ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್-ಪಿಡಿಎಲ್: ಒಡಂಬಡಿಕೆಗೆ ಸಹಿ

ಸಣ್ಣ ಉದ್ದಿಮೆದಾರರಿಗೆ ಅನುಕೂಲ: ಬ್ಯಾಂಕ್‍ನ ಎಂಡಿ ಮಹಾಬಲೇಶ್ವರ ಎಂ.ಎಸ್
Last Updated 24 ಫೆಬ್ರುವರಿ 2023, 16:07 IST
ಅಕ್ಷರ ಗಾತ್ರ

ಮಂಗಳೂರು: ಶತಮಾನೋತ್ಸವ ವರ್ಷಾಚರಣೆ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‍ನಲ್ಲಿ ನೋಂದಾ ಯಿಸಿದ ಠೇವಣೆ ರಹಿತ ಎನ್‍ಬಿಎಫ್‍ಸಿ ಸಂಸ್ಥೆಯಾದ ಪೈಸಾಲೊ ಡಿಜಿಟಲ್ ಲಿಮಿ ಟೆಡ್ (ಪಿಡಿಎಲ್) ಸಹಸಾಲ ನೀಡುವಿಕೆ ಕುರಿತ ಒಡಂಬಡಿಕೆಗೆ ಸಹಿ ಹಾಕಿವೆ.

ದೇಶದ ಸೂಕ್ಷ್ಮ ಹಾಗೂ ಸಣ್ಣ ಉದ್ಯಮ (ಎಂಎಸ್‍ಇ) ವಿಭಾಗಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಹಾಗೂ ಪ್ರೋತ್ಸಾಹ ನೀಡಲು ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್‍ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆದ್ಯತಾ ವಲಯದ ಸಣ್ಣ ಉದ್ದಿಮೆದಾರರ ಸಾಲದ ಹರಿವನ್ನು ಸುಧಾರಿಸಲು ಬ್ಯಾಂಕ್‍ಗಳು ಹಾಗೂ ಎನ್‍ಬಿಎಫ್‍ಸಿಗಳು ಜಂಟಿಯಾಗಿ ಸಾಲ ನೀಡಲಿವೆ.

ಪೈಸಾಲೊ ಡಿಜಿಟಲ್ ಉಪ ವ್ಯವಸ್ಥಾಪಕ ನಿರ್ದೇಶಕ ಶಂತನು ಅಗರ್‌ವಾಲ್ ಮಾತನಾಡಿ, ‘ಕರ್ಣಾಟಕ ಬ್ಯಾಂಕ್ ಹಾಗೂ ಪೈಸಾಲೊ ಡಿಜಿಟಲ್ ಸಂಸ್ಥೆಗಳ ನಡುವಿನ ಒಪ್ಪಂದದಿಂದ ಸುಮಾರು 365 ಮಿಲಿಯನ್ ಅಂಡರ್ ಬ್ಯಾಂಕ್ಡ್‌ ಹಾಗೂ ಅಂಡರ್ ಸರ್ವಿಸ್ಡ್‌ ಜನಸಂಖ್ಯೆಯ 8 ಲಕ್ಷ ಕೋಟಿಯ ಸಣ್ಣ ಮೊತ್ತದ ಸಾಲ ನೀಡುವ ಬಹುದೊಡ್ಡ ಅವಕಾಶವನ್ನು ಎದುರು ನೋಡುತ್ತಿದ್ದೇವೆ’ಎಂದರು.

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್‍ದಾಸ್ ಪೈ ಹಾಗೂ ಪೈಸಾಲೊ ಡಿಜಿಟಲ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಶಂತನು ಅಗರ್‌ವಾಲ್ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.

ಬ್ಯಾಂಕ್‌ನ ಕ್ರೆಡಿಟ್ ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ರಾಜ ಬಿ.ಎಸ್., ಕ್ರೆಡಿಟ್ ಸ್ಯಾಂಕ್ಷನ್ ವಿಭಾಗದ ಜನರಲ್ ಮ್ಯಾನೇಜರ್ ರವಿಚಂದ್ರನ್ ಎಸ್, ದೆಹಲಿ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಗದೀಶ್ ಕೆ.ಎಸ್. ಇದ್ದರು.

ಬ್ಯಾಂಕ್‍ನ ಎಂಡಿ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು, ‘ಸಹ ಸಾಲ ನೀಡುವಿಕೆ ಮಾದರಿಯು ಆದ್ಯತಾ ವಲಯಗಳಿಗೆ ಸಾಲ ನೀಡುವ ವಿನೂತನ ಮಾರ್ಗಗಳಲ್ಲಿ ಒಂದಾಗಿದೆ. ಈ ವ್ಯವಸ್ಥೆಯಿಂದ ಕರ್ಣಾಟಕ ಬ್ಯಾಂಕ್ ಹಾಗೂ ಪೈಸಾಲೊ ಡಿಜಿಟಲ್ ಸಂಸ್ಥೆ ನಡುವೆ ಕ್ರಿಯಾತ್ಮಕ ಸಂಬಂಧ ಏರ್ಪಟ್ಟಿದೆ. ಸಣ್ಣ ಉದ್ದಿಮೆದಾರರಿಗೆ ಹಣಕಾಸಿನ ಸಹಾಯವನ್ನು ಮಾಡಲು ಇದರಿಂದ ಉತ್ತೇಜನ ಸಿಗುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT