ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಣೆಲ: ಬಡ ಮಹಿಳೆಯ ಮನೆ ನಿರ್ಮಾಣ‌ ಕಾಮಗಾರಿಗೆ ಚಾಲನೆ

Published : 15 ಸೆಪ್ಟೆಂಬರ್ 2024, 13:00 IST
Last Updated : 15 ಸೆಪ್ಟೆಂಬರ್ 2024, 13:00 IST
ಫಾಲೋ ಮಾಡಿ
Comments

ಮುಡಿಪು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇವಕಿ ಅವರ ಕುಟುಂಬವು ವ್ಯವಸ್ಥಿತವಾದ ಮನೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದರು.‌ ಅವರಿಗೆ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಸೇವಾ ಬಸ್ತಿ ಪ್ರಯುಕ್ತ ಮನೆ ಯೋಜನೆ ಕಾರ್ಯಗತಗೊಳಿಸಲು ಯೋಚಿಸಲಾಗಿದೆ ಎಂದು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಸಂಸ್ಥೆ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.

ಪಜೀರು ಗ್ರಾಮದ ಪಾನೇಲ ತದ್ಮದಲ್ಲಿ ದೇವಕಿ ಎಂಬುವರಿಗೆ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ನವೆಂಬರ್ 15ರೊಳಗೆ ಅಥವಾ ಜ.3ಕ್ಕೆ ಮೊದಲು ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು‌.

ಅಸೈಗೋಳಿ ಗುಳಿಗ ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ರೈ ಪಜೀರು ಮಾತನಾಡಿದರು.

ಸೂರ್ಯನಾರಾಯಣ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಇನೋಳಿ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸೇಸಪ್ಪ ಟೈಲರ್, ನವೀನ್ ಪಾದಲ್ಪಾಡಿ, ನಿವೃತ್ತ ಪ್ರಾಂಶುಪಾಲ ಜಯರಾಮ ಪೂಂಜ ತದ್ಮ ಬಾಳಿಕೆ, ಜಯರಾಮ್ ಶೆಟ್ಟಿ ಕಂಬಳಪದವು, ಅಶೋಕ್ ಕೊಣಾಜೆ, ರಾಜೇಶ್ ಮಡಿವಾಳ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT