ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೆಐಒಸಿಎಲ್‌ನಿಂದ ಕಬ್ಬಿಣದ ಉಂಡೆ ಉತ್ಪಾದನೆ ಪುನರಾರಂಭ

Published 10 ನವೆಂಬರ್ 2023, 6:16 IST
Last Updated 10 ನವೆಂಬರ್ 2023, 6:16 IST
ಅಕ್ಷರ ಗಾತ್ರ

ಮಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಪಣಂಬೂರು ಘಟಕದಲ್ಲಿ (ಕೆಐಒಸಿಎಲ್) ಕಬ್ಬಿಣದ ಉಂಡೆಗಳ ಉತ್ಪಾದನೆಯು ಬುಧವಾರದಿಂದ ಪುನರಾರಂಭಗೊಂಡಿದೆ.

ಕಚ್ಚಾವಸ್ತು ಅಲಭ್ಯತೆಯಿಂದಾಗಿ ಅಕ್ಟೋಬರ್ 25ರಿಂದ ಘಟಕದಲ್ಲಿ ಕಬ್ಬಿಣದ ಉಂಡೆಗಳ (ಪೆಲೆಟ್) ಉತ್ಪಾದನೆ ಸ್ಥಗಿತಗೊಂಡಿತ್ತು. 2022 ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಕಬ್ಬಿಣದ ಉಂಡೆಗಳ ಮೇಲೆ ಶೇ 45ರಷ್ಟು ರಫ್ತು ಸುಂಕ ವಿಧಿಸಿದಾಗ ಕೆಐಒಸಿಎಲ್ ಉತ್ಪಾದನೆಯನ್ನು ನಿಲ್ಲಿಸಿತ್ತು. ಇದನ್ನು ವಾಪಸ್ ಪಡೆದ ಮೇಲೆ ಉತ್ಪಾದನೆ ಪುನಃ ಪ್ರಾರಂಭವಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT