ಉಳ್ಳಾಲ: ‘ಕೇರಳದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ, ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.

ಗಡಿಭಾಗದ ತಲಪಾಡಿ ಚೆಕ್ಪೋಸ್ಟ್ನಲ್ಲಿ ಶುಕ್ರವಾರ ಕೋವಿಡ್–19 ತಪಾಸಣಾ ಕಾರ್ಯಗಳ ಪ್ರಕ್ರಿಯೆಗಳನ್ನು ಪರಿಶೀಲಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ಈಗಾಗಲೇ ಲಸಿಕೆ ಪಡೆದವರಿಗೆ ಮತ್ತು ನೆಗೆಟಿವ್ ವರದಿ ಇರುವವರಿಗೆ ಜಿಲ್ಲೆಯ ಪ್ರವೇಶಕ್ಕೆ ಅವಕಾಶವಿದೆ. ಈ ಮಾರ್ಗಸೂಚಿಯನ್ನು ಇನ್ನಷ್ಟು ಕಟ್ಟುನಿಟ್ಟು ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕೆಲವೊಂದು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಮಾರ್ಗದರ್ಶನದಂತೆ ಇನ್ನೆರಡು ದಿನಗಳಲ್ಲಿ ಕೋವಿಡ್ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನು ಜಿಲ್ಲಾಡಳಿತ ರೂಪಿಸಲಿದೆ’ ಎಂದು ತಿಳಿಸಿದರು.

‘ಶನಿವಾರ ಜಿಲ್ಲಾ ವಿಪತ್ತು ಪ್ರಾಧಿಕಾರದ ಸಭೆ ನಡೆಯಲಿದೆ. ಈ ವೇಳೆಯೂ ಹೆಚ್ಚಿನ ನಿಯಮ ಜಾರಿಗೊಳಿಸುವ ಚರ್ಚೆ ನಡೆಯಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಬಹಳಷ್ಟು ಜನರ ಬರುವಿಕೆ, ಕಾರ್ಯಕ್ರಮಗಳಲ್ಲಿ ನಿಯಂತ್ರಣ, ಅಂತರ್ರಾಜ್ಯ ಬಸ್ಗಳ ಸಂಚಾರ, ಬೇರೆ ರಾಜ್ಯದಿಂದ ಬರುವ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚುವರಿ ನಿಯಮಗಳನ್ನು ಹಾಕುವ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜತಗೆ ಚರ್ಚಿಸಲಿದ್ದೇವೆ’ ಎಂದು ತಿಳಿಸಿದರು.

‘ಈಗಾಗಲೇ ಜಿಲ್ಲೆಯಲ್ಲಿ ದಿನವೊಂದಕ್ಕೆ 9,000 ಮಂದಿಯ ಕೋವಿಡ್ ಪರೀಕ್ಷೆಗೆ ಗುರಿ ಇಟ್ಟುಕೊಂಡಿದ್ದು, ಪ್ರತೀದಿನ ಏಳು ಸಾವಿರದಿಂದ ಎಂಟು ಸಾವಿರದವರೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ತಂಡವನ್ನು ರಚಿಸಿ, ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗುವುದು. ಇದರೊಂದಿಗೆ ಕೋವಿಡ್ ದೃಢವಾದವರಿಗೆ ಹೋಂ ಐಸೊಲೆಷನ್ನೊಂದಿಗೆ ಕೋವಿಡ್ ಕೇರ್ ಸೆಂಟರ್ಗೆ ಕಡ್ಡಾಯವಾಗಿ ದಾಖಲಾಗಲು ಸೂಚಿಸಲಾಗುವುದು. ಜಿಲ್ಲೆಯ ಗಡಿಭಾಗದ ನಾಲ್ಕು ಕೇಂದ್ರಗಳಲ್ಲಿ ಕೇರಳದಿಂದ ಬರುವವರ ತಪಾಸಣೆಗೆ ಚೆಕ್ ಪಾಯಿಂಟ್ ಆರಂಭಿಸಲಾಗಿದೆ. ನಿತ್ಯ ಓಡಾಡುವವರು ಆರ್ಟಿಪಿಸಿಆರ್ ವರದಿಯಿಲ್ಲದೆ, ಲಸಿಕೆ ಪಡೆಯದೆ ಬರುವ ಮಂದಿಯ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ’ ಎಂದರು.

ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ‘ಜಿಲ್ಲೆಯಾದ್ಯಂತ ಆರು ಚೆಕ್ ಪೋಸ್ಟ್ಗಳು 24 ಗಂಟೆಗಳ ಕಾಲ ಕಾರ್ಯಾಚರಿಸುತ್ತಿದೆ. ತಲಪಾಡಿ ಪ್ರಮುಖ ಚೆಕ್ಪೋಸ್ಟ್ ಆಗಿರುವುದರಿಂದ ಹೆಚ್ಚುವರಿ ಪೊಲೀಸರು, ಆರೋಗ್ಯ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೈಲ್ವೆ ನಿಲ್ದಾಣ, ಒಳ ರಸ್ತೆಗಳಲ್ಲಿಯೂ ಚೆಕ್ ಪಾಯಿಂಟ್ ಆರಂಭಿಸಲಾಗಿದೆ. ಪಾಸಿಟಿವಿಟಿ ರೇಟ್ ಜಾಸ್ತಿಯಾಗಿರುವುದರಿಂದ ಹಿರಿಯ ಅಧಿಕಾರಿಗಳ ಆದೇಶದಂತೆ ಪ್ರತ್ಯೇಕ ಮಾರ್ಗಸೂಚಿಗಳ ಜಾರಿ ಶೀಘ್ರದಲ್ಲೇ ಆಗಲಿದೆ. ಮತ್ತೆ ಲಾಕ್ಡೌನ್ ಮಾಡುವ ಪರಿಸ್ಥಿತಿ ಬಾರದಂತೆ ಜನರೇ ಜಾಗೃತರಾಗಿರಬೇಕಿದೆ’ ಎಂದರು.

ತಲಪಾಡಿ ಒಳ ರಸ್ತೆ ದೇವಿನಗರಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಶುಕ್ರವಾರದಿಂದಲೇ 24 ಗಂಟೆಯ ಕಾಲ ಚೆಕ್ ಪೋಸ್ಟ್ ಆರಂಭಿಸಲು ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಡಿಸಿಪಿ ಹರಿರಾಂ ಶಂಕರ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ತಹಶೀಲ್ದಾರ್ ಗುರುಪ್ರಸಾದ್, ಟಿಎಚ್ಒ ಡಾ.ಸುಜಯ್ ಭಂಡಾರಿ, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.