ಕಾಸರಗೋಡು: ಆಲಂಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಧ್ಯಾಹ್ನ ವಿತರಿಸಲಾದ ಆಹಾರ ಸೇವಿಸಿ 60 ಮಕ್ಕಳು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆಹಾರ ಸೇವಿಸಿದ ಹಿರಿಯ ಪ್ರಾಥಮಿಕ ವಿಭಾಗದ ಮಕ್ಕಳು ವಾಂತಿ ಮಾಡಿದ್ದರು. ಚಿಕಿತ್ಸೆ ಬಳಿಕ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ಜಿಲ್ಲಾ ಮಟ್ಟದ ಆರ್ಆರ್ಟಿ ಸಭೆ ಕರೆಯಲಾಗಿದ್ದು, ಶಾಲೆಗೆ ವಿತರಣೆಯಾಗುತ್ತಿರುವ ಹಾಲು ಮತ್ತಿತರ ಸಾಮಗ್ರಿಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು, ಡಿವೈಎಸ್ಪಿ ಸಿ.ಕೆ.ಸುನಿಲ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮಾಹಿತಿ ಸಂಗ್ರಹಿಸಿದ್ದಾರೆ.

ಆರೋಪಿ ಬಂಧನ

ಕಾಸರಗೋಡು: ಮಜೀರ್ ಪಳ್ಳ ಪ್ರದೇಶದ ದೇವಾಲಯ ಮತ್ತು ಮಸೀದಿಯ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಿದ ಆರೋಪದಲ್ಲಿ ಮುಹಮ್ಮದ್ ಅಶ್ರಫ್ (37) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಕಳವು ಪ್ರಕರಣ ನಡೆದಿತ್ತು.

ಗಾಯಾಳು ಸಾವು

ಕಾಸರಗೋಡು: ಪಳ್ಳಿಕ್ಕರೆ ಮೇಲ್ಸೇತುವೆ ಬಳಿ ನ.19ರಂದು ರಾತ್ರಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಆರಂಗಾಡಿ ನಿವಾಸಿ ಸಿ.ಎಚ್.ಅಬೂಬಕ್ಕರ್ (76) ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಇಲ್ಲಿನ ಮರದ ಮಿಲ್ನಲ್ಲಿ ಕಾವಲುಗಾರರಾಗಿದ್ದರು.

ಕುಸಿದು ಬಿದ್ದು ಸಾವು

ಕಾಸರಗೋಡು: ಕಳ್ಳಾರ್ ಅರಿಂಗಲ್ ನಿವಾಸಿ ಪಿ.ಕುಂಞಿಕಣ್ಣನ್ (51) ಹಿತ್ತಿಲಲ್ಲಿ ಕುಸಿದು ಮೃತಪಟ್ಟಿದ್ದಾರೆ. ಅವರನ್ನು ತಕ್ಷಣ ಪೂಡಂಗಲ್ಲು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.