ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇರಳಕಟ್ಟೆ: ಅಡುಗೆ ಅನಿಲ ಸೋರಿಕೆ- ಬೆಂಕಿ ಅನಾಹುತ

Published 18 ಏಪ್ರಿಲ್ 2024, 14:48 IST
Last Updated 18 ಏಪ್ರಿಲ್ 2024, 14:48 IST
ಅಕ್ಷರ ಗಾತ್ರ

ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ದೇರಳಕಟ್ಟೆಯಲ್ಲಿ ರಸ್ತೆಬದಿಯಲ್ಲಿ ಇರಿಸಲಾದ 'ಸ್ವೀಟ್ ಕಾರ್ನರ್ ಸ್ಟಾಲ್' ಎಂಬ ತಳ್ಳುಗಾಡಿಯ ಅಡುಗೆ ಅನಿಲ ಸಿಲಿಂಡರ್ ನಲ್ಲಿ ಅನಿಲ ಸೋರಿಕೆ ಉಂಟಾಗಿ ಗುರುವಾರ ಸಂಜೆ ತಳ್ಳುಗಾಡಿಗೆ ಬೆಂಕಿ ಹೊತ್ತಿಕೊಂಡಿದೆ.

ಸ್ಟಾಲ್ ನಲ್ಲಿ ಬಶೀರ್ ಎಂಬವರು ವ್ಯಾಪಾರದಲ್ಲಿ ತೊಡಗಿದ್ದ ಸಂದರ್ಭ ಅನಿಲ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳದಲ್ಲಿದ್ದ ಗ್ರಾಹಕರು ಹಾಗೂ ಬಷೀರ್ ಓಡಿ ಪಾರಾದರು. ಸಾರ್ವಜನಿಕರು ಹೊಯ್ಗೆ ಎರಚಿ, ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ತಳ್ಳುಗಾಡಿಯು ಭಾಗಶಃ ಸುಟ್ಟುಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT