ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಿಯಡ್ಕ | ಹಣಕಾಸು ಹಗರಣ: ಪ್ರಮುಖ ಆರೋಪಿ ಸೆರೆ

Published 6 ಜೂನ್ 2024, 13:58 IST
Last Updated 6 ಜೂನ್ 2024, 13:58 IST
ಅಕ್ಷರ ಗಾತ್ರ

ಬದಿಯಡ್ಕ: ಮುಳ್ಳೇರಿಯದ ಕಾರಡ್ಕ ಕೃಷಿಕರ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದಲ್ಲಿ ನಡೆದ ₹ 4.76 ಕೋಟಿ ಮೊತ್ತದ ವಂಚನೆಯ ಪ್ರಮುಖ ಆರೋಪಿ ಹಾಗೂ ಆತನ ಸ್ನೇಹಿತನನ್ನು ಕ್ರೈಂಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.

ಸಹಕಾರಿ ಸಂಘದ ಕಾರ್ಯದರ್ಶಿ ಕೆ.ರತೀಶನ್, ಜಬ್ಬಾರ್ ಬಂಧಿತರು. ಹಗರಣ ಗೊತ್ತಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ರತೀಶನ್ ಹಾಗೂ ಜಬ್ಬಾರ್‌, ತಮಿಳುನಾಡಿನ ನಾಮಕ್ಕಲ್‌ನ ವಸತಿಗೃಹದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಸತಿಗೃಹಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮೊಬೈಲ್ ಬಳಸದ ಕಾರಣ ಅವರ ಸುಳಿವು ಸಿಗಲಿಲ್ಲ. ಆರೋಪಿಯ ಸಂಬಂಧಿಕರು ಹಾಗೂ ಸ್ನೇಹಿತರ ಮೂಲಕ ಆರೋಪಿಗಳು ಅವಿತಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT