ಮಂಗಳೂರು: ಹಬ್ಬಗಳ ಹಂಗಾಮು ಆರಂಭವಾಗುತ್ತಿದ್ದು, ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಮತ್ತು ಪೂಜಾ ಸೇವೆಗಳನ್ನು ಶೀಘ್ರ ಪ್ರಾರಂಭಿಸಲು ಕೋವಿಡ್ ತಡೆ ನಿರ್ಬಂಧ ಮಾರ್ಗಸೂಚಿ ಸಡಿಲಿಸಿ ಆದೇಶ ಹೊರಡಿಸಬೇಕು ಎಂದು ವಿಶ್ವ ಹಿಂದೂಪರಿಷತ್ ಸಂಘಟನೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿದೆ.

ಕಳೆದ ವರ್ಷದಂತೆ ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳ ಆಚರಣೆ, ಧಾರ್ಮಿಕ ವಿಧಿಗಳಿಗೆ ಚ್ಯುತಿ ಬರದಂತೆ ಮಾರ್ಗದರ್ಶಿ ಸೂತ್ರಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಮತ್ತು ಪೂಜಾ ಸೇವೆಗಳ ಪ್ರಾರಂಭಿಸುವಂತೆ ಮತ್ತು ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ (ವಿಟ್ಲ ಪಿಂಡಿ), ಗಣೇಶ ಚತುರ್ಥಿ ಹಬ್ಬ ಇತ್ಯಾದಿಯಾಗಿ ದೇವಸ್ಥಾನಗಳಲ್ಲಿ, ಸಾರ್ವಜನಿಕವಾಗಿ ನಡೆಸುವ ಆಚರಣೆಗಳನ್ನು ಕಳೆದ ವರ್ಷದಂತೆ ಧಾರ್ಮಿಕ ವಿಧಿಗಳಿಗೆ ಚ್ಯುತಿ ಇಲ್ಲದಂತೆ ಆಚರಿಸಲು ತಕ್ಷಣ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ವಿಶ್ವ ಹಿಂದೂಪರಿಷತ್ ಪರಿಷತ್ ಪರವಾಗಿ ಪ್ರೊ ಎಂ. ಬಿ. ಪುರಾಣಿಕ್, ಗೋಪಾಲ್ ಕುತ್ತಾರ್, ಶರಣ್ ಪಂಪವೆಲ್, ಶಿವಾನಂದ್ ಮೆಂಡನ್ ಹಾಗೂ ಸಂಘಟನೆಯ ಜಿಲ್ಲಾ ಪ್ರಮುಖರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.