ಪುತ್ತೂರು: ವಿವಾಹವಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆಯ ಮನೆಗೆ ಶಾಸಕ ಅಶೋಕ್ಕುಮಾರ್ ರೈ ಶನಿವಾರ ಭೇಟಿ ನೀಡಿ, ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿ ಧೈರ್ಯ ತುಂಬಿದರು.

‘ನಾನು ಈ ಹಿಂದೆಯೂ ವಿವಾಹ ಮಾಡಿಸಿ ನ್ಯಾಯ ಕೊಡಿಸಿ ಎಂದು ಹೋರಾಟ ಮಾಡಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಹುಡುಗನಿಗೆ ಶಿಕ್ಷೆ ಕೊಡಿಸಲು ನಾನು ಹೋರಾಡುತ್ತಿಲ್ಲ; ಮಗಳಿಗೆ ವಿವಾಹ ಮಾಡಿಸಿ, ಈಗ ಜನಿಸಿರುವ ಮಗುವಿಗೆ ನ್ಯಾಯಕೊಡಿಸಿ ಎಂದು ಹೋರಾಡುತ್ತಿದ್ದೇ’ ಎಂದು ಸಂತ್ರಸ್ತೆಯ ತಾಯಿ ನಮಿತಾ ಅವರು ಶಾಸಕರ ಮುಂದೆ ಹೇಳಿಕೊಂಡರು.

‘ನಿಮ್ಮ ಪರವಾಗಿ ನಾನಿದ್ದೇನೆ. ಕೆಲವರಿಗೆ, ಕೆಲವು ರಾಜಕೀಯ ಪಕ್ಷಗಳಿಗೆ ಮತ್ತು ಸಂಘಟನೆಗಳಿಗೆ ಈ ಪ್ರಕರಣವೊಂದು ರಾಜಕೀಯ ಅಸ್ತ್ರವಾಗಿದ್ದು, ನಾನು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎರಡೂ ಕುಟುಂಬಗಳು ಒಂದಾಗುವುದು, ಒಟ್ಟಿಗೆ ಬಾಳುವುದು ಮುಖ್ಯ. ಈ ನಿಟ್ಟಿನಲ್ಲಿ ಮನವೊಲಿಸುವ ಪ್ರಯತ್ನವನ್ನು ಮಾಡುತ್ತೇನೆ’ ಎಂದು ಶಾಸಕ ಅಶೋಕ್ಕುಮಾರ್ ರೈ ಭರವಸೆ ನೀಡಿದರು.

‘ವಿವಾಹ ಮಾಡಿಸಿಕೊಡುವುದಾಗಿ ಯುವಕನ ತಂದೆ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಹುಡುಗನ ತಂದೆ ಬೇರೆ ರಾಜಕೀಯ ಪಕ್ಷದವರಾಗಿದ್ದರೂ ವೈಯಕ್ತಿಕ ವಿಚಾರದಲ್ಲಿ ರಾಜಕೀಯಕ್ಕಿಳಿಯದೆ ಆ ವೇಳೆ ನಾನೇ ಅವರಿಬ್ಬರು ಒಂದಾಗಿ ಬಾಳಬೇಕು ಎಂಬ ಉದ್ದೇಶದಿಂದ ದೂರು ಬೇಡ ಎಂದಿದ್ದೆ. ಆದರೆ, ಬಳಿಕ ಪರಿಸ್ಥಿತಿ ಬದಲಾಗಿದೆ. ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾದ ಯುವಕನ ಪತ್ತೆಗಾಗಿ ಎಸ್ಪಿ ಜತೆ ಮಾತನಾಡಿ ಎರಡು ದಿನಗಳೊಳಗೆ ಬಂಧಿಸುವಂತೆ ಒತ್ತಡ ಹಾಕಿದ್ದೆ. ಶುಕ್ರವಾರ ರಾತ್ರಿ ಯುವಕನ ಬಂಧನ ಆಗಿದೆ. ಆದರೆ, ಎರಡು ಕುಟುಂಬಗಳು ಬೇರೆಯಾಗದೆ ಒಂದಾಗಬೇಕು ಎನ್ನುವುದು ನನ್ನ ಆಸೆ-ಅಭಿಪ್ರಾಯ’ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ, ಪೂಡಾ ಸದಸ್ಯ ನಿಶಾಲ್ ಶೆಟ್ಟಿ, ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಜತೆಗಿದ್ದರು.

‘ಒಪ್ಪಿಕೊಂಡು ವಿವಾಹ ಮಾಡಿಸಿ’

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕ್ಕುಮಾರ್ ರೈ, ‘ಈ ವಿಚಾರವನ್ನು ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳು ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿವೆ. ಇನ್ನೊಬ್ಬರ ಮೇಲೆ ಆರೋಪ ಮಾಡಿರುವುದನ್ನು ನಾನು ಕಂಡಿದ್ದೇನೆ. ಆದರೆ, ನಾನು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ಎರಡು ಮನಸ್ಸುಗಳು ಹತ್ತಿರವಿದ್ದರೆ ವಿವಾಹ ಮಾಡಿಸಬಹುದಾಗಿತ್ತು. ಆದರೆ, ಈಗ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಆರೋಪಿ ಯುವಕನ ಪತ್ತೆಯೂ ಆಗಿದೆ. ಇನ್ನಾದರೂ ಒಪ್ಪಿಕೊಂಡು ವಿವಾಹ ಮಾಡಿಸಿ ಎಂದು ನಾನು ಹುಡುಗನ ಕಡೆಯವರಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ’ ಎಂದರು.

ಈ ವೈಯಕ್ತಿಕ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬೇಡಿ ಎಂದ ಅವರು, ‘ಅರುಣ್ ಕುಮಾರ್ ಪುತ್ತಿಲ ಅವರ ವಿಚಾರಕ್ಕೂ ನಾನು ಕೈಹಾಕಿಲ್ಲ. ರಾಜಕೀಯವಾಗಿ ಬಳಸಿಕೊಂಡಿಲ್ಲ. ರಾಜಕೀಯಕ್ಕಾಗಿ ಇಂಥ ಕೆಲಸ ಮಾಡಿಲ್ಲ’ ಎಂದು ಪುತ್ತಿಲ ಅವರು ನೀಡಿದ್ದ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿ ಪ್ರಚಾರ ಪಡೆದುಕೊಳ್ಳುತ್ತಿರುವ ಜನ ಇದ್ದಾರೆ. ಎಲ್ಲ ಖರ್ಚು ನೋಡಿಕೊಳ್ಳುತ್ತೇನೆ. ಸುಪ್ರೀಂಕೋರ್ಟ್ ವರೆಗೂ ನೇಡಿಕೊಳ್ಳುತ್ತೇನೆ ಎಂದು ಈಗ ಹೇಳಿರುವವರು ಹತ್ತಿಪ್ಪತ್ತು ದಿನ ಕಳೆದ ಬಳಿಕ ಇರುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.