ಪುತ್ತೂರು: ಅಡಿಕೆ ತೋಟದ ಬದಿಯಲ್ಲಿದ್ದ ಮರದ ಕೊಂಬೆ ಕಡಿಯುತ್ತಿದ್ದ ವೇಳೆ ಮುರಿದ ಕೊಂಬೆ ಮೈಮೇಲೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಎಂಬಲ್ಲಿ ನಡೆದಿದೆ.

ಒಳಮೊಗ್ರು ಗ್ರಾಮದ ದರ್ಬೆತ್ತೆಡ್ಕ ನಿವಾಸಿ ಗುರುಪ್ರಸಾದ್ (49) ಮೃತಪಟ್ಟವರು.

ಆಟೊ ರಿಕ್ಷಾ ಚಾಲಕರಾಗಿದ್ದ ಅವರು ಮರ ಕಡಿಯುವ ಕಾಯಕ ನಡೆಸುತ್ತಿದ್ದರು. ಶುಭಕರ್ ಎಂಬವರು ಮರವನ್ನೇರಿ ಕೊಂಬೆ ಕಡಿಯುತ್ತಿದ್ದರು. ತೋಟದ ಭಾಗಕ್ಕೆ ವಾಲಿ ನಿಂತಿದ್ದ ಮರದ ಕೊಂಬೆ ಕಡಿಯುವಾಗ ಅವು ಅಡಿಕೆ ಮರಗಳ ಮೇಲೆ ಬೀಳುವ ಸಂಭವವಿತ್ತು. ಅದನ್ನು ತಪ್ಪಿಸಲು ಕೊಂಬೆಗೆ ಹಗ್ಗ ಕಟ್ಟಿ ಕೆಳಗೆ ಎಳೆಯುವಾಗ ಅವಘಡ ನಡೆದಿದೆ.

ಗಂಭೀರ ಗಂಭೀರ ಗಾಯಗೊಂಡಿದ್ದ ಗುರುಪ್ರಸಾದ್ ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದಾರೆ. ಅವರ ಪುತ್ರ ದಿವಿತ್ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರಿಗೆ ಪತ್ನಿ, ದರ್ಬೆತ್ತಡ್ಕ ಅಂಗನವಾಡಿ ಕಾರ್ಯಕರ್ತೆ, ಇಂದಿರಾ, ಇಬ್ಬರು ಪುತ್ರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.