ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಅರಿತು ಬಾಳಲು ಸಲಹೆ

Published 6 ಜುಲೈ 2023, 11:32 IST
Last Updated 6 ಜುಲೈ 2023, 11:32 IST
ಅಕ್ಷರ ಗಾತ್ರ

ವಿಟ್ಲ: ಈದ್ ಕಮಿಟಿ ವಿಟ್ಲ ವತಿಯಿಂದ ವಿಟ್ಲ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಮೆಹ್ ಫಿಲೇ ಈದ್ 2023 ಕಾರ್ಯಕ್ರಮ ಒಕ್ಕೆತ್ತೂರು ಸಿಂಹಗಿರಿ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.

ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಈದ್ ಸಂದೇಶ ನೀಡಿ, ನಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅಧರ್ಮ, ಅಕ್ರಮವನ್ನು ಪ್ರವಾದಿ ವಿರೋಧಿಸಿದ್ದಾರೆ. ಧರ್ಮವನ್ನು ಅರಿತು ಬಾಳಿದರೆ ಸಮಾಜದಲ್ಲಿ ಸಮಸ್ಯೆಗಳು ಬರುವುದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಜಮೀಯತ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ನಿರಂತರವಾಗಿ ರೋಗಿಗಳ ಸೇವೆ ಮಾಡಲಾಗುತ್ತಿದೆ. ಯಾವುದೇ ಜಾತಿ, ಧರ್ಮ ನೋಡದೆ ಸೇವೆ ಮಾಡಲಾಗುತ್ತಿದೆ ಎಂದರು.

ಡಾ.ಗೀತಪ್ರಕಾಶ್, ವಕೀಲ ಜಯರಾಮ ರೈ, ಹನೀಫ್‌ ಹಾಜಿ ಗೋಳ್ತಮಜಲು ಮಾತನಾಡಿದರು. ಯೂಸುಫ್‌ ಮೇಗಿನಪೇಟೆ, ಇಕ್ಬಾಲ್ ಅವರನ್ನು ಸನ್ಮಾನಿಸಲಾಯಿತು.

ಈದ್ ಕಮಿಟಿ ಸಂಚಾಲಕ ಅಝೀಜ್ ಸನ, ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ ಬಿ.ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ, ಲಿಯೋ ಅಧ್ಯಕ್ಷ ಸಹಲನ್ ಉಪಸ್ಥಿತರಿದ್ದರು.

ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಸ್ವಾಗತಿಸಿದರು. ಅಬೂಬಕ್ಕರ್ ವಿಟ್ಲ ವಂದಿಸಿದರು. ಶಾಕೀರ್ ಅಳಕೆಮಜಲು ನಿರೂಪಿಸಿದರು. ಕಲಂದರ್ ಪರ್ತಿಪ್ಪಾಡಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT