಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದೂ ಅವರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಸಹಾಯವಾಣಿ ಆರಂಭಿಸಿ ಅಗತ್ಯ ಸಿಬ್ಬಂದಿ ನೇಮಿಸಬೇಕು. ಕುಡಿಯುವ ನೀರಿನ ಪರಿಶುದ್ಧತೆ ಹಾಗೂ ಗುಣಮಟ್ಟ ಕುರಿತು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ. ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುವಂತೆ ಪ್ರದೇಶಗಳನ್ನು ಹಾಗೂ ಗ್ರಾಮಗಳನ್ನು ಗುರುತಿಸಿಕೊಳ್ಳಬೇಕು. ನೀರು ಪೂರೈಕೆಗೆ ಪರ್ಯಾಯ ಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಟೆಂಡರ್ ಕರೆದು ವ್ಯವಸ್ಥೆ ಮಾಡಬೇಕು. ಹೊಸ ಕೊಳವೆಬಾವಿಗಳನ್ನು ಕೊರೆಯಲು ಅಗತ್ಯ ಇರುವ ಕಡೆ ಗುರುತಿಸಿ ಇಟ್ಟುಕೊಳ್ಳಬೇಕು. ಅಗತ್ಯ ಬಿದ್ದರೆ ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪಡೆಯಲು ಕ್ರಮ ವಹಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ. ಬಿಳಿಯೂರು ಅಣೆಕಟ್ಟೆಯ ನೀರನ್ನು ಸಂಪೂರ್ಣವಾಗಿ ಕಾಯ್ದಿರಿಸಿಕೊಳ್ಳಬೇಕು. ಪುಚ್ಚಮೊಗರು ಹಾಗೂ ಜಕ್ರಿಬೆಟ್ಟು ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ನೇತ್ರಾವತಿ ಮತ್ತು ಎಎಂಆರ್ ಅಣೆಕಟ್ಟೆಗಳ ಬಳಿ ಹಾಗೂ ಜಿಲ್ಲೆಯ ನದಿಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Cut-off box - ಬರಪೀಡಿತ ಪಟ್ಟಿಯಲ್ಲಿ 2 ತಾಲ್ಲೂಕು ಮೂಡುಬಿದಿರೆ ಹಾಗೂ ಮಂಗಳೂರು ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕುಗಳೆಂದು ಪರಿಗಣಿಸಿದೆ. ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸುವ ಕ್ರಮಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಬರ ನಿರ್ವಹಣೆ ಅನುದಾನದಡಿ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.