ಗುರುವಾರ , ಜೂನ್ 4, 2020
27 °C

ಮಂಗಳೂರು | ಮಸ್ಕತ್‌ನಿಂದ ಬಂದಿಳಿದ ವಿಮಾನ, 63 ಮಂದಿ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್‌ ಬಳಿಕ ಕೊಲ್ಲಿ ರಾಷ್ಟ್ರಗಳಿಂದ ಅನಿವಾಸಿ ಭಾರತೀಯರನ್ನು ಮಂಗಳೂರಿಗೆ ಕರೆತಂದ ಮೂರನೇ ವಿಮಾನವು ಬುಧವಾರ ಮಸ್ಕತ್‌ನಿಂದ ಹೊರಟು ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.05ಕ್ಕೆ ಬಂದಿಳಿಯಿತು.

‘ಒಟ್ಟು 63 ಪ್ರಯಾಣಿಕರಿದ್ದರು. ಪ್ರಯಾಣಿಕರ ಬೇಡಿಕೆಯಂತೆ ಅವರವರ ಜಿಲ್ಲೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಯಿತು’ ಎಂದು ನೋಡಲ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಒಟ್ಟು ಪ್ರಯಾಣಿಕರ ಪೈಕಿ ಉತ್ತರ ಕನ್ನಡದ 3, ಉಡುಪಿಯ 20 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 40 ಮಂದಿ ಪ್ರಯಾಣಿಕರು ಇದ್ದರು. ಇದರಲ್ಲಿ ಏಳು ಮಂದಿ ಗರ್ಭಿಣಿಯರು ಎಂದು ತಿಳಿದುಬಂದಿದೆ.

ಪ್ರಯಾಣಿಕರಿಗೆ ಆರೋಗ್ಯ ಪರೀಕ್ಷೆ, ಕ್ವಾರಂಟೈನ್‌ ಹೋಟೆಲ್ ನಿಗದಿ, ಊಟೋಪಚಾರ, ಇಮಿಗ್ರೇಷನ್‌ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.

ದುಬೈನಿಂದ ಬಂದಿದ್ದ ಮೊದಲ ವಿಮಾನದಲ್ಲಿ ಜಿಲ್ಲೆಯಲ್ಲಿ ಉಳಿದ 125 ಮಂದಿ ಪೈಕಿ 9  ಹಾಗೂ ಎರಡನೇ ವಿಮಾನದ 110 ಮಂದಿ ಪೈಕಿ 24 ಜನರಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೌದಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಪ್ರಯಾಣಿಕರು ಇದ್ದರು ಎಂದು ಎನ್‌ಆರ್‌ಐ ಟಾಸ್ಕ್‌ಫೋರ್ಸ್ ಘಟಕ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು