ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರ ಕೈಯಲ್ಲಿ ಭಾರತದ ಭವಿಷ್ಯ’

Last Updated 15 ಆಗಸ್ಟ್ 2021, 16:09 IST
ಅಕ್ಷರ ಗಾತ್ರ

ಸುರತ್ಕಲ್‌: ಇಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ)ಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್‌ ಮಾನದಂಡಗಳೊಂದಿಗೆ ಸರಳವಾಗಿ ಆಚರಿಸಲಾಯಿತು.

ಎನ್‌ಐಟಿಕೆ ನಿರ್ದೇಶಕ ಕರ್ಣಂ ಉಮಾ ಮಹೇಶ್ವರ್‌ ರಾವ್‌ ಧ್ವಜಾರೋಹಣ ನೆರವೇರಿಸಿದರು. ‘ಭಾರತದ ಸತ್ವ ಯುವ ಪೀಳಿಗೆಯಲ್ಲಿ ಅಡಗಿದೆ. ದೇಶವನ್ನು ಕಟ್ಟುವುದು ಸುದೀರ್ಘ ಪ್ರಕ್ರಿಯೆ. ಯುವಜನರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು’ ಎಂದರು.

‘ಇನ್ನು ಮುಂದೆ ಆನ್‌ಲೈನ್‌ ಶಿಕ್ಷಣ ಕೇವಲ ಆಯ್ಕೆಯಲ್ಲ, ಇದು ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನು ತರಬಲ್ಲದು’ ಎಂದು ಹೇಳಿದರು.

ಎನ್ಎಂಪಿಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಎನ್‌ಎಂಪಿಟಿಯಲ್ಲಿ ಬಂದರು ನೌಕರರು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಎನ್ಎಂಪಿಟಿ ಅಧ್ಯಕ್ಷ ಡಾ. ಎ.ವಿ.ರಮಣ ಧ್ವಜಾರೋಹಣ ನೆರವೇರಿಸಿದರು. ಸಿಐಎಸ್‌ಎಫ್, ಬಂದರಿನ ಅಗ್ನಿಶಾಮಕ ಸೇವಾ ಸಿಬ್ಬಂದಿಯಿಂದ ಪರೇಡ್ ನಡೆಯಿತು.‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಸಂಸ್ಕೃತಿ, ಸಾಧನೆಗಳನ್ನು ಸ್ಮರಿಸಲು, ಸಂಸ್ಥೆಯ ನೌಕರರು, ಅವರ ಅವಲಂಬಿತರು, ಹತ್ತಿರದ ಶಾಲೆ ಮಕ್ಕಳಿಗೆ ಪ್ರಬಂಧ, ದೇಶಭಕ್ತಿ ಗೀತೆ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT