ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳಕ್ಕೆ ಸರ್ಕಾರದ ಪ್ರೋತ್ಸಾಹ ನಿರಂತರ: ಡಿ.ಕೆ.ಶಿವಕುಮಾರ್

ತಿರುವೈಲ್‌ಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಡಿಕೆಶಿ ಭೇಟಿ
Published 18 ಫೆಬ್ರುವರಿ 2024, 5:50 IST
Last Updated 18 ಫೆಬ್ರುವರಿ 2024, 5:50 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಕಂಬಳವು ನಾಡಿನ ಸಂಸ್ಕೃತಿಯ ಮೆರುಗು ಹೆಚ್ಚಿಸಿದೆ. ಈ ಕ್ರೀಡೆಯ ಮೇಲೆ ಇರುವ ಅಭಿಮಾನ ಮತ್ತು ಅದಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಇಂದು ನೋಡಿದ್ದೇನೆ. ಸರ್ಕಾರದ ಬೆಂಬಲ ಸದಾ ನಿಮಗೆ ಸಿಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರ ಹೊರವಲಯದ ವಾಮಂಜೂರಿನ ತಿರುವೈಲ್‌ನಲ್ಲಿ ಶನಿವಾರ ಆರಂಭಗೊಂಡ ತಿರುವೈಲ್‌ಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ‘ತಿರುವೈಲೋತ್ಸವ’ದಲ್ಲಿ ಮಾತನಾಡಿದ ಅವರು ಸಂಸ್ಕೃತಿ ದೇಶದ ಆಸ್ತಿಯಾಗಿದ್ದು ಅದನ್ನು ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ. ತುಳುನಾಡಿನ ಪವಿತ್ರವಾದ ಭೂಮಿ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು ವಿದ್ಯೆಯಲ್ಲೂ ಆರ್ಥಿಕವಾಗಿಯೂ, ಧಾರ್ಮಿಕವಾಗಿಯೂ ಬೆಳೆದಿರುವ ಇಲ್ಲಿ ವಿಶೇಷ ಶಕ್ತಿ ಇದ್ದು ಉದ್ಯೋಗ ಸೃಷ್ಟಿಸುವುದರಲ್ಲೂ ಮುಂದೆ ಇದೆ ಎಂದರು.

ಈ ವರ್ಷ ಬೆಂಗಳೂರಿನಲ್ಲಿ ಕಂಬಳ ನಡೆದಿದೆ. ಅಲ್ಲಿ ನೀಡಿದ ಪ್ರೋತ್ಸಾಹ ಸದಾ ಮುಂದುವರಿಯಲಿದೆ. ದೇಶದ ಹಿರಿಮೆಯಾಗಿರುವ ಕಂಬಳ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಸರ್ಕಾರದ ಆಶಯವಾಗಿದ್ದು ಅದಕ್ಕೆ ಬೇಕಾದ ಎಲ್ಲ ಬಗೆಯ ಸಹಕಾರ ನೀಡಲಾಗುವುದು ಎಂದರು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ತಿರುವೈಲು ಕಂಬಳ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಆಳ್ವ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಇನಾಯತ್ ಅಲಿ, ಪದ್ಮರಾಜ್, ನಿತಿನ್ ಶೆಟ್ಟಿ, ರಾಹುಲ್ ನಾಯಕ್ ಇದ್ದರು.

ಇದಕ್ಕೂ ಮೊದಲು ಅವರು ಬಂಟ್ವಾಳ ತಾಲ್ಲೂಕು ತುಂಬೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT