ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿ ಸಲಗ ಕಾಣಿಸಿಕೊಂಡಿದೆ.
ಸೋಮವಾರ ತಡರಾತ್ರಿ ಘಾಟಿ ಭಾಗದ ಅಣ್ಣಪ್ಪ ಬೆಟ್ಟದಿಂದ ಸೋಮನ ಕಾಡು ಅರಣ್ಯಭಾಗದ ವರೆಗೆ ರಸ್ತೆಯಲ್ಲಿ ಓಡಾಡಿದ ಕಾಡಾನೆ, ಬಳಿಕ ಸೋಮನ ಕಾಡು ಪರಿಸರದ ಅರಣ್ಯ ಪ್ರದೇಶದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿ ವಾಹನ ಸವಾರರು ತಿಳಿಸಿದ್ದಾರೆ.
ಕಾಡಾನೆ ರಸ್ತೆಯಲ್ಲಿ ಓಡಾಡಿದ್ದರಿಂದ ಹಲವು ಹೊತ್ತು ವಾಹನ ದಟ್ಟಣೆ ಉಂಟಾಗಿತ್ತು. ಮಂಜಿನ ವಾತಾವರಣ, ನಿರಂತರ ಮಳೆ, ಕಾಡಾನೆಯ ಓಡಾಟದಿಂದಾಗಿ ಘಾಟಿ ಪ್ರದೇಶದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.