ಮಂಗಳೂರು: ಕಾರವಾರ– ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ₹3.16 ಲಕ್ಷ ಮೌಲ್ಯದ 6.33 ಕೆ.ಜಿ. ತೂಕದ ಒಣ ಗಾಂಜಾ ಪತ್ತೆಯಾಗಿದೆ. ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಿಯಮಿತ ತಪಾಸಣೆ ವೇಳೆಗೆ ಇದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಾಮಿಕ ವ್ಯಕ್ತಿಗೆ ಸೇರಿದ ಬ್ಯಾಗ್‌ನಲ್ಲಿ ಗಾಂಜಾ ಇತ್ತು ಎನ್ನಲಾಗಿದೆ. ಪ್ರಕರಣದ ಸಂಬಂಧ ಯಾರನ್ನೂ ಬಂಧಿಸಿಲ್ಲ. ಮಂಗಳೂರು ಪೂರ್ವ ಅಬಕಾರಿ ವಿಭಾಗದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಪಾಲಕ್ಕಾಡ್ ವಿಭಾಗದ ಸಿಐಬಿ ಮುಖ್ಯ ನಿರೀಕ್ಷಕ ಎನ್.ಕೇಸವದಾಸ್, ಮಂಗಳೂರು ರೈಲ್ವೆ ಠಾಣೆಯ ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಯಾದವ್, ಸಿಐಬಿ ಎಸ್‌ಐ ದೀಪಕ್ ಎ.ಪಿ., ಅಜಿತ್ ಅಶೋಕ್ ಎ.ಪಿ, ಎಎಸ್‌ಐ ಸಾಜು ಕೆ., ಎಸ್.ಎಂ. ರವಿ., ಮಂಗಳೂರು ರೈಲ್ವೆ ಠಾಣೆಯ ಎಎಸ್‌ಐ ಕೆ.ಶಶಿ, ಸಿಐಬಿ ಹೆಡ್ ಕಾನ್‌ಸ್ಟಬಲ್ ಎನ್.ಅಶೋಕ್, ಅಜೀಶ್ ಒ.ಕೆ., ಮಂಗಳೂರು ಜಂಕ್ಷನ್ ಕಾನ್‌ಸ್ಟಬಲ್ ಟಿ.ಪಾಂಡುರಂಗ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.