ತಿರುವೈಲು: ಸಂಕುಪೂಂಜ–ದೇವುಪೂಂಜ ಕಂಬಳ

ಮಂಗಳೂರು: ನಗರ ಹೊರವಲಯದ ವಾಮಂಜೂರಿನ ತಿರುವೈಲಿನಲ್ಲಿ ಗುತ್ತಿನ ಕಂಬಳಕ್ಕೆ ಶನಿವಾರ ಆರಂಭಗೊಂಡಿತು.
ವಾಮಂಜೂರು ತಿರುವೈಲುಗುತ್ತಿನ ಹೊನಲು ಬೆಳಕಿನ ‘ಸಂಕುಪೂಂಜ- ದೇವುಪೂಂಜ’ ಜೋಡುಕರೆ ಬಯಲು ಕಂಬಳವು ಅದ್ದೂರಿಯಾಗಿ ಬಿರುಸಿನಿಂದ ನಡೆಯುತ್ತಿದೆ.
ಕೋವಿಡ್ ಪರಿಣಾಮ ಈ ಬಾರಿ ಕಂಬಳ ವಿಳಂಬವಾಗಿ ಆರಂಭಗೊಂಡಿದ್ದು, ಬಂಟ್ವಾಳ ತಾಲ್ಲೂಕಿನ ಹೊಕ್ಕಾಡಿಗೋಳಿಯ ‘ವೀರ-ವಿಕ್ರಮ’ ಜೋಡುಕರೆ ಕಂಬಳ, ಐಕಳದ ‘ಕಾಂತಬಾರೆ– ಬೂದಬಾರೆ’ ಕಂಬಳದ ಬಳಿಕ ಇದೀಗ ಈ ಋತುವಿನ ಮೂರನೇ ಕಂಬಳ ತಿರುವೈಲು ಗುತ್ತಿನಲ್ಲಿ ‘ಸಂಕುಪೂಂಜ- ದೇವುಪೂಂಜ’ ಹೆಸರಲ್ಲಿ ನಡೆಯುತ್ತಿದೆ.
ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನಲ್ಲಿ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 150ಕ್ಕೂ ಹೆಚ್ಚು ಕೋಣಗಳ ಜತೆ ಭಾಗವಹಿಸಿದ್ದು, ಕರಾವಳಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಗಣೇಶ್ ರಾವ್ ಚಾಲನೆ ನೀಡಿದರು. ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಮತ್ತಿತರ ಪ್ರಮುಖರು ಪಾಲ್ಗೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.