ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ: ₹ 4 ಕೋಟಿ ಮೌಲ್ಯದ ರಕ್ತಚಂದನ ವಶ

Last Updated 3 ಜೂನ್ 2022, 4:01 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ಅರಣ್ಯ ಸಂಚಾರಿ ದಳ ಅಧಿಕಾರಿಗಳು ಬುಧವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ತಮಿಳುನಾಡಿನಿಂದ ಮಂಗಳೂರು ಬಂದರಿಗೆ ಮಿನಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಸುಮಾರು ₹ 4.15 ಕೋಟಿ ಮೌಲ್ಯದ ರಕ್ತ ಚಂದನ ಮರದ ದಿಮ್ಮಿಗಳ ಸಹಿತ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನ ರಾಜೇಶ್ ರೆಡ್ಡಿ, ಕೇರಳ ಆನೆಕ್ಕಲ್‌ನ ಸುಭಾಸ್, ಶಾಮೀರ್ ಮತ್ತು ಮಹಮ್ಮದ್ ಕುಂಞಿ, ತಮಿಳುನಾಡು ತಿರುವೆಳ್ಳೂರಿನ ಪಾಲರಾಜ್, ದಿನೇಶ್ ಕುಮಾರ್ ಹಾಗೂ ಕೊಯಮತ್ತೂರಿನ ಅನಿಲ್ ಕುಮಾರನ್ನು ಬಂಧಿತರು.

ಮಂಗಳೂರು-ಉಡುಪಿ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ನೇತೃತ್ವದ ತಂಡ ಮೂಲ್ಕಿ ಸಮೀಪದ ಕೆಂಚನಕೆರೆ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಬಂದರು ಕಡೆ ಹೋಗುತ್ತಿದ್ದಮಿನಿ ಲಾರಿ ನಿಲ್ಲಿಸಿ ತಪಾಸಣೆ ನಡೆಸಿದಾಗ 316 ರಕ್ತ ಚಂದನ ಮರದ ದಿಮ್ಮಿಗಳು ಪತ್ತೆಯಾದವು. ಅವುಗಳನ್ನು ಮಾವಿನ ಹಣ್ಣು ತುಂಬಿರುವ ಗೋಣಿ ಚೀಲಗಳಿಂದ ಮುಚ್ವಲಾಗಿತ್ತು. ಮಿನಿ ಲಾರಿಗೆ ಬೆಂಗಾವಲಾಗಿದ್ದ ಮಹೇಂದ್ರ ಬೊಲೆರೊ ವಾಹನವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ, ಸಂಪತ್ ಪಟೇಲ್, ಉಪವಲಯ ಅರಣ್ಯಾಧಿಕಾರಿಗಳಾದ ಕರುಣಾಕರ ಆಚಾರ್ಯ, ಪ್ರದೀಪ ಬಿ.ಎಸ್, ಕಾಂತರಾಜ್, ವಿಕಾಸ್ ಶೆಟ್ಟಿ, ಕೃಷ್ಣಪ್ಪ ಜೆ., ಸಿಬ್ಬಂದಿ ಪಾಲ್ಗೊಂಡಿದ್ದರು. ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಹಾಗೂ ಇತರ ಅಧಿಕಾರಿಗಳು ಪ್ರಕರಣದ ಪತ್ತೆಗೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT