ಮಂಗಳೂರು: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಜಾಗತಿಕ ಹೋಮಿಯೋಪಥಿ ಪ್ರತಿಷ್ಠಾನದ ಫೌಂಡೇಷನ್ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ 'ಎಕ್ಸ್ ಫ್ಲೋರಾ-2025' ಅನ್ನು ಇದೇ 14ರಿಂದ 16ರವರೆಗೆ ಕಂಕನಾಡಿಯ ಫಾದರ್ ಮುಲ್ಲರ್ ಸಮಾವೇಶ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ.ಫೌಸ್ತಿನ್ ಲ್ಯೂಕಸ್ ಲೋಬೊ, ‘ಸಮ್ಮೇಳನದ ಉದ್ಘಾಟನಾ ಸಮಾರಂಭ ಇದೇ 14ರಂದು ಮಧ್ಯಾಹ್ನ12ಕ್ಕೆ ನಡೆಯಲಿದ್ದು, ರಾಜ್ಯ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕಮಲಬಾಯಿ, ದಕ್ಷಿಣ ಆಫ್ರಿಕಾದ ಡರ್ಬನ್ ತಾಂತ್ರಿಕ ವಿಶ್ವವಿದ್ಯಾಲಯದ ಹೋಮಿಯೋಪಥಿ ವಿಭಾಗ ಮುಖ್ಯಸ್ಥೆ ಡಾ.ಆ್ಯಶ್ಲಿ ರೋಸ್, ಯುಕೆ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್ ನಿರ್ದೇಶಕ ಡಾ.ಕೀಮ್ ಆಂಟೊನಿ ಪಾಲ್ಗೊಳ್ಳುವರು. ಸಮ್ಮೇಳನದಲ್ಲಿಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಭಾರತದ ಸಂಪನ್ಮೂಲ ವ್ಯಕ್ತಿಗಳು, ದೇಶ ವಿದೇಶಗಳ 1500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದರು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಎನ್ಎಬಿಎಚ್ ಮಾನ್ಯತೆ ಲಭಿಸಿ 10 ವರ್ಷ ಪೂರ್ಣಗೊಂಡ ಸಲುವಾಗಿ ಇದೇ 14ರಂದು ಸಂಜೆ 3 ರಿಂದ ಆಸ್ಪತ್ರೆಯ ಡಿ.ಎಂ ಸಭಾಂಗಣದಲ್ಲಿ ಜಾಗತಿಕ ಗುಣಮಟ್ಟ ಸಪ್ತಾಹಕ್ಕೆ ಚಾಲನೆ ನೀಡಲಾಗುತ್ತದೆ. ಸಂಸ್ಥೆಯ ಹೊರರೋಗಿಗಳು, ಒಳರೋಗಿಗಳು ಮತ್ತು ಎಫ್ಎಂಸಿಐ ಸಿಬ್ಬಂದಿಯ ಮಕ್ಕಳಿಗಾಗಿ ಇದೇ 15 ರಂದು ಸಮ್ಮೇಳನ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ. ಮಕ್ಕಳಿಗಾಗಿ ಚಿತ್ರಕಲೆ ಮತ್ತು ವೇಷಭೂಷಣ ಸ್ಪರ್ಧೆ, ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಸಂಸ್ಥೆಯ ವತಿಯಿಂದ ಇದೇ 13ರಂದು ಬಜಾಲ್ ಸೇಂಟ್ ಜೋಸೆಫ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿದೆ’ ಎಂದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಎಫ್ಎಂಎಚ್ಪಿಡಿ ಆಡಳಿತಾಧಿಕಾರಿ ಡಾ.ನೆಲ್ಸನ್ ಡಿ.ಪಾಯಿಸ್, ವೈದ್ಯಕೀಯ ಆಸ್ಪತ್ರೆಯ ಆಡಳಿತಾಧಿಕಾರಿ ಜಾರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ವಿಲಿಯಂ ಡಿಸೋಜ, ಡೀನ್ ಆಂಟನಿ ಡಿಸೋಜ, ಎಫ್ಎಂಎಚ್ಎಂಸಿ ಉಪಪ್ರಾಂಶುಪಾಲರಾದ ಡಾ.ವಿಲ್ಮಾ ಮೀರಾ ಡಿಸೋಜ, ಎಫ್ಎಂಎಚ್ಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ, ಪ್ರಮುಖರಾದ ಡಾ.ಕಿರಣ್ ಶೆಟ್ಟಿ, ಡಾ. ಪೃಥ್ವಿ ಶೆಟ್ಟಿ, ಡಾ.ಹೆಲೆನ್, ಡಾ.ಅನಿಲ್ ಶೆಟ್ಟಿ, ಡಾ.ಶೀನಾ ಕೆ.ಎನ್., ಡಾ.ಧೀರಜ್ ಐ. ಫರ್ನಾಂಡಿಸ್, ಡಾ.ಶೆರ್ಲಿನ್ ಪೌಲ್, ಇಲ್ಯಾಸ್ ಫೆರ್ನಾಂಡಿಸ್, ಡಾ.ಕೆಲ್ವಿನ್, ಸ್ಮಿತಾ ಡಿಸಿಲ್ವಾ, ಪ್ರಿಯಾ ಪಿರೇರಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.