ಕಾಸರಗೋಡು: ಹೆತ್ತ ತಾಯಿಯನ್ನೇ ಮಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಕೊಂದಿರುವ ಘಟನೆ ಮಂಜೇಶ್ವರ ತಾಲ್ಲೂಕಿನ ವರ್ಕಾಡಿಯ ನೆಲ್ಲೆಂಗಿ ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಹಿಲ್ಡಾ ಮೊಂಥೆರೋ (60) ಕೊಲೆಗೀಡಾದವರು.

ಮೃತ ಮಹಿಳೆಯ ಪುತ್ರ ಮೆಲ್ವಿನ್ ಮೊಂಥೆರೋ ಕೃತ್ಯ ಎಸಗಿದ್ದಾನೆ. ಗುರುವಾರ ಬೆಳಗಿನ ಜಾವ ತಾಯಿ ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅರೆಬೆಂದ ದೇಹವನ್ನು ಸಮೀಪದ ಪೊದೆಯಲ್ಲಿ ಎಸೆದಿದ್ದಾನೆ. ನಂತರ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಸಂಬಂಧಿಕ ಲೋಲಿತಾ (30) ಎಂಬ ಮಹಿಳೆಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಆಕೆಯ ಮೇಲೂ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯು ಕಿರಿಚಿಕೊಂಡ ಶಬ್ದ ಕೇಳಿ ಸಾರ್ವಜನಿಕರು ಸ್ಥಳಕ್ಕೆ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಟ್ಟಡ ನಿರ್ಮಾಣ ಕಾರ್ಮಿಕನಾಗಿರುವ ಮೆಲ್ವಿನ್ ತಾಯಿ ಜೊತೆ ವಾಸವಾಗಿದ್ದ. ಹಿಲ್ಡಾ ಅವರ ಇನ್ನೊಬ್ಬ ಪುತ್ರ ಆಲ್ವಿನ್ ಮೊಂಥೆರೋ ಕೊಲ್ಲಿರಾಷ್ಟ್ರದಲ್ಲಿ ನೌಕರಿಯಲ್ಲಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.