ಗುರುವಾರ , ಜನವರಿ 28, 2021
15 °C

ಕರಾವಳಿ ಕಾವಲು ಪಡೆ ತರಬೇತಿ ಕೇಂದ್ರಕ್ಕೆ ಶೀಘ್ರ ಶಿಲಾನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಕರಾವಳಿ ಕಾವಲು ಪಡೆ ತರಬೇತಿ ಕೇಂದ್ರದ ಶಿಲಾನ್ಯಾಸ ಇನ್ನೆರಡು ತಿಂಗಳಲ್ಲಿ ನೆರವೇರಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಮಂಗಳೂರಿಗೆ ₹20 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ನೀಡಿದ್ದಾರೆ. ₹1 ಸಾವಿರ ಕೋಟಿ ಮೊತ್ತದ ಮಂಗಳೂರು ಬೆಂಗಳೂರು ರಸ್ತೆ ವಿಸ್ತಾರ ಯೋಜನೆಯನ್ನು ಪುನರ್‌ ಪರಿಶೀಲಿಸಿದ್ದು, ಫೆಬ್ರುವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ. ₹10 ಸಾವಿರ ಕೋಟಿ ವೆಚ್ಚದ ಶಿರಾಡಿ ಸುರಂಗ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. ಪ್ಲಾಸ್ಟಿಕ್‌ ಪಾರ್ಕ್‌ಗೂ ಒಪ್ಪಿಗೆ ನೀಡಲಾಗಿದ್ದು, ಕಾರ್ಕಳ–ಕುಲಶೇಖರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಗೇಲ್‌ ಪೈಪ್‌ಲೈನ್‌ ಯೋಜನೆಯಲ್ಲಿ ಕೇಂದ್ರ ಸಚಿವ ದಿ. ಅನಂತಕುಮಾರ್‌, ಈಗಿನ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಪಾತ್ರ ಮಹತ್ತರವಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು