ಮಂಗಳವಾರ, ಅಕ್ಟೋಬರ್ 20, 2020
27 °C
ಐ.ಎಲ್.ಪಿಂಟೋ ಕಾರ್ಯಕ್ಕೆ ಶ್ಲಾಘನೆ

ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವಾದ ಕೃಷಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ಇಲ್ಲಿನ ಕೊಯ್ಯೂರು ಗ್ರಾಮದ ಕೊಪ್ಪದಬೈಲಿನ ಕೃಷಿಕ, ಸಾಮಾಜಿಕ ಕಾರ್ಯಕರ್ತ ಐ.ಎಲ್. ಪಿಂಟೋ ಅವರು ತಮ್ಮ ಕೃಷಿ ಆದಾಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿ ಮಾದರಿಯಾಗಿದ್ದಾರೆ.

ಶೈಕ್ಷಣಿಕ ಚಟುವಟಿಕೆ ಮುಂದುವರಿಸಲು ಆರ್ಥಿಕ ತೊಂದರೆ ಎದುರಿಸುತ್ತಿದ್ದ ಮದ್ದಡ್ಕದ ವಿದ್ಯಾರ್ಥಿನಿ ಜಸೀದಾ ಭಾನು ಅವರಿಗೆ ದ್ವಿತೀಯ ಪಿಯುಸಿ ವಿಧ್ಯಾಭ್ಯಾಸ ಕ್ಕಾಗಿ ಎಲ್ಲ ಪುಸ್ತಕಗಳು ಮತ್ತು ಇತರ ಪರಿಕರಗಳನ್ನು ಕೊಡುಗೆ ನೀಡಿದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೈಗೊಳ್ಳಲಾದ ನೂತನ ಮೀಟಿಂಗ್ ಹಾಲ್ ಕೆಲಸಕ್ಕೆ ಮೇಲ್ಛಾವಣಿ ನಿರ್ಮಾಣಕ್ಕೆ 25 ಸಾವಿರ ರೂ.ಗಳನ್ನೂ ದೇಣಿಗೆಯಾಗಿ ನೀಡಿದ್ದಾರೆ.

10 ಅಂಗವಿಕಲ ಮಕ್ಕಳಿಗೆ ಆರ್ಥಿಕ ನೆರವು ನೀಡಿರುವ ಅವರು, ಸಾಧನೆಗೈದ ವಿದ್ಯಾರ್ಥಿಗಳ ಮನೆಗೇ ಹೋಗಿ ನೆರವಾಗುತ್ತಾರೆ. 15ಕ್ಕಿಂತ ಹೆಚ್ಚು ಮಕ್ಕಳಿಗೆ ಶಾಲಾ ಶುಲ್ಕ, ನೋಟ್‌ಬುಕ್ ನೀಡಿದ್ದಾರೆ. ಕೋವಿಡ್-19 ಲಾಕ್‌ಡೌನ್‌ ಸಂದರ್ಭದಲ್ಲಿ ಕೊಯ್ಯೂರು, ಮಲೆಬೆಟ್ಟು ಸುತ್ತಮುತ್ತ 100 ಬಡ ಕುಟುಂಬಗಳಿಗೆ ಆಹಾರ ಮತ್ತು ಅಗತ್ಯ ವಸ್ತುಗಳ ಕಿಟ್ ವಿತರಿಸುವ ಮೂಲಕ ಅವರು ಸೇವೆ ಸಲ್ಲಿಸಿದ್ದರು. ಪೊಲೀಸ್ ಠಾಣೆಯ ಸಭಾಭವನದ ಚಾವಣಿ ನಿರ್ಮಾಣಕ್ಕೆ ₹ 25ಸಾವಿರ ದೇಣಿಗೆ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು