ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬೆಳ್ತಂಗಡಿ: ಮಾಜಿ ಶಾಸಕ ಕೆ.ವಸಂತ ಬಂಗೇರ ಅಂತಿಮ ದರ್ಶನಕ್ಕೆ ಭಾರಿ ಜನಸ್ತೋಮ

Published : 10 ಮೇ 2024, 5:10 IST
Last Updated : 10 ಮೇ 2024, 5:10 IST
ಫಾಲೋ ಮಾಡಿ
Comments
ಕಂಬಿನಿ ಮಿಡಿದ ಜನತೆ 
ಬಂಗೇರ ಅವರ ಅಂತಿಮ ದರ್ಶನ ಪಡೆಯಲು ಬಂದವರ ಕಣ್ಣಾಲಿಗಳು ತುಂಬಿದ್ದವು. ಅಗಲಿದ ನಾಯಕನಿಗೆ ಕಂಬನಿಯ ಧಾರೆ ಹರಿಸಿದರು. ಅವರಿಂದ ನೆರವು ಪಡೆಸಿದ್ದನ್ನು ಸ್ಮರಿಸಿ ಕಣ್ಣೀರಿಟ್ಟರು. ಅವರ ನೇರ ನಿರ್ಭಿಡೆಯ ನಡೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಬೆಳ್ತಂಗಡಿ ಮದ್ದಡ್ಕ ಬಂದ್‌
ಬೆಳ್ತಂಗಡಿ ಹಾಗೂ ಮದ್ದಡ್ಕ ಪಟ್ಟಣದಲ್ಲಿ ಹೊಟೇಲ್‌ಗಳು  ಹಾಗೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂಗೇರ ಅವರಿಗೆ ಗೌರವ ಸಲ್ಲಿಸಿದರು. ಅಂತಿಮ ನಮನ ಸಲ್ಲಿಸಲು ಬೆಳ್ತಂಗಡಿಯ ಅವರ ಮನೆಗೆ ತಾಲ್ಲೂಕು ಕ್ರೀಡಾಂಗಣಕ್ಕೆ ಬಳಿಕ ಕುವೆಟ್ಟು ಗ್ರಾಮದ ಅವರ ಕೇದೆ ಮನೆಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸಾಗಿ ಬಂದಿದ್ದರಿಂದ ಪಟ್ಟಣದ ರಸ್ತೆಗಳಲ್ಲಿ ಸಂಚಾರ ದಟ್ಟಣೆ  ಉಂಟಾಯಿತು.
ಆಂಬುಲೆನ್ಸ್‌ನಲ್ಲಿ ಬಂದ ಆಪ್ತ
ವಸಂತ ಬಂಗೇರ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗ್ರೇಸಿಯನ್ ವೇಗಸ್ ಅವರು ಆಂಬುಲೆನ್ಸ್ ನಲ್ಲಿ ಬಂದು ಅಂತಿಮ ದರ್ಶನ ಪಡೆದರು. ಇತ್ತೀಚೆಗೆ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ನಡೆಯಲಾಗದ ಸ್ಥಿತಿಯಲ್ಲಿದ್ದರು. ಹಾಗಾಗಿ ಅವರನ್ನು  ಮನೆಯಿಂದ ಬೆಳ್ತಂಗಡಿವರೆಗೆ ಆಂಬುಲೆನ್ಸ್‌ನಲ್ಲಿ ಕರೆತರಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT