ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಲೈಫ್ ಇನ್ ಎ ಬೌಲ್’ ಚಿತ್ರ ಪ್ರದರ್ಶನ

Published : 18 ಸೆಪ್ಟೆಂಬರ್ 2024, 7:51 IST
Last Updated : 18 ಸೆಪ್ಟೆಂಬರ್ 2024, 7:51 IST
ಫಾಲೋ ಮಾಡಿ
Comments

ಮಂಗಳೂರು: ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ‘ಲೈಫ್ ಇನ್ ಎ ಬೌಲ್– ಸರಣಿ ಕೋಲ್ಕತ್ತ’ ಛಾಯಾಚಿತ್ರ ಪ್ರದರ್ಶನ ಅನಾವರಣಗೊಂಡಿದ್ದು, ಸೆ.22ರವರೆಗೆ ಸಾರ್ವನಿಕ ವೀಕ್ಷಣೆಗೆ ಅವಕಾಶವಿದೆ.

ಚಿತ್ರಮಯ ಬೆಂಗಳೂರು, ನಗರದ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ, ಮೈಂಡ್‌ ಕ್ರಾಫ್ಟ್‌ ಸ್ಟುಡಿಯೋಸ್, ಎಸ್.ಕ್ಯೂಬ್ ಆರ್ಟ್ ಗ್ಯಾಲರಿ ಸಹಕಾರದಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ಛಾಯಾಗ್ರಾಹಕರಾದ ಪ್ರಕಾಶ್ ಬ್ರೆಗ್ಸ್ ಮತ್ತು ಸಚಿನ್ ಶೆಟ್ಟಿ ಸೆರೆ ಹಿಡಿದಿರುವ ಚಿತ್ರಗಳು ಇವೆ. ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಬಹುದು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬರಹಗಾರ ಜಯಂತ್ ಕೋಡ್ಕಣಿ, ಛಾಯಾಗ್ರಾಹಕರಾದ ಗುರುದತ್ ಕಾಮತ್, ಯಜ್ಞೇಶ್ವರ ಆಚಾರ್ಯ (ಯಜ್ಞ) ಇದ್ದರು. ‘ಲೈಫ್ ಇನ್ ಎ ಬೌಲ್’ ಒಕ್ಕೂಟದ ಸಹ ಸಂಸ್ಥಾಪಕ ಪುರಂದರ ಚೌಧರಿ ಪ್ರದರ್ಶನದ ಬಗ್ಗೆ ತಿಳಿಸಿದರು. ನೇಮಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT