ಗುರುವಾರ , ನವೆಂಬರ್ 14, 2019
19 °C

ಕಾಸರಗೋಡು ಬಳಿ‌ ಟ್ಯಾಂಕರ್ ಪಲ್ಟಿ: ಅನಿಲ ಸೋರಿಕೆ

Published:
Updated:
Prajavani

ಮಂಗಳೂರು: ಕಾಸರಗೋಡು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಕಾಸರಗೋಡು ನಗರದಿಂದ ಒಂದು ಕಿಮೀ ದೂರದ ಅಡ್ಕತ್‌ ಬೈಲ್‌ನಲ್ಲಿ ಟ್ಯಾಂಕರ್ ಲಾರಿ ಮಗುಚಿ ಅನಿಲ ಸೋರಿಕೆ ಆಗಿದೆ.

ಅಪಘಾತ ನಡೆದ ಪ್ರದೇಶದ ಆಸು ಪಾಸು ಕುಟುಂಬಗಳನ್ನು ತೆರವು ಗೊಳಿಸಲಾಗಿದೆ. ಬುಧವಾರ ಬೆಳಿಗ್ಗೆ ಮೂರೂವರೆ ಗಂಟೆಗೆ ಈ ಘಟನೆ ನಡೆದಿದ್ದು, ಆಸುಪಾಸಿನ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಮಸೀದಿ, ದೇವಾಲಯಗಳಲ್ಲಿ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.

ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆಯಲಾಗಿದೆ. ಬೇರೆ ದಾರಿ ಮೂಲಕ ವಾಹನಗಳು ಸಂಚರಿಸುತ್ತಿವೆ. ಮಧ್ಯಾಹ್ನದ ತನಕ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಮಂಗಳೂರಿನಿಂದ ಕೊಯಮತ್ತೂರು ಸಾಗುತ್ತಿರುವ ಬುಲ್ಲೆಟ್ ಟ್ಯಾಂಕರ್ ಉರುಳಿದೆ. ತಾತ್ಕಾಲಿಕವಾಗಿ ಸೋರಿಕೆ ತಡೆಯಲಾಗಿದ್ದು, ಹಲವಾರು ಅಗ್ನಿಶಾಮಕ ದಳದ‌ ವಾಹನಗಳು‌ ಸ್ಥಳಕ್ಕೆ ಬಂದಿವೆ. ಅನಿಲವನ್ನು ಇನ್ನೊಂದು ಟ್ಯಾಂಕರ್‌ಗೆ ತುಂಬಿಸಲಾಗುತ್ತಿದೆ

ಪ್ರತಿಕ್ರಿಯಿಸಿ (+)