ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಂಘದ ಕಚೇರಿ ಉದ್ಘಾಟನೆ

Last Updated 18 ಸೆಪ್ಟೆಂಬರ್ 2018, 11:11 IST
ಅಕ್ಷರ ಗಾತ್ರ

ಬೆಳ್ತಂಗಡಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ಇದರ ಬೆಳ್ತಂಗಡಿ ತಾಲ್ಲೂಕು ಸಮಿತಿಯ ನೂತನ ಕಚೇರಿಯು ಇಲ್ಲಿಯ ಧರ್ಮಶ್ರೀ ವಾಣಿಜ್ಯ ಸಂಕಿರ್ಣದಲ್ಲಿ ಶನಿವಾರ ಪ್ರಾರಂಭವಾಯಿತು.

ನೂತನ ಕಚೇರಿಯನ್ನು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ ಉದ್ಘಾಟಿಸಿ ಮಾತನಾಡಿ, ‘ಪ್ರಜಾಪ್ರಭುತ್ವ ರಾಷ್ಟ್ರದ ಆಡಳಿತವನ್ನು ಕಾರ್ಮಿಕ, ರೈತರ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ಅಂತವರನ್ನು ಬೆದರಿಸಿ ದಮನಿಸಲಾಗುತ್ತಿದೆ. ಇಂತಹ ಅಮಾನವೀಯ ಸ್ಥಿತಿಯ ವಿರುದ್ಧ ಕಾರ್ಮಿಕ ವರ್ಗ ಇನ್ನಷ್ಟು ಬಲಿಷ್ಠಗೊಳ್ಳಬೇಕಾಗಿದೆ. ಧರ್ಮ ದೇವರ ಹೆಸರಿನಲ್ಲಿ ಕಾರ್ಮಿಕ ವರ್ಗವನ್ನು ವಿಭಜಿಸಿ, ಹೊಡೆದಾಡುವ ನೀತಿಯ ಮೂಲಕ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕಾರ್ಮಿಕ ವರ್ಗವನ್ನು ಬೇರ್ಪಡಿಸುತ್ತಿವೆ. ರಾಜಕೀಯ ಅಧಿಕಾರ ಪಡೆಯಲು ಪ್ರಯತ್ನಿಸುವ ಇಂತಹ ಶಕ್ತಿಗಳ ಬಗ್ಗೆ ಕಾರ್ಮಿಕ ವರ್ಗ ಎಚ್ಚರಿಕೆಯಿಂದಿರಬೇಕು. ನೂತನ ಕಚೇರಿಯು ತಾಲ್ಲೂಕಿನ ಎಲ್ಲಾ ಕಾರ್ಮಿಕ ವರ್ಗಕ್ಕೆ ಬೆಳಕಾಗಲಿ’ ಎಂದರು.

ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಸಹಕಾರಿ ಸಂಘಧ ಅದಕ್ಷ ಹರಿದಾಸ್ ಎಸ್. ಎಂ. ಮಾತಾನಾಡಿ ಈ ಕಚೇರಿಯು ಕಾರ್ಮಿಕ ವರ್ಗದ ಕೇಂದ್ರವಾಗಿ ಬೆಳೆಯಲಿ ತಾಲೂಕಿನಲ್ಲಿ 25,000 ಕ್ಕೂಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದು ಅಂತಹ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳು ದೊರೆಯುವಂತಾಗಲಿ. ಕೆಲವರು ಕಾರ್ಮಿಕ ವರ್ಗವನ್ನು ದಾರಿ ತಪ್ಪಿಸುತ್ತಿದ್ದು ಈ ಬಗ್ಗೆ ಕಾರ್ಮಿಕ ವರ್ಗ ಜಾಗ್ರತಗೊಳ್ಳಬೇಕಾಗಿದೆ ಎಂದರು.

ಸಂಘದ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಶ್ರೀ ವಾಣಿಜ್ಯ ಸಂಕೀರ್ಣದ ಮಾಲೀಕ ಹಸನಬ್ಬ, ಸಂಘದ ಮುಖಂಡ ಹೈದರಾಲಿ ಕೊಯ್ಯೂರು, ಕೋಶಾಧಿಕಾರಿ ಪ್ರಭಾಕರ ತೋಟತ್ತಾಡಿ, ಉಪಾಧ್ಯಕ್ಷ ನಾರಾಯಣ ಪೂಜಾರಿ, ಪ್ರಾಂತ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ಮುಖಂಡ ಅನಿಲ್, ವಕೀಲೆ ಸುಕನ್ಯಾ ಉಪಸ್ಥಿತರಿದ್ದು, ಸಂಘದ ಪ್ರಧಾನ ಕಾರ್ಯಧರ್ಶಿ ವಸಂತ ನಡ ಸ್ವಾಗತಿಸಿ, ಶೇಖರ್ ಎಲ್ ಧನ್ಯವಾದ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT