ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಎಕ್ರೆ ಜಾಗದಲ್ಲಿ ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಜಾಂಬೂರಿ

Last Updated 10 ಡಿಸೆಂಬರ್ 2022, 19:01 IST
ಅಕ್ಷರ ಗಾತ್ರ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಡಿ.21ರಿಂದ 27 ರವರೆಗೆ ಅಂತರರಾಷ್ಟ್ರೀಯ ಸ್ಕೌಟ್ಸ್ –ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ನಡೆಯಲಿದ್ದು, ವಿಶ್ವಕ್ಕೆ ಒಳ್ಳೆ ಸಂದೇಶವನ್ನು ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ಕೌಟ್ಸ್ –ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ. ಮೋಹನ ಆಳ್ವ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ವಿದ್ಯಾಗಿರಿಯ 100 ಎಕರೆ ಜೊತೆ ಸಮೀಪದ 50 ಎಕ್ರೆ ಖಾಸಗಿ ಜಾಗದಲ್ಲಿ ಜಾಂಬೂರಿ ನಡೆಯಲಿದೆ. 7 ಎಕರೆಯಲ್ಲಿ 42 ವಿವಿಧ ಕಸರತ್ತುಗಳು ನಡೆಯಲಿವೆ. ಕೃಷಿ, ಕಲಾ, ವಿಜ್ಞಾನ, ಆಹಾರ , ಪುಸ್ತಕ, ಸ್ವದೇಶಿ ಮೇಳಗಳು ಆಕರ್ಷಣೆಯಾಗಿವೆ. 12 ಎಕರೆಯಲ್ಲಿ ತೋಟಗಾರಿಕಾ ಬೆಳೆಗಳು, ತರಕಾರಿ, ಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ರಕ್ಷಣಾ ಇಲಾಖೆ ಮತ್ತು ಇಸ್ರೊ ಸಹಕಾರದೊಂದಿಗೆ ವಿಜ್ಞಾನದ ಮಾದರಿ ಪ್ರದರ್ಶನ ನಡೆಯಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದರು.

ಜನಪದ ಮತ್ತು ಆಧುನಿಕ ಶೈಲಿಯ ಕಲಾ ಕೃತಿಗಳ ರಚನೆ ಮತ್ತು ಪ್ರದರ್ಶನ ನಡೆಯಲಿವೆ. ಛಾಯಾಚಿತ್ರ ಸರ್ಧೆಗೆ ಬಂದಿದ್ದ 9 ಸಾವಿರ ಕಲಾಕೃತಿಗಳ ಪೈಕಿ ಆಯ್ದ 300 ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದರು.

10 ಎಕರೆ ಖಾಸಗಿ ಜಾಗದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಅರಣ್ಯ ನಿರ್ಮಿಸಲಾಗಿದೆ. 30 ಶ್ರೇಷ್ಠ ಜಾದೂಗಾರರಿಂದ ಪ್ರದರ್ಶನ, ಗಾಳಿಪಟಗಳ ಹಾರಾಟ, ಗೊಂಬೆಯಾಟಗಳ ಪ್ರದರ್ಶನವಿದೆ. 500 ವಿವಿಧ ಮಳಿಗೆಗಳು ಮಾರಾಟ ಪ್ರದರ್ಶನ ನಡೆಯಲಿವೆ ಎಂದರು.

ಪುರಸಭೆ ಸಹಯೋಗದೊಂದಿಗೆ ಪ್ರಮುಖ 8 ರಸ್ತೆಗಳಲ್ಲಿ ಸ್ವಚ್ಛತಾ ಅಂದೋಲನ, 3 ಸಾವಿರ ವಿದ್ಯಾರ್ಥಿಗಳಿಂದ ಯುವ ಮ್ಯಾರಥನ್ ನಡೆಯಲಿವೆ.

50 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಕುಳಿತು ಕೊಳ್ಳುವ ಬಯಲು ಮಂದಿರ ನಿರ್ಮಿಸಿದ್ದು, ಅಲ್ಲಿ ಯೋಗ, ಧ್ಯಾನ, ಶಂಕರ್ ಮಹದೇವನ್, ವಿಜಯ ಪ್ರಕಾಶ್ ಮತ್ತಿತರ ಪ್ರಮುಖರಿಂದ ಸಂಗೀತ ಸಂಜೆ ನಡೆಯಲಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯಪಾಲರು ಬರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT