ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯಲ್ಲಿ 4 ತಿಂಗಳ ಬಳಿಕ ಮತ್ತೆ ಕಾಡಾನೆ ಹಾವಳಿ ಪ್ರಾರಂಭಗೊಂಡಿದೆ. ಮಂಗಳವಾರ ರಾತ್ರಿ ಇಬ್ಬರು ಕೃಷಿಕರ ತೋಟಗಳಿಗೆ ನುಗ್ಗಿದ ಕಾಡಾನೆ ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿ ಮಾಡಿದೆ.

ಕುಮಾರ್ ಪೆರ್ನಾಜೆ ಮತ್ತು ರಾಘವೇಂದ್ರ ಭಟ್ ಅವರ ತೋಟಕ್ಕೆ ಲಗ್ಗೆಯಿಟ್ಟು ಬಾಳೆಗಿಡ, ದಿವಿ ಹಲಸು, ಅಡಿಕೆ ಸಸಿಗಳನ್ನು ನಾಶಪಡಿಸಿದೆ. ಈ ಭಾಗದಲ್ಲಿ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಅರಣ್ಯ ಇಲಾಖೆ ಸೋಲಾರ್ ಬೇಲಿ ಅಳವಡಿಸಿದ್ದರೂ, ಕಾಡಾನೆ ಈ ಬೇಲಿಯನ್ನು ದಾಟಿ ಬಂದಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.

ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಹಾಗೂ ಇಲಾಖೆಯ ಸಿಬ್ಬಂದಿ ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗುಂಡಡ್ಕ ಬಳಿಯಿಂದ ಪೆರ್ನಾಜೆ- ಕೆಮ್ಮತ್ತಡ್ಕ ತನಕ ರಕ್ಷಿತಾರಣ್ಯದ ಬದಿಯಲ್ಲಿ ಸೋಲಾರ್ ಬೇಲಿ ಅಳವಡಿಸಲಾಗಿತ್ತು. ಈಚೆಗೆ ಸುರಿದ, ಗಾಳಿ–ಮಳೆಯಿಂದ ಮರ ಬಿದ್ದು ಮೂರು ಕಡೆ ಸೋಲಾರ್ ತಂತಿಗೆ ಹಾನಿಯಾಗಿದೆ. ಸೋಲಾರ್ ಬೇಲಿಯ ತಂತಿಯ ಸಂಪರ್ಕ ಕಡಿತಗೊಂಡಿರುವುದರಿಂದ ಆನೆ ಬೇಲಿ ದಾಟಿ ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.