ಬುಧವಾರ, ಜನವರಿ 22, 2020
25 °C

ಮಣ್ಣಿನ ದಿಬ್ಬ ಕುಸಿತ:ಮೂವರು ಕಾರ್ಮಿಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಸಮೀಪದ ಒಡಿಯೂರು ಗುರುದೇವದತ್ತ ಸಂಸ್ಥಾನದ ಆವರಣದಲ್ಲಿ ಹೊಸ ಕಟ್ಟಡವೊಂದರ ನಿರ್ಮಾಣಕ್ಕೆ ಪಿಲ್ಲರ್‌ ಹಾಕಲು ಶನಿವಾರ ಗುಂಡಿ ತೆಗೆದು, ನೆಲ ಸಮತಟ್ಟು ಮಾಡುತ್ತಿದ್ದ ವೇಳೆ ಮೇಲಿನಿಂದ ಮಣ್ಣಿನ ದಿಬ್ಬ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಜೆಸಿಬಿ ಯಂತ್ರದಿಂದ ಗುಂಡಿ ತೆಗೆದಿದ್ದು, ಸಂಜೆ 5 ಗಂಟೆ ಸುಮಾರಿಗೆ ನಾಲ್ವರು ಕಾರ್ಮಿಕರು ಗುಂಡಿಯೊಳಕ್ಕೆ ಇಳಿದು ನೆಲ ಸಮತಟ್ಟು ಮಾಡುತ್ತಿದ್ದರು. ಆಗ ಮೇಲಿನಿಂದ ಬೃಹತ್‌ ಗಾತ್ರದ ಮಣ್ಣಿನ ದಿಬ್ಬ ಕುಸಿದು ಅವರ ಮೇಲೆ ಬಿತ್ತು. ಮಣ್ಣಿನೊಳಕ್ಕೆ ಸಿಲುಕಿದ ಮೂವರು ಸ್ಥಳದಲ್ಲೇ ಮೃತಪಟ್ಟರು. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಟ್ಲ ಸಮೀಪದ ಆಲಂಗಾರು ನಿವಾಸಿ ಬಾಲಪ್ಪ ನಾಯ್ಕ, ಮುರುವ ನಿವಾಸಿ ಪ್ರಕಾಶ್ ಮತ್ತು ವಿಟ್ಲಪಡ್ನೂರು ಗ್ರಾಮದ ಕಾಪು ಮಜಲು ನಿವಾಸಿ ರಮೇಶ್‌ ಮಣ್ಣಿನೊಳಗೆ ಸಿಲುಕಿ ಮೃತಪಟ್ಟಿದ್ದರು. ಶವಗಳನ್ನು ಹೊರತೆಗೆಯಲಾಗಿದೆ. ಉಳ್ಳಾಲ ನಿವಾಸಿ ಪ್ರಭಾಕರ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು