ಮಂಗಳೂರು/ ಉಡುಪಿ: ಆರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದ ಮಂಗಳೂರಿನ ಚಿಂತನ್ ಎಸ್. ಶೆಟ್ಟಿ ಹಾಗೂ ನಾಲ್ಕು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಗೆದ್ದ ಎಸ್.ಆರ್. ರಚನಾ ರಾವ್ ಅವರು ಕರ್ನಾಟಕ ಕ್ರೀಡಾಕೂಟದ ಈಜು ಸ್ಪರ್ಧೆಗಳಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ಗಳಾಗಿ ಹೊರಹೊಮ್ಮಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ–ಉಡುಪಿ ಜಿಲ್ಲಾಡಳಿತವು ಮಂಗಳೂರಿನ ಎಮ್ಮೆಕೆರೆಯ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಿದ್ದ ಈಜು ಸ್ಪರ್ಧೆಗಳಲ್ಲಿ ಚಿಂತನ್ ಶೆಟ್ಟಿ ಬುಧವಾರ ಪುರುಷರ 100 ಮೀ ಬಟರ್ ಫ್ಲೈ (58.47 ಸೆಕೆಂಡ್) ಮತ್ತು 200 ಮೀ ಮೆಡ್ಲೆ (2 ನಿ. 14.64 ಸೆಕೆಂಡ್) ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು. ಈ ಕೂಟದ 100 ಮೀಟರ್ ಫ್ರೀ ಸ್ಟೈಲ್, 200 ಮೀ ಫ್ರೀ ಸ್ಟೈಲ್, 50 ಮೀ ಬಟರ್ಫ್ಲೈ ಹಾಗೂ 4X100 ಮೀ ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಅವರು ಮಂಗಳವಾರ ಚಿನ್ನ ಗೆದ್ದಿದ್ದರು. ಪುರುಷರ 4X100 ಮೆಡ್ಲೆ ರಿಲೇಯಲ್ಲಿ ಮಂಗಳೂರು ಬಿ ತಂಡವು ಬೆಳ್ಳಿ ಗೆಲ್ಲುವಲ್ಲೂ ಚಿಂತನ್ ಶೆಟ್ಟಿ ಕೊಡುಗೆ ಇದೆ.

ರಚನಾ ರಾವ್ ಅವರು ಮಹಿಳೆಯರ 50 ಮೀ ಬ್ರೆಸ್ಟ್ ಸ್ಟ್ರೋಕ್ ( 36.35 ಸೆಕೆಂಡ್) ಹಾಗೂ 50 ಮೀ ಫ್ರೀಸ್ಟೈಲ್ (29.27 ಸೆ) ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದರು. ಮಂಗಳವಾರ 100 ಮೀ ಬ್ರೆಸ್ಟ್ ಸ್ಟ್ರೋಕ್ ಮತ್ತು 50 ಮೀ ಬಟರ್ ಫ್ಲೈ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ 100 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು. ಅವರು ಮೂರು ರಿಲೇ ಸ್ಪರ್ಧೆಗಳಲ್ಲಿ ಬೆಳ್ಳಿ ಗೆದ್ದ ತಂಡದಲ್ಲಿದ್ದರು.

ಫಲಿತಾಂಶಗಳು: ಈಜು: ಪುರುಷರು: 200 ಮೀ. ಬ್ರೆಸ್ಟ್ ಸ್ಟ್ರೋಕ್: ಸೂರ್ಯ ಜೋಯಪ್ಪ ಒ.ಆರ್. (ಬೆಂಗಳೂರು ದಕ್ಷಿಣ)–1, ಕಾಲ: 2 ನಿ. 48.92 ಸೆ; ವರ್ಧನ್ ದೀಪಕ್ ರೈ (ದ.ಕ.)–2; ಪಾರ್ಥ ಪಿ.ಶೆಟ್ಟಿ (ಮಂಡ್ಯ)–3; 200 ಮೀ. ಬ್ಯಾಕ್ ಸ್ಟ್ರೋಕ್: ಧ್ಯಾನ್ ಎಂ (ಬೆಂಗಳೂರು)–1, ಕಾಲ: 2 ನಿ. 24.44 ಸೆ; ದಿಗಂತ್ ವಿ.ಎಸ್ (ದಕ್ಷಿಣ ಕನ್ನಡ)–2; ವಫಿ ಅಬ್ದುಲ್ ಹಕೀಂ (ದ.ಕ)–3; 100 ಮೀ ಬಟರ್ ಫ್ಲೈ: ಚಿಂತನ್ ಎಸ್. ಶೆಟ್ಟಿ, ಕಾಲ: 58.47 ಸೆ.; ಅಲೈಸ್ಟರ್ ಸ್ಯಾಮ್ಯುವೆಲ್ ರೇಗೊ (ಮಂಗಳೂರು)–2; ಅನ್ವಿತ್ ರೈ (ದ.ಕ.)–3; 4X100 ಮೆಡ್ಲೆ ರಿಲೇ: ಮಂಗಳೂರು ಎ, ಕಾಲ:4 ನಿ.26.67 ಸೆ.; ಮಂಗಳೂರು ಬಿ–2, ಬೆಂಗಳೂರು–3; 800 ಮೀ ಫ್ರೀಸ್ಟೈಲ್: ಧ್ರುವ ಬಿ (ಬೆಂಗಳೂರು)–1, ಕಾಲ: 9 ನಿ. 16.18 ಸೆ; ಧೋನೀಶ್ ಎನ್ (ಬೆಂಗಳೂರು)–2; ಸಚಿನ್ ವಿಶ್ವನಾಥ್ (ಬೆಂಗಳೂರು)–3; 200 ಮೀ ಮೆಡ್ಲೆ: ಚಿಂತನ್ ಶೆಟ್ಟಿ (ಮಂಗಳೂರು)–1, ಕಾಲ: 2 ನಿ 14.64 ಸೆ; ಸೂರ್ಯ ಜೋಯಪ್ಪ ಒ.ಆರ್. (ಬೆಂಗಳೂರು)–2; ಗ್ಯಾನ್ ಡಿ (ಮಂಗಳೂರು)–3; 400 ಮೀ ಫ್ರೀಸ್ಟೈಲ್: ಧೋನೀಶ್ ಎನ್ (ಬೆಂಗಳೂರು)–1, ಕಾಲ: 4ನಿ 30.44 ಸೆ; ಧ್ರುವ ಬಿ (ಬೆಂಗಳೂರು)–2; ಆರ್.ಅಮನ್ ರಾಜ್ (ಪುತ್ತೂರು)–3; 50 ಮೀ ಬ್ರೆಸ್ಟ್ ಸ್ಟ್ರೋಕ್: ಸೂರ್ಯ ಜೋಯಪ್ಪ ಒ.ಆರ್. (ಬೆಂಗಳೂರು ದಕ್ಷಿಣ), ಕಾಲ: 31.67 ಸೆ; ವರ್ಧನ್ ದೀಪಕ್ ರೈ (ಪುತ್ತೂರು)–2; ದಿಗಂತ್ ವಿ.ಎಸ್ (ಪುತ್ತೂರು)–3; 50 ಮೀ ಫ್ರೀಸ್ಟೈಲ್: ಧ್ಯಾನ್ ಎಂ (ಬೆಂಗಳೂರು)–1, ಕಾಲ: 4.71 ಸೆ; ಅವಿತ್ ರೈ (ಪುತ್ತೂರು)–2; ಧೋನೀಶ್ ಎನ್ (ವಿಜಯನಗರ)–3;

ಮಹಿಳೆಯರು: 200 ಮೀ ಬ್ರೆಸ್ಟ್ ಸ್ಟ್ರೋಕ್; ಪ್ರತೀಕ್ಷಾ ಎನ್.ಶೆಣೈ (ದ.ಕ.)–1, 3 ನಿ.9.81 ಸೆ; ರಿಯಾನ ಧೃತಿ ಫರ್ನಾಂಡಿಸ್ (ಮಂಗಳೂರು)–2; 800 ಮೀ ಫ್ರೀಸ್ಟೈಲ್: ನಮ್ರತಾ ಶೆಟ್ಟಿ (ದಕ್ಷಿಣ ಕನ್ನಡ)–1, 19 ನಿ. 16.23 ಸೆ.; 4X100 ಫ್ರೀ ಸ್ಟೈಲ್ ರಿಲೇ: ಮಂಗಳೂರು ಬಿ–1, ಕಾಲ: 5 ನಿ. 05.03 ಸೆ.; ಮಂಗಳೂರು ಎ–2; 200 ಮೀ ಮೆಡ್ಲೆ: ರಿಯಾನಾ ಧೃತಿ ಫರ್ನಾಂಡಿಸ್–1, ಕಾಲ: 2 ನಿ.45.64 ಸೆ; ತನ್ಮಯಿ ಧರ್ಮೇಶ್ (ಬೆಂಗಳೂರು)–2; ಕೃತಿಕಾ ಪಿ (ಬೆಂಗಳೂರು)–3; 400 ಫ್ರೀ ಸ್ಟೈಲ್: ಪೂರ್ವಿ ಎಂ (ದಕ್ಷಿಣಕನ್ನಡ)–1, ಕಾಲ: 5 ನಿ. 52.76 ಸೆ.; ಕೃತಿಕಾ (ಬೆಂಗಳೂರು)–2; ನಮ್ರತಾಶೆಟ್ಟಿ (ದಕ್ಷಿಣ ಕನ್ನಡ)–3; 50 ಮೀ ಬ್ರೆಸ್ಟ್ ಸ್ಟ್ರೋಕ್: ರಚನಾ ರಾವ್ (ಮಂಗಳೂರು), ಕಾಲ: 36.35 ಸೆ; ಪ್ರತೀಕ್ಷಾ ಎನ್.ಶೆಣೈ (ಪುತ್ತೂರು)–2; ರಿಯಾನಾ ಧೃತಿ ಫರ್ನಾಂಡಿಸ್ (ಮಂಗಳೂರು)–3; 50 ಮೀ ಫ್ರೀಸ್ಟೈಲ್: ರಚನಾ ರಾವ್ (ಮಂಗಳೂರು), ಕಾಲ: 29.27; ಪ್ರತೀಕ್ಷಾ ಎನ್.ಶೆಣೈ (ಪುತ್ತೂರು)–2; ಪೂರ್ವಿ ಎಂ.(ದ.ಕ.)–3.

ಅಥ್ಲೆಟಿಕ್ಸ್: ಪುರುಷರು: ಟ್ರಿಪಲ್ ಜಂಪ್: ಯಶಸ್ ಗೌಡ (ಮಂಡ್ಯ)–1, ದೂರ: 15.28 ಮೀ; ರಾಧಾಕೃಷ್ಣ (ಬೆಂಗಳೂರು ನಗರ)–2; ಅಬ್ದುಲ್ ಮುನಾಫ್ (ಬೆಂಗಳೂರು)–3; 1500 ಮೀ. ಓಟ: ವೈಭವ್ ಪಾಟೀಲ್ (ಬೆಂಗಳೂರು)–1, ಕಾಲ: 3ನಿ.55.42 ಸೆ., ಕಮಲ್ ಎಸ್.(ಬೆಂಗಳೂರು)–2, ಕಲ್ಯಾಣ್ ಜೆ.ಆರ್. (ಬೆಂಗಳೂರು)–3; 400 ಮೀ.ಓಟ: ಶ್ರಿನಾಥ್ (ಬೆಂಗಳೂರು)–1, ಕಾಲ: 48.ನಿ.80 ಸೆ.; ದಯಾನಂದ (ಬೆಳಗಾವಿ)–2, ಭುವನ್ (ಬೆಂಗಳೂರು)–3; 3000 ಮೀ.ಸ್ಟೀಪಲ್ ಚೇಸ್: ನಾಗರಾಜ್ ವೆಂಕಟೇಶ್ ದಿವಟೆ (ಧಾರವಾಡ)–1, ಕಾಲ: 9 ನಿ.36.24ಸೆ:, ಪಟಪ್ಪ ಚಂದ್ರಪ್ಪ (ಧಾರವಾಡ)–2, ಭೀಮಾಶಂಕರ್ (ಯಾದಗಿರಿ)–3.

ಮಹಿಳೆಯರು: 1500 ಮೀ ಓಟ: ಸ್ಮಿತಾ ಡಿ.ಆರ್. (ಹಾಸನ)–1, ಕಾಲ: 4 ನಿ.55.98 ಸೆ., ರೇಖಾ ಬಸಪ್ಪ (ಬೆಳಗಾವಿ)–2, ಶಿಲ್ಪಾ (ಬೆಳಗಾವಿ)–3; ಹ್ಯಾಮರ್ ಥ್ರೋ: ಅಮ್ರೀನ್ (ದ.ಕ.)–1, ದೂರ: 44.20 ಮೀ., ನಿಶೆಲ್ ಡೆಲ್ಪಿನಾ ಡಿಸೋಜ (ದ.ಕ.)–2, ಸ್ಪ್ರುಹಾ ನಾಯ್ಕ್ (ಬೆಳಗಾವಿ)–3; ಡಿಸ್ಕಸ್ ಥ್ರೋ: ಸುಷ್ಮಾ ಬಿ. (ದಕ್ಷಿಣ ಕನ್ನಡ)–1, ದೂರ: 42.63 ಮೀ, ಸುಷ್ಮಾ ಎಂ.ಎನ್. (ಮೈಸೂರು)–2, ಐಶ್ವರ್ಯ ಮಾರುತಿ (ಬೆಳಗಾವಿ)–3; ಟ್ರಿಪಲ್ ಜಂಪ್: ಪವಿತ್ರಾ (ಉಡುಪಿ)–1, ಅಂತರ: 12.80 ಮೀ; ನಿತ್ಯಶ್ರೀ (ಬೆಂಗಳೂರು ಗ್ರಾಮೀಣ)–2; ಸ್ಮಿತಾ ಪ್ರಮೋದ್ ಕಾಕತ್ಕರ್ (ಬೆಳಗಾವಿ)–3; 3000 ಮೀ. ಸ್ಟೀಪಲ್ ಚೇಸ್: ದೀಕ್ಷಾ (ಶಿವಮೊಗ್ಗ)–1, ಕಾಲ: 11 ನಿ. 58.25 ಸೆ.; ನಕೊಶಾ ಮಂಗಾಂಕರ್ (ಬೆಳಗಾವಿ)–2, ಸ್ಪಂದನಾ (ಹೊಸಕೋಟೆ)–3; 400 ಮಿ. ಓಟ: ಮೇಘಾ (ಹುಬ್ಬಳ್ಳಿ)–1, ಕಾಲ 55ನಿ. 49 ಸೆ., ಅಭಿಜ್ಞಾ (ಶಿವಮೊಗ್ಗ) –2, ಮಾನಸ (ಬೆಂಗಳೂರು)–3.

ಬ್ಯಾಡ್ಮಿಂಟನ್: ಜಿಲಾನಿಶ್ ಚಾಂಪಿಯನ್

ಉಡುಪಿಯ ಜಿಲಾನಿಶ್ ಆಶ್ಲೆ ಪಿಂಟೊ ಮತ್ತು ಮಂಗಳೂರಿನ ಟ್ರಿವಿಯಾ ಕ್ರೇಡಾ ವೇಗಸ್ ಅವರು ಮಂಗಳೂರಿನಲ್ಲಿ ನಡೆದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಸಿಂಗಲ್ಸ್ ಮಹಿಳಾ ಸಿಂಗಲ್ಸ್ನಲ್ಲಿ ಚಾಂಪಿಯನ್ಗಳಾಗಿ ಹೊರಹೊಮ್ಮಿದರು. ಜಿಲಾನಿಶ್ ಅವರು ಫೈನಲ್ ಪಂದ್ಯದಲ್ಲಿ ಉಡುಪಿಯವರೇ ಆದ ಶೋಧನ್ ನಕ್ಷತ್ರಿ ವಿರುದ್ಧ 21–10 ಮತ್ತು 21–13 ರಲ್ಲಿ ಜಯಗಳಿಸಿದರು. ಬೆಂಗಳೂರಿನ ಯುವರಾಜ್ ಎಸ್. ಕಂಚಿನ ಪದಕ ಗೆದ್ದರು. ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಟ್ರಿವಿಯಾ ಅವರು ಬೆಂಗಳೂರಿನ ಆನಿಯಾ ಸುರೇಶ್ ವಿರುದ್ಧ 21-6 21-11ರಲ್ಲಿ ಜಯಗಳಿಸಿದರು. ಮಂಗಳೂರಿನ ಅದಿತಿ ಆಚಾರ್ಯ ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.