ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭವು ಮಾ.31ರಂದು ಮಧ್ಯಾಹ್ನ 2.30ಕ್ಕೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಡೀನ್ ಡಾ.ಆಂಟನಿ ಸಿಲ್ವನ್ ಡಿಸೋಜ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘279 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು. ಸ್ಪೀಚ್ ಅಂಡ್ ಹಿಯರಿಂಗ್‌ನ 82 ವಿದ್ಯಾರ್ಥಿಗಳಿಗೆ ಇದೇ ವೇಳೆ ಪದವಿ ಪ್ರದಾನ ಮಾಡಲಾಗುವುದು. ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ ಪದವಿ ಪ್ರದಾನ ಮಾಡುವರು. ಮಲೇಷ್ಯಾದ ಸಬಾಹ್ ಹೆಲ್ತ್ ಕೇರ್ ಸಿಇಒ ದಾಟುಕ್ ಡಾ.ಹೆರಿಕ್ ಕೋರ್ರಿ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು.

ಫಾದರ್ ಮುಲ್ಲರ್ ಸಂಬಂಧಿತ ಆರೋಗ್ಯ ವಿಜ್ಞಾನ ಕಾಲೇಜಿನ ಪದವಿ ಪ್ರದಾನ ಸಮಾರಂಭವೂ ಇದೇ ವೇದಿಕೆಯಲ್ಲಿ ನಡೆಯಲಿದೆ. ವಿವಿಧ ಕೋರ್ಸ್‌ಗಳ 100 ಮಂದಿ ಪದವೀಧರರು ಪದವಿ ಸ್ವೀಕರಿಸಲಿದ್ದಾರೆ. ಮುಂದಿನ ವರ್ಷದಿಂದ ಇನ್ನಷ್ಟು ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ಹಿಲ್ಡಾ ಡಿಸೋಜ ತಿಳಿಸಿದರು.

ನರ್ಸಿಂಗ್ ಸ್ಕೂಲ್ ಹಾಗೂ ಕಾಲೇಜಿನ ಪದವಿ ಪ್ರದಾನ ಸಮಾರಂಭ ಏ.1ರ ಮಧ್ಯಾಹ್ನ 2.30ಕ್ಕೆ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಜರುಗಲಿದೆ. ಜಿಎನ್‌ಎಂ, ಬಿ.ಎಸ್ಸಿ ನರ್ಸಿಂಗ್, ಪಿಬಿ ಬಿ.ಎಸ್ಸಿ ನರ್ಸಿಂಗ್, ಎಂ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ಬಿಷಪ್ ಡಾ.ಪೀಟರ್ ಪಾವ್ಲ ಸಲ್ದಾನ ಅಧ್ಯಕ್ಷತೆ ವಹಿಸುವರು. ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಹೊ ಗೌರವ ಅತಿಥಿಯಾಗಿ ಭಾಗವಹಿಸುವರು ಎಂದು ಪ್ರಾಂಶುಪಾಲೆ ಸಿ.ಜೆಸಿಂತ ಡಿಸೋಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.