ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು–ಅಬುಧಾಬಿ ನಡುವೆ ಇಂಡಿಗೊ ವಿಮಾನ ಆರಂಭ

Published 10 ಆಗಸ್ಟ್ 2024, 15:25 IST
Last Updated 10 ಆಗಸ್ಟ್ 2024, 15:25 IST
ಅಕ್ಷರ ಗಾತ್ರ

ಮಂಗಳೂರು: ಇಂಡಿಗೊ ವಿಮಾನಯಾನ ಸಂಸ್ಥೆಯು ಮಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಗೆ ಶುಕ್ರವಾರದಿಂದ ದೈನಂದಿನ ವಿಮಾನಯಾನ ಆರಂಭಿಸಿದೆ. ದುಬೈ ನಂತರ ಮಂಗಳೂರಿನಿಂದ ವಿಮಾನಯಾನದ ಎರಡನೇ ಸಾಗರೋತ್ತರ ತಾಣ ಇದಾಗಿದೆ.

ತನ್ನ ತಾಯಿಯೊಂದಿಗೆ ಚೆಕ್ ಇನ್ ಮಾಡಿದ ಮೊದಲ ಫ್ಲೈಯರ್, ಬಾಲಕಿ ನಂದಿಕಾ ವಿ, ಸಂಸ್ಥೆಯ ಸಿಬ್ಬಂದಿಯೊಂದಿಗೆ ಕೇಕ್ ಕತ್ತರಿಸಿದಳು. ಕ್ಯಾಪ್ಟನ್ ವಿಕರ್ ಯಾಸೀನ್ ನೇತೃತ್ವದ ವಿಮಾನ (6ಇ 1442) 180 ಪ್ರಯಾಣಿಕರೊಂದಿಗೆ ಶುಕ್ರವಾರ ರಾತ್ರಿ ರಾತ್ರಿ 9.40ಕ್ಕೆ ಅಬುಧಾಬಿಗೆ ಹೊರಟಿತು.

ಈ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅಬುಧಾಬಿಗೆ ಎರಡು ದೈನಂದಿನ ವಿಮಾನ ಯಾನ ಹೊಂದಿದಂತಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗಾಗಲೇ ದೈನಂದಿನ ವಿಮಾನಯಾನ ನಡೆಸುತ್ತಿದೆ.

ಮಂಗಳೂರು ವಿಮಾನ ನಿಲ್ದಾಣವು ಮೊದಲ ಇಂಡಿಗೊ ಅಬುಧಾಬಿ-ಮಂಗಳೂರು ವಿಮಾನಕ್ಕೆ ಸಾಂಪ್ರದಾಯಿಕ ವಾಟರ್ ಕ್ಯಾನನ್ ವಂದನೆ ಸಲ್ಲಿಸಿತು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT