ಬೆಳ್ತಂಗಡಿ: ‘ನಾಗರಿಕ ಸೇವಾ ಟ್ರಸ್ಟ್ ಆರಂಭದಿಂದಲೇ ಪ್ರಾಮಾಣಿಕ, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದೆ. ಸ್ವಾಮಿ ವಿವೇಕಾನಂದರ ಆದರ್ಶದೊಂದಿಗೆ ದೀನ ದಲಿತರ ಜತೆ ಕೆಲಸ ಮಾಡುತ್ತಿದೆ’ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಹೇಳಿದರು.

ಗುರುವಾಯನಕೆರೆಯಲ್ಲಿ ಬೆಳ್ತಂಗಡಿ ಸತ್ಯಶೋಧಕ ವೇದಿಕೆಯ ಪ್ರಥಮ ವಾರ್ಷಿಕ ಸಭೆ, ನೂತನ ಕಚೇರಿ ಹಾಗೂ ವಿದ್ಯಾಜ್ಯೋತಿ ಸಾವಿತ್ರಿಭಾಯಿ ಫುಲೆ ಮತ್ತು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾಗರಿಕ ಸೇವಾ ಟ್ರಸ್ಟ್ ದಲಿತರ ಶಿಕ್ಷಣಕ್ಕೆ ಸದಾ ಒತ್ತು ನೀಡುತ್ತಿದ್ದು, ದಲಿತರ ಉನ್ನತ ಶಿಕ್ಷಣಕ್ಕೂ ಗಣನೀಯ ಪ್ರೋತ್ಸಾಹ ನೀಡಿದೆ. ದಲಿತರ ಸ್ಥಿತಿಗತಿ ಅಧ್ಯಯನ ನಡೆಸಿದ ಸಂದರ್ಭ ದಲಿತ ಕುಟುಂಬಗಳು ಭೂ ಹಕ್ಕಿನಿಂದ ವಂಚಿತರಾಗಿರುವ ಮಹತ್ವದ ಚಾರಿತ್ರಿಕ ಚಿತ್ರಣ ಸಿಕ್ಕಿದ್ದು, ದಲಿತರು ಭೂ ಹಕ್ಕಿನ ಬಗ್ಗೆ ಜಾಗೃತರಾಗಿ ಹಕ್ಕನ್ನು ಪಡೆದುಕೊಳ್ಳುವವರೆಗೆ ಹೋರಾಟ ಮಾಡಬೇಕು’ ಎಂದು ಅವರು ಹೇಳಿದರು.

ಪತ್ರಕರ್ತ ಅಚುಶ್ರೀ ಬಾಂಗೇರು ಮಾತನಾಡಿದರು. ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಸುಕೇಶ್ ಕೆ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.

ದಲಿತರ ಭೂ ಹೋರಾಟ ಸಮಿತಿ ಸಂಚಾಲಕ ಎಂ.ಬಿ.ಕರಿಯ, ಸತ್ಯಶೋಧಕ ವೇದಿಕೆ ಕಾರ್ಯದರ್ಶಿ ಗಿರೀಶ್ , ಕೋಶಾಧಿಕಾರಿ ಯೋಗೀಶ್, ವಿಶ್ವನಾಥ ಕಳೆಂಜ, ಸತೀಶ್ ಉಜಿರೆ, ಹರೀಶ್ ಕುಕ್ಕಳ, ಸತೀಶ್ ಮಾರಿಗುಡಿ, ಹರೀಶ್, ಉಮೇಶ್ ಬೆಳಾಲ್, ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ಅಧ್ಯಕ್ಷ ಚೆನ್ನಕೇಶವ, ಮುಖಂಡರಾದ ಸಂಜೀವ ಆರ್, ದಸಂಸ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ರಮೇಶ್ ಆರ್, ಹೋರಾಟಗಾರ ಶೇಖರ್ ಎಲ್., ಬಾಬಿ ಎಂ.ಮಾಲಾಡಿ, ಶೇಖರ್ ಬಿ.ಕೆ. ಶೀನ ಪಿಲ್ಯ ಹಾಜರಿದ್ದರು.

ಮಂಗಳಾ ನಾಡಗೀತೆ ಹಾಡಿದರು. ಸುಷ್ಮಿತಾ ಮಾಲಾಡಿ ಸ್ವಾಗತಿಸಿ, ರೀಮಾ ಕಳೆಂಜ ನಿರೂಪಿಸಿದರು. ರಮ್ಯಾ ಮುದ್ದಿಗೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.