ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಫಸ್ಟ್ ನ್ಯೂರೋ- ಜಾಗೃತಿ ಮೂಡಿಸುವ ವಾಹನ ಸಂಚಾರ ಅಭಿಯಾನಕ್ಕೆ ಚಾಲನೆ

8 ಜಿಲ್ಲೆಗಳಲ್ಲಿ 1 ತಿಂಗಳು ಸಂಚರಿಸಲಿರುವ ವಾಹನ
Last Updated 19 ಅಕ್ಟೋಬರ್ 2021, 4:28 IST
ಅಕ್ಷರ ಗಾತ್ರ

ಮಂಗಳೂರು: ನಗರದ ಫಸ್ಟ್ ನ್ಯೂರೋ ಬ್ರೈನ್ ಆಂಡ್ ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪಾರ್ಶ್ವವಾಯು (ಸ್ಟ್ರೋಕ್) ಬಗ್ಗೆಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಾಹನ ಸಂಚಾರ ಅಭಿಯಾನಕ್ಕೆ ಶಾಸಕ ವೇದವ್ಯಾಸ ಕಾಮತ್ ಸೋಮವಾರ ಚಾಲನೆ ನೀಡಿದರು.

‘ಜನರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡುವ ಜೊತೆಗೆ ತಕ್ಷಣ ಲಭ್ಯವಿರುವ ಚಿಕಿತ್ಸೆಗಳ ವಿವರಣೆ ಮತ್ತು ‘ಗೋಲ್ಡನ್ ಅವರ್’ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯ. ಹಲವರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮಾಹಿತಿ ಇರುವುದಿಲ್ಲ. ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ದೇಹದ ಅಂಗಾಂಗಳು ಜೀವನ ಪೂರ್ತಿ ಊನವಾಗುವ ಸಂಭವ ಹೆಚ್ಚು ಇರುತ್ತವೆ. ಕರ್ನಾಟಕ ರಾಜ್ಯದ 6 ಜಿಲ್ಲೆಗಳು ಮತ್ತು ನೆರೆಯ ಕೇರಳದ 2 ಜಿಲ್ಲೆಗಳಲ್ಲಿ ವಾಹನ ಸಂಚರಿಸಿ ಹಳ್ಳಿಗರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲಿದೆ’ ಎಂದು ವೇದವ್ಯಾಸ ಕಾಮತ್ ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ‘ಅಡ್ಯಾರ್ - ಕಣ್ಣೂರು ಪರಿಸರದಲ್ಲಿ ಸ್ಥಾಪಿತವಾದ ಆಸ್ಪತ್ರೆ, ರಾಜ್ಯವ್ಯಾಪಿ ಹೆಸರುವಾಸಿಯಾಗಿದೆ’ ಎಂದರು.

ಪಾಲಿಕೆ ಸದಸ್ಯೆ ಚಂದ್ರಾವತಿ ಕಣ್ಣೂರು, ಡಾ. ರಕ್ಷಿತ್ ಕೆದಾಂಬಾಡಿ, ರಂಜಿತ್ ಶೆಟ್ಟಿ, ಸಿ.ಒ.ಒ. ರೋಶನಿ ಶೆಟ್ಟಿ, ನಿರ್ದೇಶಕ ರಾಮಚಂದ್ರ ಶೆಟ್ಟಿ, ಸಿಬ್ಬಂದಿ ಇದ್ದರು. ಸಂಪತ್ ಕಾರ್ಯಕ್ರಮ ನಿರೂಪಿಸಿದರು.

‘ಸಂಚಾರಿ ವಾಹನವು ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಚಿಕ್ಕಮಗಳೂರು, ಹಾಸನ, ಕೊಡಗು, ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಂದು ತಿಂಗಳ ಅಭಿಯಾನದಲ್ಲಿ 1.20 ಕೋಟಿ ಜನರನ್ನು ತಲುಪಲು ಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT