ಶುಕ್ರವಾರ, ಏಪ್ರಿಲ್ 16, 2021
30 °C

ಮಂಗಳೂರು: ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸ್ವ-ಉದ್ಯಮಿಗಳ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇದೇ 6ರಿಂದ 8ರ ವರೆಗೆ ಮಹಿಳಾ ಸ್ವ-ಉದ್ಯಮಿಗಳ ಮೇಳವನ್ನು ನಗರದ ಯೆಯ್ಯಾಡಿ ಬಳಿಯ ಬಿಗ್ ಬುದ್ಧ ಕೆಫೆಯ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕಿ ಲಕ್ಷ್ಮಿ ಶೆಣೈ ಹೇಳಿದರು.

‘ಮೇಳದಲ್ಲಿ ಹದಿನೈದಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ಜೊತೆಗೆ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ಬ್ಯಾಂಕ್, ಹ್ಯಾಂಗ್ಯೊ, ಚಿಟ್ ಕಿ, ಮೊದಲಾದ ಸಂಸ್ಥೆಗಳಿಗೆ ಸಹಕಾರ ನೀಡಲಿವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡದ ಮಹಿಳಾ ಉದ್ಯಮಿ ಸಂಘ ‘ವೇದಾ’ ಹಾಗೂ ಮತ್ತಿತರ ಸಂಸ್ಥೆಗಳು ತಮ್ಮ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ. 6ರಂದು ಬಹುವಿಧದ ಸೀರೆ ಉಡುವ ವಿಧಾನ, ಮಹಿಳೋದ್ಯಮಕ್ಕೆ ಇರುವಂತಹ ವಿವಿಧ ಸಾಲ ಸೌಲಭ್ಯಗಳ ಪರಿಚಯ, ಹೆಣ್ಣುಮಕ್ಕಳ ಶೋಷಣೆಯ ಕುರಿತು ಜಾಗೃತಿಯ ಕಾರ್ಯಕ್ರಮ ನಡೆಯಲಿದೆ. 7ರಂದು ಯೋಗ, ಕವನ ವಾಚನ, ಆತ್ಮರಕ್ಷಣೆಯ ಕುರಿತು ತರಬೇತಿ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. 8ರಂದು ಮಹಿಳಾ ಚಲನಚಿತ್ರ ಪ್ರದರ್ಶನ ಹಾಗೂ ಚರ್ಚಾ ಕೂಟ ನಡೆಯಲಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿಲ್ಪಾ ಕೌಶಿಕ್‌, ಶಾಲ್ಮಲಿ ಘಾಟೆ, ಐಶಾ ಇದ್ದರು.

ಮಾಹಿತಿಗಾಗಿ ಮೊ: 9986967371 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು