ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾದರ್ ಮುಲ್ಲರ್‌: ಅಪರೂಪದ ಚಿಕಿತ್ಸೆ

Last Updated 10 ಮಾರ್ಚ್ 2022, 16:01 IST
ಅಕ್ಷರ ಗಾತ್ರ

ಮಂಗಳೂರು: ನಗರದ ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ಅಪರೂಪದ ಹೃದಯ ತೊಂದರೆ ಇರುವ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ, ಅವರನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಲಾಯಿತು.

ಮೂಡಿಗೆರೆಯ ನಾಗೇಶ (57) ಎನ್ನುವವರು ತೀವ್ರ ಎದೆನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತಪಾಸಣೆ ನಡೆಸಿದ ಡಾ. ಪ್ರದೀಪ್ ಪಿರೇರಾ ಅವರು, ಈ ವ್ಯಕ್ತಿಯಲ್ಲಿ ಎದೆಯ ಬಲಭಾಗದಲ್ಲಿ ಹೃದಯ ಮತ್ತು ಹೊಟ್ಟೆಯ ಎಡಭಾಗದಲ್ಲಿ ಯಕೃತ್ತು ಇರುವುದನ್ನು ಗಮನಿಸಿದರು. ಇದು ಹುಟ್ಟುವಾಗಲೇ ಇರುವ ಸಮಸ್ಯೆಯಾಗಿದ್ದು, 10ಸಾವಿರ ಜನರಲ್ಲಿ ಒಬ್ಬರಲ್ಲಿ ಇಂತಹ ಪ್ರಕರಣ ಇರುತ್ತದೆ. ನಾಗೇಶ್ ಅವರಿಗೆ ಅಪಧಮನಿಯ ತೊಂದರೆ ಮೊದಲಿನಿಂದ ಇತ್ತು. ಎಂಜಿಯೊಗ್ರಾಮ್ ಮಾಡಿದಾಗ ಹೃದಯದ ರಕ್ತನಾಳದಲ್ಲಿ ತೀವ್ರವಾದ ಬ್ಲಾಕ್ ಇರುವುದನ್ನು ವೈದ್ಯರು ಗುರುತಿಸಿದರು. ಎಂಜಿಯೊಪ್ಲಾಸ್ಟಿ ಮೂಲಕ ರೋಗಿಗೆ ಚಿಕಿತ್ಸೆ ನೀಡಲಾಯಿತು. ಡಾ. ಪ್ರದೀಪ್ ಅವರಿಗೆ ಕ್ಯಾಥಲ್ಯಾಬ್ ತಂತ್ರಜ್ಞ ಪುರುಷೋತ್ತಮ್, ನರ್ಸ್‌ಗಳಾದ ರೀಟಾ, ನಿಧಿನ್, ರಾಮ್, ಸ್ಟೀವನ್, ಜೆಸ್ಟಿನಾ ಸಹಕರಿಸಿದರು.

‘ಈ ವ್ಯಕ್ತಿಗೆ ಗಂಭೀರ ಪ್ರಮಾಣದ ಹೃದಯಾಘಾತ ಆಗಿದ್ದರಿಂದಚಿಕಿತ್ಸೆಗೆ ನೀಡುವುದು ಸವಾಲಾಗಿತ್ತು’ ಎಂದು ಡಾ. ಪ್ರದೀಪ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT